AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Omicron Symptoms : ಈ ಲಕ್ಷಣಗಳು ಕಂಡುಬಂದರೆ ಓಮಿಕ್ರಾನ್​ ಸೋಂಕು ತಗುಲಿರಬಹುದು: ಎಚ್ಚರಿಕೆಯಿಂದಿರಿ

ಎರಡು ಡೋಸ್​ ಲಸಿಕೆ  ಪಡೆದವರಲ್ಲೂ ಓಮಿಕ್ರಾನ್​ ಪಾಸಿಟಿವ್​ ವರದಿ ಬರುತ್ತಿದೆ. ಕೊರೋನಾ ಸೋಂಕಿನ ಲಕ್ಷಣಗಳನ್ನೇ ಹೋಲುವ ಓಮಿಕ್ರಾನ್​ ಸೋಂಕಿತರ ಲಕ್ಷಣಗಳು ಜನರನ್ನು ಆತಂಕಕ್ಕೀಡು ಮಾಡಿದೆ.

Omicron Symptoms : ಈ ಲಕ್ಷಣಗಳು ಕಂಡುಬಂದರೆ ಓಮಿಕ್ರಾನ್​ ಸೋಂಕು ತಗುಲಿರಬಹುದು: ಎಚ್ಚರಿಕೆಯಿಂದಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Dec 29, 2021 | 3:31 PM

ಕೊರೋನಾ ಆತಂಕದ ನಡುವೆ ಇದೀಗ ಓಮಿಕ್ರಾನ್​ ಆತಂಕ ಶುರುವಾಗಿದೆ. ಎರಡು ಡೋಸ್ ವಾಕ್ಸಿನ್​ ಪಡೆದರೂ ಓಮಿಕ್ರಾನ್​  ಸೋಂಕು ತಗುಲುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿಕೊಂಡ ಸೋಂಕು ಒಂದಾದ ಮೇಲೆ ಒಂದು ದೇಶಕ್ಕೆ ಹರಡುತ್ತಿದೆ. ಕೊರೋನಾ ರೂಪಾಂತರಿ ಓಮಿಕ್ರಾನ್​ ಕೊರೋನಾಗಿಂತ 10 ಪಟ್ಟು ವೇಗವಾಗಿ ಹರಡಬಲ್ಲದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಈಗ ಜಗತ್ತಿನೆಲ್ಲೆಡೆ ಓಮಿಕ್ರಾನ್​ ಹರಡುವ ಆತಂಕ ಹೆಚ್ಚಾಗಿದೆ. ಈಗಾಗಲೇ ದೇಶದಲ್ಲಿ ಇಂದಿನವರೆಗೆ 781 ಓಮಿಕ್ರಾನ್​ ಪ್ರಕರಣಗಳು ದೃಢಪಟ್ಟಿವೆ. ಇನ್ನೊಂದು ಆತಂಕಕಾರಿ ವಿಷಯವೆಂದರೆ ಎರಡು ಡೋಸ್​ ಲಸಿಕೆ  ಪಡೆದವರಲ್ಲೂ ಓಮಿಕ್ರಾನ್​ ಪಾಸಿಟಿವ್​ ವರದಿ ಬರುತ್ತಿದೆ. ಕೊರೋನಾ ಸೋಂಕಿನ ಲಕ್ಷಣಗಳನ್ನೇ ಹೋಲುವ ಓಮಿಕ್ರಾನ್​ ಸೋಂಕಿತರ ಲಕ್ಷಣಗಳು ಜನರನ್ನು ಆತಂಕಕ್ಕೀಡು ಮಾಡಿದೆ. ಹಾಗಾದರೆ ಓಮಿಕ್ರಾನ್ ಸೋಂಕಿನ ಲಕ್ಷಣಗಳು ಹೇಗಿರುತ್ತವೆ ಎಂದು ನೀವು ತಿಳಿದುಕೊಳ್ಳಲೇ ಬೇಕು. ಇಲ್ಲಿದೆ ನೋಡಿ ಮಾಹಿತಿ

ಈ 7 ಲಕ್ಷಣಗಳು ನಿಮಗೆ ಓಮಿಕ್ರಾನ್ ಸೋಂಕು ತಗುಲಿದೆ ಎನ್ನುವುದನ್ನು ಹೇಳುತ್ತದೆ.

ಕೆಮ್ಮು ಸಾಮಾನ್ಯವಾಗಿ ದೇಹದಲ್ಲಿ ಕಫ ಶೇಖರೆಗೊಂಡು ಕೆಮ್ಮು ಕಾಣಿಸಿಕೊಳ್ಳುತ್ತದೆ. ಅವರನ್ನು ಪರೀಕ್ಷಿಸಿದಾಗ ಓಮಿಕ್ರಾನ್​ ಇರುವುದು ದೃಢಪಟ್ಟಿದೆ. ಹೀಗಾಗಿ, ಕೆಮ್ಮು ಕೂಡ ಓಮಿಕ್ರಾನಿನ ಮೊದಲ ಲಕ್ಷಣವಾಗಿದೆ. ಆದ್ದರಿಂದ ಈ ನಿಮಗೆ 2 ದಿನಕ್ಕಿಂತ ಹೆಚ್ಚು ಕೆಮ್ಮು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.

