ಹಾಗಲಕಾಯಿ: ರುಚಿ ಕಹಿಯಾಗಿರಬಹುದು; ಚಹ ಮಾಡಿ ಸವಿದರೆ ಆರೋಗ್ಯ ಪ್ರಯೋಜನಗಳಿವೆ

ಹಾಗಲಕಾಯಿಯಿಂದ ಚಹವನ್ನೂ ಸಹ ಮಾಡಿ ಸವಿಯಬಹುದು. ಕುಡಿಯಲು ಕೊಂಚ ಹಕಿ ಅನುಭವವಾಗಬಹುದು. ಆದರೆ ಇದರಲ್ಲಿನ ಔಷಧೀಯ ಗುಣಗಳಿಂದ ವೈರಸ್​ಗಳನ್ನು ನಾಶ ಪಡಿಸಲು ಸಹಾಯಕವಾಗುತ್ತದೆ.

ಹಾಗಲಕಾಯಿ: ರುಚಿ ಕಹಿಯಾಗಿರಬಹುದು; ಚಹ ಮಾಡಿ ಸವಿದರೆ ಆರೋಗ್ಯ ಪ್ರಯೋಜನಗಳಿವೆ
ಹಾಗಲಕಾಯಿ ಚಹ

ಅದೆಷ್ಟೋ ತರಕಾರಿಗಳು ರುಚಿ ಇಲ್ಲವೆಂದು ಸೇವಿಸುವುದೇ ಇಲ್ಲ. ಆದರೆ ಅವುಗಳಲ್ಲಿರುವ ಔಷಧೀಯ ಗುಣಗಳಿಂದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚು ಜನರು ಇಷ್ಟ ಪಡದೇ ಇರುವ ತರಕಾರಿಗಳಲ್ಲಿ ಹಾಗಲಕಾಯಿಯೂ ಒಂದು. ಹೆಚ್ಚು ಕಹಿಯಾಗಿರುತ್ತದೆ ಎಂಬ ಕಾರಣಕ್ಕೆ ಸೇವಿಸುವುದನ್ನು ತಪ್ಪಿಸುತ್ತಾರೆ. ಕಹಿಯಾಗಿದ್ದರೂ ಕೂಡಾ ಆರೋಗ್ಯ ಪ್ರಯೋಜನಗಳು ತುಂಬಾ ಇವೆ. ತಿಂಗಳಿಗೆ ಒಮ್ಮೆಯಾದರೂ ಹಾಗಲಕಾಯಿಯನ್ನು ತಿನ್ನುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಹಾಗಲಕಾಯಿಯಿಂದ ಚಹವನ್ನೂ ಸಹ ಮಾಡಿ ಸವಿಯಬಹುದು. ಕುಡಿಯಲು ಕೊಂಚ ಕಹಿ ಅನುಭವವಾಗಬಹುದು. ಆದರೆ ಇದರಲ್ಲಿನ ಔಷಧೀಯ ಗುಣಗಳಿಂದ ವೈರಸ್​ಗಳನ್ನು ನಾಶ ಪಡಿಸಲು ಸಹಾಯಕವಾಗುತ್ತದೆ. ಜತೆಗೆ ಸಣ್ಣ ಪುಟ್ಟ ಶೀತ, ಜ್ವರದಂತಹ ಲಕ್ಷಣಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾದರೆ ಹಾಗಲಕಾಯಿ ಚಹ ಮಾಡುವ ವಿಧಾನ ಹೇಗೆ? ಎಂಬುದನ್ನು ತಿಳಿಯಿರಿ.

*ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯಲು ಹಾಗಲಕಾಯಿ ಚಹ ಸಹಾಯ ಮಾಡುತ್ತದೆ

*ದೇಹದಿಂದ ಬೇಡದ ತ್ಯಾಜ್ಯಗಳನ್ನು ತೆಗೆದು ಹಾಕಲು ಸಹಾಯಕವಾಗಿದೆ

*ಹಾಗಲಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್​ ಸಮೃದ್ಧವಾಗಿರುವುರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ

*ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗಲಕಾಯಿ ಒಳ್ಳೆಯ ಔಷಧ. ಹಾಗಲಕಾಯಿ ಚಹ ಮಾಡಿ ಸವಿಯುವದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ

*ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಜತೆಗೆ ಕೆಟ್ಟ ಕೊಲೆಸ್ಟ್ರಾಲ್​ಅನ್ನು ನಾಶ ಪಡಿಸಲು ಹಾಗಲಕಾಯಿ ಚಹ ಸಹಾಯಕವಾಗಿದೆ

ಹಾಗಲಕಾಯಿ ಚಹಾ ತಯಾರಿಸುವ ವಿಧಾನ
ಹಾಗಲಕಾಯಿಯನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಿರಿ. ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ. ಒಂದು ಪಾತ್ರೆಯಲ್ಲಿ ನೀರನ್ನುತೆಗೆದುಕೊಂಡು ಒಣಗಿಸಿಟ್ಟ ಹಾಗಲಾಕಾಯಿ ಚೂರನ್ನು ಹಾಗಿ ಚೆನ್ನಾಗಿ ಕುದಿಸಿ. 10-15 ನಿಮಿಷಗಳ ಕಾಲ ಕುದಿಸಿದ ಬಳಿಕ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ವಾರಕ್ಕೊಮ್ಮೆಯಾದರೂ ಈ ಚಹವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

ವಾರಾಂತ್ಯದ ತರಕಾರಿ ದರಗಳ ವಿವರ ಬಿಡುಗಡೆ ಮಾಡಿದ ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ

ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು