Healthy heart: ಇವು ಹೃದಯದ ಆರೋಗ್ಯ ಕಾಪಾಡುವ ಚಹಾಗಳು

| Updated By: Digi Tech Desk

Updated on: Jan 31, 2022 | 12:13 PM

Teas for healthy heart: ಬ್ಲಾಕ್​ಟೀ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ತಜ್ಞರು. ಹೌದು, ಬ್ಲಾಕ್​ಟೀಯಲ್ಲಿರುವ ಪ್ಲೇವನಾಯ್ಡ್​ಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ.

Healthy heart: ಇವು ಹೃದಯದ ಆರೋಗ್ಯ ಕಾಪಾಡುವ ಚಹಾಗಳು
ಚಹಾ
Follow us on

ಭಾರತದಲ್ಲಿ ಹಲವರಿಗೆ ಬೆಳಗ್ಗೆ ಒಂದು ಕಪ್​ ಟೀ (Tea) ಕುಡಿಯದೆ ದಿನವೇ ಆರಂಭವಾಗುವುದಿಲ್ಲ. ಹೀಗಿದ್ದಾಗ ಕೆಫಿನ್(Caffeine )​ ಅಂಶವಿರುವ ಟೀ ಕುಡಿಯುವುದರಿಂದ ದೇಹಕ್ಕೆ ಹಾನಿ ಎನ್ನುವ ಮಾತು ಕೇಳಿಬರುತ್ತವೆ. ಆದರೆ  ಸರಿಯಾದ ರೀತಿಯಲ್ಲಿ ಸರಿಯಾದ ವಿಧದ ಟೀಯನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗುತ್ತದೆ. ಹೌದು ಗ್ರೀನ್​ ಟೀ (Green Tea), ಬ್ಲಾಕ್​ ಟೀ (Black Tea) ಯಂತಹ ಆರೋಗ್ಯಯುತ ಅಂಶಗಳನ್ನು ಹೊಂದಿರುವ ಟೀ ಸೇವನೆಯಿಂದ ಹೃದಯ ಸಂಬಂಧೀ ಕಾಯಿಲೆ ಸೇರಿದಂತೆ ಹಲವು ರೋಗಗಳನ್ನು ತಡೆಗಟ್ಟುತ್ತದೆ ಎನ್ನುತ್ತಾರೆ ತಜ್ಞರು. ಹಾಗಾದರೆ ಯಾವೆಲ್ಲಾ ಟೀಗಳು ದೇಹಕ್ಕೆ ಒಳ್ಳೆಯದು? ಇಲ್ಲಿದೆ ನೋಡಿ ಫೋಟೋ ಸಹಿತ ಮಾಹಿತಿ.

ಬ್ಲಾಕ್​​ ಟೀ

ಬ್ಲಾಕ್​ಟೀ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ತಜ್ಞರು. ಹೌದು, ಬ್ಲಾಕ್​ಟೀಯಲ್ಲಿರುವ ಪ್ಲೇವನಾಯ್ಡ್​ಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಜಗತ್ತಿನಾದ್ಯಂತ ಪ್ರಚಲಿತದಲ್ಲಿರುವ ಬ್ಲಾಕ್​ ಟೀ ಹಲವು ಆರೋಗ್ಯಯುತ ಗುಣಗಳು ಹೊಂದಿದೆ. ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಗ್ರೀನ್​ ಟೀ

ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್​ ಬಿ2 ಮತ್ತು ವಿಟಮಿನ್​ ಇ ಅಂಶ ಗ್ರೀನ್​​ ಟೀಯಲ್ಲಿದೆ. ಹೀಗಾಗಿ ಚರ್ಮದ ಸುರಕ್ಷತೆಯಲ್ಲಿ ಗ್ರೀನ್​ ಟೀ ಮಹತ್ವದ ಪಾತ್ರವಹಿಸುತ್ತದೆ. ತಜ್ಞರ ಪ್ರಕಾರ ಪ್ರತಿದಿನ ಗ್ರೀನ್​ ಟೀಯನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಗ್ರೀನ್​ ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್​ ಅಂಶಗಳು ಅಧಿಕ ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುತ್ತವೆ ಎನ್ನಲಾಗಿದೆ. ಅಲ್ಲದೆ ಗ್ರೀನ್​ ಟೀ ಚರ್ಮದ ಆರೋಗ್ಯಕ್ಕೂ ಒಳಿತು.

ವೈಟ್​ ಟೀ

ವೈಟ್​ ಟೀಯನ್ನು ಅತ್ಯಂತ ಶುದ್ಧವಾದ ಟೀ ಎಂದು ಪರಿಗಣಿಸಲಾಗಿದ್ದು, ಇದ ಹೃದಯದ ಆರೋಗ್ಯಕ್ಕೂ ಉತ್ತಮ ಎನ್ನಲಾಗಿದೆ. ರಕ್ತ ಹೆಪ್ಪುಗಟ್ಟುವುದು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ವೈಟ್​ ಟೀ ನಿವಾರಿಸುತ್ತದೆ ಎನ್ನುತ್ತಾರೆ ತಜ್ಞರು. ಕ್ಯಾಮೆಲಿಯಾ ಸಿನೆನ್ಸಿಸ್ ಎನ್ನುವ ಸಸ್ಯದಿಂದ ತಯಾರಿಸುವ ಈ ಟೀ ಸೇವನೆ ಹೃದಯಕ್ಕೆ ಉತ್ತಮವಾಗಿದೆ.

ಊಲಾಂಗ್ ಟೀ

ಕೊರಿನರಿ ಹೃದಯದ ಸಮಸ್ಯೆ ಇರುವವರಿಗೆ ಊಲಾಂಗ್​ ಟೀ ಸೇವನೆ ಉತ್ತಮವಾಗಿದೆ ಎನ್ನಲಾಗಿದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್​ ಅನ್ನು ಸಮತೋಲನದಲ್ಲಿಡುತ್ತದೆ. ಜತಗೆ ದೇಹವನ್ನು ಬೆಚ್ಚಗಿರುಸತ್ತದೆ ಎನ್ನುತ್ತಾರೆ ತಜ್ಞರು. ಆದರೆನಿಮ್ಮ ಡಯೆಟ್​ ಪಟ್ಟಿಯಲ್ಲಿ ಊಲಾಂಗ್​ ಟೀಯನ್ನು ಸೇರಿಸಿಕೊಳ್ಳ ಮೊದಲು ವೈದ್ಯರನ್ನು ಸಂಪರ್ಕಿಸಿ.

ಕ್ಯಾಮೋಮೈಲ್​ ಟೀ


ಹೃದಯದ ಕಾಯಿಲೆ ಇರುವವರಿಗೆ ಕ್ಯಾಮೋಮೈಲ್​ ಟೀ ಉತ್ತಮ ಪಾನೀಯವಾಗಿದೆ. ಚೆನ್ನಾಗಿ ನಿದ್ದೆ ಬರಲು ಈ ಹರ್ಬಲ್​ ಟೀ ಸಹಾಯಕವಾಗಿದೆ. ಕ್ಯಾಮೋಮಯಲ್​ ಎನ್ನುವ ಹೂಗಳಿಂದ ತಯಾರಿಸುವ ಈ ಟೀ ಶೂನ್ಯ ಕೆಫಿನ್​ ಅಂಶಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಹರದಯದ ಸುರಕ್ಷತೆ ಈ ಟೀ ಸಹಾಯ ಮಾಡುತ್ತದೆ.

ಜಿನ್ಸಿಂಗ್​ ಟೀ

ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಬಳಕೆ ಮಾಡುವ ಗಿಡಮೂಲಿಕೆಗಳಲ್ಲಿ ಜಿನ್ಸಿಂಗ್​ ಕೂಡ ಒಂದು. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜಿನ್ಸಿಂಗ್​ಗಳು ಹೃದಯವನ್ನೂ ಸುರಕ್ಷಿತವಾಗಿಡುತ್ತದೆ. ಅಧ್ಯಯನದ ಪ್ರಕಾರ ಕ್ಯಾನ್ಸರ್​ ಮನಿಯಂತ್ರಣಕ್ಕೂ ಜಿನ್ಸಿಂಗ್​ ಟೀ ನೆರವಾಗಲಿದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ ನೌ ನ ವರದಿ ಆಧರಿಸಿ ಮಾಹಿತಿಯನ್ನು ನೀಡಲಾಗಿದೆ)

ಇದನ್ನೂ ಓದಿ:

ಹೃದಯ ಆರೋಗ್ಯವಾಗಿದ್ದರೆ ಜೀವನವೂ ಸುಂದರ; ಈ ಕ್ರಮಗಳನ್ನು ಅನುಸರಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

Published On - 7:36 am, Mon, 31 January 22