ಮೂಗಿನಲ್ಲಿ ಸೋರುವಿಕೆ ಉಸಿರು ಕಟ್ಟುವುದು ಅಥವಾ ನಿರಂತರವಾಗಿ ಮೂಗಿನಲ್ಲಿ ಸೋರಿಕೆಯಾಗುತ್ತಿದ್ದರೆ ಅದನ್ನು  ನಿರ್ಲಕ್ಷಿಸಬೇಡಿ. ಏಕೆಂದರೆ ಯುಕೆಯ ಒಂದು ಅಧ್ಯಯನದ ಪ್ರಕಾರ ಶೀತ, ತಲೆನೋವು, ದಣಿವು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಓಮಿಕ್ರಾನ್​ ಸೋಂಕು ದೃಢಪಡುತ್ತಿದೆ. ಈಗಂತೂ ಚಳಿಗಾಲ ಶೀತದಿಂದ ಬಳಲುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಿಮ್ಮನ್ನು ನೀವು ಬೆಚ್ಚಗಿರಿಸಿಕೊಳ್ಳಿ.

ಆಯಾಸ ಸಾಮಾನ್ಯವಾಗಿ ಶೀತ, ನೆಗಡಿಯಾದರೆ ಆಯಾಸ ಸಾಮಾನ್ಯ. ಆದರೆ ಓಮಿಕ್ರಾನ್​ ಲಕ್ಷಣವಾಗಿದ್ದರೆ ನಿಮಗೆ ಅತಿಯಾದ  ಸುಸ್ತು ಕಾಣಿಸಿಕೊಳ್ಳುತ್ತದೆ. ಈ ರೀತಿಯ  ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಒಳಿತು. ಮತ್ತು ಸರಿಯಾದ ಸಮಯ ಕೂಡ ಹೌದು.

ಅತಿಯಾದ ಗಂಟಲು ನೋವು ಕೆಲವರಿಗೆ ಹವಾಮಾನದ ಬದಲಾವಣೆ, ಅಹಾರದಲ್ಲಿ ವ್ಯತ್ಯಾಸವಾದರೂ ಗಂಟಲು ನೋವು ಕಾಣಿಸಕೊಳ್ಳುತ್ತದೆ. ಆದರೆ ನೆನಪಿಡಿ ಅತಿಯಾದ ಗಂಟಲು ನೋವು ಕೂಡ ಓಮಿಕ್ರಾನ್​ ಸೋಂಕಿನ ಒಂದು ಲಕ್ಷಣವಾಗಿದೆ. ಹೀಗಾಗಿ ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಬಿಸಿ ನೀರಿನಿಂದ ಗಂಟಲು ಸ್ವಚ್ಛಗೊಳಿಸಿ.

ತಲೆನೋವು ತಲೆನೋವು ಹಲವು ಕಾರಣಗಳಿಗೆ ಬರುತ್ತದೆ. ಅದೇ ರೀತಿ ಓಮಿಕ್ರಾನ್​ ಸೋಂಕಿನ ಲಕ್ಷಣವೂ ಹೌದು . ಆದ್ದರಿಂದ ತೆಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರವಹಿಸಿರಿ.

ಸ್ನಾಯುಗಳಲ್ಲಿ ನೋವು ನಿಮಗೆ ಸ್ನಾಯುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದರೆಡೆಗೆ ಹೆಚ್ಚು ಗಮನ ನೀಡಿ. ಚಳಿಗಾಲದಲ್ಲಿ ಸ್ನಾಯು, ಕೀಲು ನೋವು ಸಹಜ. ಆದರೆ ಓಮಿಕ್ರಾನ್​ ಕೂಡ ಅದೇ ಲಕ್ಷಣವನ್ನು ಹೊಂದಿದೆ. ಅಲ್ಲದೆ ಕೋರೋನಾ ಸೋಂಕಿನ ಲಕ್ಷಣವೂ ಆಗಿದೆ. ಕೊರೋನಾ ಸೋಂಕಿತರಲ್ಲಿ ಚೇತರಿಕೆಯ ಬಳಿಕವೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ.

ಜ್ವರ ಕೊರೋನಾ ಸೋಂಕು  ಕಾಣಿಸಿಕೊಂಡಾಗಲೂ ದೇಹದ ತಾಪಮಾನ  ಹೆಚ್ಚು. ಹೀಗಾಗಿ ಕೊರೋನಾ ಸೋಂಕಿತರಲ್ಲೂ ಜ್ವರ ಕಾಣಿಸಿಕೊಳ್ಳುತ್ತದೆ. ಇದು ಓಮಿಕ್ರಾನ್​ ಲಕ್ಷಣ ಕೂಡ ಹೌದು. ವಾಕ್ಸಿನ್​ ಪಡೆದವರಲ್ಲೂ ಈ ಮೇಲೆನ ಲಕ್ಷಣಗಳು ಕಂಡುಬಂದರೆ ಸೋಂಕು ತಗುಲಿದೆ ಎಂದರ್ಥ ಎಂದು ವೈದ್ಯರ ಮುನ್ಸೂಚನೆ ಉಲ್ಲೇಖಿಸಿ ವರದಿ ತಿಳಿಸಿದೆ.

ಇದನ್ನೂ ಓದಿ:

Omicron: ಸಾಮಾನ್ಯ ಶೀತ, ನೆಗಡಿಯೆಂದು ನಿರ್ಲಕ್ಷ್ಯ ಬೇಡವೇ ಬೇಡ, ಅದು ಕೊವಿಡ್​ 19 ಸೋಂಕೇ ಆಗಿರಬಹುದು: ಯುಕೆ ಸಂಶೋಧಕರಿಂದ ಎಚ್ಚರಿಕೆ

Published On - 2:55 pm, Wed, 29 December 21

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್