Anemia: ಸ್ಮಾರ್ಟ್‌ಫೋನ್‌ ಸಹಾಯದಿಂದ ರಕ್ತಹೀನತೆ ಪತ್ತೆ; ಹೊಸ ತಂತ್ರಜ್ಞಾನದ ಮೂಲಕ ಮೊಬೈಲ್​ನಲ್ಲಿಯೇ ಸಮಸ್ಯೆ ಗುರುತಿಸಿ

ಯುನೈಟೆಡ್ ಸ್ಟೇಟ್ಸ್​ನ​ ಬ್ರೌನ್ ವಿಶ್ವವಿದ್ಯಾಲಯ ಮತ್ತು ರೋಡ್ ಐಲೆಂಡ್ ಆಸ್ಪತ್ರೆಯ ಸಂಶೋಧಕರು ಜಂಟಿಯಾಗಿ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

Anemia: ಸ್ಮಾರ್ಟ್‌ಫೋನ್‌ ಸಹಾಯದಿಂದ ರಕ್ತಹೀನತೆ ಪತ್ತೆ; ಹೊಸ ತಂತ್ರಜ್ಞಾನದ ಮೂಲಕ ಮೊಬೈಲ್​ನಲ್ಲಿಯೇ ಸಮಸ್ಯೆ ಗುರುತಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 21, 2021 | 7:43 AM

ರಕ್ತಹೀನತೆಯನ್ನು ಪರೀಕ್ಷಿಸಲು ವಿಜ್ಞಾನಿಗಳು ಹೊಸ ಮಾರ್ಗವನ್ನು ಕಂಡುಹಿಡಿದ್ದಾರೆ. ಸ್ಮಾರ್ಟ್‌ಫೋನ್‌ನ ಸಹಾಯದಿಂದ ಕಣ್ಣಿನ ಕೆಳಗಿನ ಭಾಗದ ಫೋಟೋ ತೆಗೆಯುವ ಮೂಲಕ ರಕ್ತಹೀನತೆಯನ್ನು(Anemia) ಕಂಡುಹಿಡಿಯಬಹುದಾಗಿದೆ. ಕಣ್ಣಿನ ಕೆಳಭಾಗದಲ್ಲಿನ ರೆಪ್ಪೆಗಳ ಫೋಟೋವನ್ನು ವಿಶ್ಲೇಷಿಸುವ ಕೃತಕ ಬುದ್ಧಿಮತ್ತೆ ಮಾದರಿಯನ್ನು ವಿಜ್ಞಾನಿಗಳು ರಚಿಸಿದ್ದಾರೆ. ಈ ವಿಧಾನದಲ್ಲಿ ವ್ಯಕ್ತಿಯು ರಕ್ತಹೀನತೆಯಿಂದ ಬಳಲುತ್ತಿದ್ದಾರೋ ಅಥವಾ ಇಲ್ಲವೋ ಎಂದು ಗುರುತಿಸಬಹುದಾಗಿದೆ. ಯುನೈಟೆಡ್ ಸ್ಟೇಟ್ಸ್​ನ​ ಬ್ರೌನ್ ವಿಶ್ವವಿದ್ಯಾಲಯ ಮತ್ತು ರೋಡ್ ಐಲೆಂಡ್ ಆಸ್ಪತ್ರೆಯ ಸಂಶೋಧಕರು ಜಂಟಿಯಾಗಿ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಫೋಟೋವನ್ನು ಅಪ್ಲಿಕೇಶನ್‌ನಂತೆ ಪರಿಶೀಲಿಸುವ ತಂತ್ರಜ್ಞಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಮೊಬೈಲ್​ನಲ್ಲಿ ವ್ಯಕ್ತಿಯು ತನ್ನ ಕಣ್ಣುಗಳ ಫೋಟೋ ತೆಗೆದುಕೊಳ್ಳಬೇಕು. ನಂತರ ಫೋಟೋವನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಫೋಟೋವನ್ನು ಪರಿಶೀಲಿಸುವ ಮೂಲಕ ಅಪ್ಲಿಕೇಶನ್ ರಕ್ತಹೀನತೆಯ ಬಗ್ಗೆ ವರದಿ ಮಾಡುತ್ತದೆ. ರಕ್ತಹೀನತೆಯನ್ನು ಕಂಡುಹಿಡಿಯುವ ಈ ಹೊಸ ತಂತ್ರಜ್ಞಾನವು ಅಭಿವೃದ್ಧಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇದನ್ನು ಎಲ್ಲರೂ ಬಳಸಬಹುದಾಗಿದೆ.

