ಇತ್ತೀಚೆಗೆ ಅನೇಕ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹವು ಕಡಿಮೆ ಇನ್ಸುಲಿನ್ ಬಿಡುಗಡೆ ಮಾಡಿದಾಗ ಮಧುಮೇಹದ ಸಮಸ್ಯೆ ಬರುತ್ತದೆ. ಸ್ಥೂಲಕಾಯದ ಸಮಸ್ಯೆಗಳು ಮತ್ತು ಬದಲಾಗುತ್ತಿರುವ ಜೀವನಶೈಲಿಯೊಂದಿಗೆ ಒತ್ತಡ, ಮಧುಮೇಹದ ಅಪಾಯವು ಇಂದಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಒಮ್ಮೆ ಮಧುಮೇಹಕ್ಕೆ ಗುರಿಯಾದರೆ ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟ. ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಲ್ಳುವುದರೊಂದಿಗೆ ಸಹಬಾಳ್ವೆ ನಡೆಸಬೇಕಾಗುತ್ತದೆ. ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಲು ಹೆಚ್ಚಿನವರು ಆಯುರ್ವೇದ, ಮನೆಮದ್ದುಗಳ ಮೊರೆ ಹೋಗುತ್ತಾರೆ. ವಿಶೇಷವಾಗಿ ಮನೆಯಲ್ಲಿರುವ ಕೆಲವು ಗಿಡಗಳಿಂದಲೇ ಈ ಸಮಸ್ಯೆಯನ್ನು ನಿವಾರಿಸಬಹುದು. ಅವುಗಳು ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅಲೋವೆರಾ
ಅಲೋವೆರಾ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವ ಕೆಲವು ಅಂಶಗಳನ್ನು ಒಳಗೊಂಡಿದೆ. ಅಲೋವೆರಾ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಲು ರಾಮಬಾಣವಾಗಿ ಕೆಲಸ ಮಾಡುತ್ತದೆ.
ಇನ್ಸುಲಿನ್ ಗಿಡ
ಆಯುರ್ವೇದದಲ್ಲಿ ಇನ್ಸುಲಿನ್ ಸಸ್ಯ ಬಹಳ ಮುಖ್ಯ. ಮಧುಮೇಹ ರೋಗಿಗಳಿಗೆ ಈ ಸಸ್ಯವು ತುಂಬಾ ಉಪಯುಕ್ತವಾಗಿದೆ. ಈ ಗಿಡದ ಎಲೆಗಳು ಹುಳಿಯಾಗಿರುತ್ತವೆ. ಈ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು.
ಸ್ಟೀವಿಯಾ ಸಸ್ಯ
ಮಧುಮೇಹ ರೋಗಿಗಳಿಗೆ ಸ್ಟೀವಿಯಾ ಸಸ್ಯವು ತುಂಬಾ ಉಪಯುಕ್ತವಾಗಿದೆ. ಇದರ ಎಲೆಗಳು ಸಿಹಿಯಾಗಿರುತ್ತವೆ. ಈ ಎಲೆಗಳನ್ನು ಒಣಗಿಸಿ ಚಹಾ ಮತ್ತು ಜ್ಯೂಸ್ಗೆ ಸಕ್ಕರೆಯಂತೆ ಬಳಸಬಹುದು. ಇದರ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಉಪಯುಕ್ತವಾಗಿವೆ. ಇದು ಶೂನ್ಯ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಲ್ಲದೆ ಮಧುಮೇಹ ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ.
ಬೇವಿನ ಎಲೆಗಳು
ಆಯುರ್ವೇದದಲ್ಲಿ ಬೇವಿನ ಎಲೆಗಳು ಬಹಳ ಮುಖ್ಯ. ಬೇವಿನ ಹಸಿರು ಎಲೆಗಳು ಗ್ಲೈಕೋಸೈಡ್‌ಗಳನ್ನು ಹೊಂದಿರುತ್ತವೆ. ಇದು ಅನೇಕ ವಿರೋಧಿ ವೈರಸ್ ಗುಣಗಳನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಇವುಗಳು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ನೇರಳೆ ಎಲೆ
ನೇರಳೆ ಎಲೆಗಳು ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇವು ಪ್ರಯೋಜನಕಾರಿ. ನೇರಳೆ ಬೀಜಗಳು ಮೂತ್ರಪಿಂಡಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಲ್ಲಿ ಗಾಯ ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದಕ್ಕಾಗಿ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನೊಂದಿಗೆ ಒಂದು ಚಮಚ ನೇರಳೆ ಎಲೆಯ ಪುಡಿಯನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ:
Health Tips: ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ
ಹಾಗಲಕಾಯಿ: ರುಚಿ ಕಹಿಯಾಗಿರಬಹುದು; ಚಹ ಮಾಡಿ ಸವಿದರೆ ಆರೋಗ್ಯ ಪ್ರಯೋಜನಗಳಿವೆ