Health Tips: ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ
ಬೆಳಿಗ್ಗೆ ಹೊತ್ತಿಗೆ ನಿಮ್ಮ ಮೊಬೈಲ್ನಿಂದ ನೀವು ಸಾಧ್ಯವಾದಷ್ಟು ದೂರ ಇರುವುದು ಸೂಕ್ತ. ಹಾಗಿದ್ದರೆ ಬೆಳಿಗ್ಗೆ ಎದ್ದ ಕೂಡಲೇ ನಾವು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬೆಳಿಗ್ಗೆ ಎದ್ದ ತಕ್ಷಣ ನಾವು ಅನುಸರಿಸುವ ಕೆಲವು ಅಭ್ಯಾಸಗಳು ದಿನವಿಡಿ ನಾವು ಹೆಚ್ಚು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಆದರೆ ಇತ್ತೀಚೆಗೆ ಜನರು ಬೆಳಿಗ್ಗೆ ಎಳುತ್ತಲೇ ತಮ್ಮ ಮೊಬೈಲ್ ನೋಡುವುದು, ವಾಟ್ಸಾಪ್, ಫೇಸ್ಬುಕ್ನಲ್ಲಿ ಯಾವ ರೀತಿಯ ಪೋಸ್ಟ್ಗಳಿವೆ ಎಂಬುವುದನ್ನು ನೋಡುವುದರಿಂದಲೇ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸ ಅಲ್ಲ. ಬೆಳಿಗ್ಗೆ ಹೊತ್ತಿಗೆ ನಿಮ್ಮ ಮೊಬೈಲ್ನಿಂದ ನೀವು ಸಾಧ್ಯವಾದಷ್ಟು ದೂರ ಇರುವುದು ಸೂಕ್ತ. ಹಾಗಿದ್ದರೆ ಬೆಳಿಗ್ಗೆ ಎದ್ದ ಕೂಡಲೇ ನಾವು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಎಚ್ಚರವಾದ ನಂತರ 20 ಸೆಕೆಂಡುಗಳ ಕಾಲ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿ ನೀವು ಎದ್ದಾಗ ಯಾವುದಾದರೂ ಒಂದು ಜೋಕ್ ಓದಿ. ನಂತರ ನಿಮ್ಮ ಮುಖವನ್ನು ಕನ್ನಡಿಯಲ್ಲಿ 20 ಸೆಕೆಂಡುಗಳ ಕಾಲ ನೋಡಿ ಮತ್ತು ಕಿರುನಗೆ ತೋರಿ. ನೀವು ಎದ್ದ ತಕ್ಷಣ, ಮನೆಯಲ್ಲಿರುವ ಎಲ್ಲರಿಗೂ ಮತ್ತು ನಿಮ್ಮ ಪಕ್ಕದಲ್ಲಿರುವವರಿಗೆ ಶುಭೋದಯ ಹೇಳಿ. ಇದು ನಿಮ್ಮ ಮನಸ್ಥಿತಿಯನ್ನು ಲವಲವಿಕೆಯಿಂದ ಇರಿಸುತ್ತದೆ.
ನಿಂಬೆ ರಸ ಬೆರಸಿದ ನೀರು ಕುಡಿಯಿರಿ ಹೆಚ್ಚಿನ ಜನರು ಬೆಳಿಗ್ಗೆ ಎದ್ದ ಕೂಡಲೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇವುಗಳಿಗಿಂತ ನಿಂಬೆ ರಸ ಬೆರೆಸಿದ ನೀರು ಅಥವಾ ಎಳನೀರನ್ನು ಕುಡಿಯುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ. ಇದು ದೇಹದಿಂದ ಜೀವಾಣು ವಿಷವನ್ನು ಶುದ್ಧಗೊಳಿಸುತ್ತದೆ ಅಥವಾ ಹೊರಹಾಕುತ್ತದೆ.
ಹಣ್ಣುಗಳನ್ನು ಸೇವಿಸಿ ಬೆಳಿಗ್ಗೆ ಹಣ್ಣುಗಳನ್ನು ತಿನ್ನುವುದು ತುಂಬಾ ಒಳ್ಳೆಯದು. ಹಣ್ಣುಗಳಲ್ಲಿರುವ ಪೋಷಕಾಂಶಗಳು ಮತ್ತು ಪ್ರೋಟೀನ್ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ದೇಹವನ್ನು ಸದೃಢವಾಗಿರಿಸುತ್ತವೆ. ಹಣ್ಣುಗಳನ್ನು ವಿಶೇಷವಾಗಿ ಬೆಳಿಗ್ಗೆ ತೆಗೆದುಕೊಂಡರೆ, ದಿನವಿಡೀ ಹೆಚ್ಚು ಉತ್ಸಾಹದಿಂದ ಇರಬಹುದು.
ಬೇಗ ಏಳುವುದು ಆರೋಗ್ಯಕ್ಕೆ ಒಳ್ಳೆಯದು ಹೆಚ್ಚಿನ ಜನರು ಬೆಳಿಗ್ಗೆ ತುಂಬಾ ತಡವಾಗಿ ಏಳುವ ಅಭ್ಯಾಸ ಹೊಂದಿರುತ್ತಾರೆ. ಬೆಳಿಗ್ಗೆ ಬೇಗನೆ ಎದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ನೀವು ಏಳುವ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಏಳುವುದನ್ನು ರೂಡಿಸಿಕೊಳ್ಳಿ. ಹಾಗೆಯೇ ಬೆಳಿಗ್ಗೆಯ ಸೂರ್ಯನ ಬಿಸಿಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ವ್ಯಾಯಾಮ ಮಾಡಿ ಎಚ್ಚರವಾದ ನಂತರ ವ್ಯಾಯಾಮ ಮಾಡುವುದು ನಿಮ್ಮ ಅಭ್ಯಾಸದಲ್ಲಿಲ್ಲದಿದ್ದರೆ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಆರೋಗ್ಯಕ್ಕೆ ಒಳ್ಳೆಯದು. ಜತೆಗೆ ದಿನವನ್ನು ಆರಾಮದಾಯಕವಾಗಿಸಲು ಬೆಳಿಗ್ಗೆ ನಿಮ್ಮ ನೆಚ್ಚಿನ ಹಾಡನ್ನು ಕೇಳಿ. ಸಂಗೀತವು ನಮ್ಮಲ್ಲಿ ಜಾಗೃತಿ ಮೂಡಿಸುತ್ತದೆ. ಹಾಗೆಯೇ ಸಂಗೀತವು ನಮ್ಮ ಮನಸ್ಥಿತಿಯನ್ನು ಸುಧಾರಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Desi Chutney: ಈ ಆರು ಪದಾರ್ಥಗಳಿಂದ ತಯಾರಿಸಿದ ಚಟ್ನಿ ರುಚಿಗೆ ತಕ್ಕಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ
Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?