ರಕ್ತಹೀನತೆ ಎಂದರೇನು? ದೇಹದಲ್ಲಿ ಕಡಿಮೆ ಸಂಖ್ಯೆಯ ಕೆಂಪು ರಕ್ತ ಕಣಗಳಿಂದ (ಆರ್‌ಬಿಸಿ) ರಕ್ತಹೀನತೆ ಉಂಟಾಗುತ್ತದೆ. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡುಬರುತ್ತದೆ. ಇದು ಆಮ್ಲಜನಕದ ಪರಿಚಲನೆಗೆ ತಕ್ಕಂತೆ ಕೆಲಸ ಮಾಡುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಆಮ್ಲಜನಕದ ಕೊರತೆಯಿಂದ ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ರಕ್ತಹೀನತೆಯ ಪ್ರಮುಖ ಲಕ್ಷಣವಾಗಿದೆ. ವಿಶ್ವದ ಜನಸಂಖ್ಯೆಯ ಶೇಕಡಾ 25 ಕ್ಕಿಂತ ಹೆಚ್ಚು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ರಕ್ತಹೀನತೆ ಎಂದರೆ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುವುದು ಎಂದು ಸಂಶೋಧಕ ಡಾ. ಸೆಲೀಮ್ ಸುನರ್ ಹೇಳಿದ್ದಾರೆ. ವಿಶ್ವದ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ರಕ್ತಹೀನತೆಯಿಂದ  ಬಳಲುತ್ತಿರುವವರಲ್ಲಿ ಸಾವಿನ ಅಪಾಯ ಹೆಚ್ಚು. ಸ್ಮಾರ್ಟ್‌ಫೋನ್‌ನ ಸಹಾಯದಿಂದ ಕಣ್ಣಿನ ಕೆಳಗಿನ ಭಾಗದ ಫೋಟೋ ತೆಗೆಯುವ ಈ ವಿಧಾನವು ವಿಶಿಷ್ಟವಾಗಿದ್ದು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಇದು ಅನುಕೂಲಕರವಾಗಿದೆ. ರಕ್ತದ ಮಾದರಿಗಳನ್ನು ಪಡೆಯುವಾಗ ರೋಗಿಗಳಿಗೆ ನೋವಾಗುತ್ತದೆ. ಆದರೆ ಈ ತಂತ್ರಜ್ಞಾನ ಯಾವುದೇ ನೋವು ನೀಡದೆ ರಕ್ತಹೀನತೆಯನ್ನು ಪರೀಕ್ಷಿಸುತ್ತದೆ. ರಕ್ತಹೀನತೆಯನ್ನು ಪತ್ತೆಹಚ್ಚಲು ಕೈಗಳ ಉಗುರುಗಳು ಮತ್ತು ಕಣ್ಣುಗಳನ್ನು ಪರೀಕ್ಷಿಸುವುದು ಸೂಕ್ತ ಆಯ್ಕೆ ಎಂದು ಹಿಂದಿನ ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ.

ರಕ್ತಹೀನತೆಯನ್ನು ಪತ್ತೆಹಚ್ಚುವ ಈ ವಿಧಾನವನ್ನು ಕಂಡುಹಿಡಿದ ನಂತರ ವಿಜ್ಞಾನಿಗಳು ಸ್ಮಾರ್ಟ್‌ಫೋನ್ ಮೂಲಕ 142 ರೋಗಿಗಳ ಕಣ್ಣಿನ ಫೋಟೋಗಳನ್ನು ತೆಗೆದಿದ್ದಾರೆ. ಈ ವಿಧಾನದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ರಮಾವಳಿಗಳ ಸಹಾಯದಿಂದ ಕಣ್ಣಿನ ಬಣ್ಣವನ್ನು ಆಳವಾಗಿ ಸಂಶೋಧಿಸಲಾಯಿತು. ಫೋಟೋದಲ್ಲಿನ ಪ್ರತಿ ಪಿಕ್ಸೆಲ್‌ನ ಬಣ್ಣ, ಅದರ ಟೋನ್ ಅನ್ನು ಪರಿಶೀಲಿಸುತ್ತದೆ. ಆ ಮೂಲಕ ಶೇ 72ರಷ್ಟು ರೋಗಿಗಳಲ್ಲಿ, ರಕ್ತಹೀನತೆ ಇರುವುದು ತಿಳಿದು ಬಂದಿದೆ.

ಇದನ್ನೂ ಓದಿ: Liver Health: ಪಿತ್ತಜನಕಾಂಗದ ಆರೋಗ್ಯವನ್ನು ಕಾಪಾಡಲು ವಾರದ 7 ದಿನವನ್ನು ಬಳಸಿ; ಆಹಾರದಲ್ಲಿನ ಈ ಕ್ರಮ ಯಕೃತ್ತಿನ ಕಾಯಿಲೆಯಿಂದ ನಿಮ್ಮನ್ನು ದೂರ ಇಡುತ್ತದೆ Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್​ ಮಾಡಿ ಕುಡಿಯಿರಿ

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