Health Benefits: ಸಾಂಬಾರ್ ಮಾಡೋಕೆ ಯಾವೆಲ್ಲ ಮಸಾಲಾ ಪದಾರ್ಥಗಳು ಬೇಕು ಎಂದು ಗೊತ್ತಿದ್ದರೆ ಸಾಕಾ? ಅವುಗಳ ಔಷಧೀಯ ಗುಣ ಕೂಡ ಮುಖ್ಯ
ನಾವು ಸೇವಿಸುವ ಆಹಾರದಲ್ಲಿ ಬಳಸುವ ಗಸಗಸೆ ಮತ್ತು ಇನ್ನಿತರ ಮಸಾಲೆ ಪದಾರ್ಥಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದಕ್ಕಾಗಿಯೇ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಹಿರಿಯರು ಹೇಳುತ್ತಾರೆ.
ಭಾರತೀಯ ಅಡುಗೆ ಮನೆ ಎಂದರೆ ಅದು ವೈದ್ಯಕೀಯ ಶಾಲೆ ಎಂಬ ಮಾತಿದೆ. ಏಕೆಂದರೆ ಅಡುಗೆ ಮನೆಯಲ್ಲಿನ ಮಸಾಲೆ ಡಬ್ಬಿಯು ಔಷಧಿಗಳ ಗಣಿ. ನಾವು ಸೇವಿಸುವ ಆಹಾರದಲ್ಲಿ ಬಳಸುವ ಗಸಗಸೆ ಮತ್ತು ಇನ್ನಿತರ ಮಸಾಲೆ ಪದಾರ್ಥಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದಕ್ಕಾಗಿಯೇ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಮಸಾಲೆ ಪದಾರ್ಥಗಳಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಸೂಕ್ತ.
ಶುಂಠಿ ಶುಂಠಿ ಅಜೀರ್ಣಕ್ಕೆ ಅದ್ಭುತವಾದ ಔಷಧವಾಗಿದೆ. ಅಲ್ಲದೆ ಶುಂಠಿ ಇಲ್ಲದೆ ಯಾವುದೇ ಔಷಧಿ ಇಲ್ಲ ಎಂದು ಆಯುರ್ವೇದ ಹೇಳುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ. ವಾಕರಿಕೆ, ವಾಂತಿ ಮತ್ತು ಅತಿಸಾರವನ್ನು ಇದು ಗುಣಪಡಿಸುತ್ತದೆ. ಶುಂಠಿಯನ್ನು ಕೀಮೋಥೆರಪಿಯೊಂದಿಗೆ ಬಳಸಲಾಗುತ್ತದೆ. ಗರ್ಭಿಣಿಯರು ಶುಂಠಿ ರಸ ಸೇವಿಸುವುದು ಉತ್ತಮ.
ಬೆಳ್ಳುಳ್ಳಿ ಬೆಳ್ಳುಳ್ಳಿ ಹೃದಯಕ್ಕೆ ಒಳ್ಳೆಯದು. ಹಸಿ ಬೆಳ್ಳುಳ್ಳಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಸಂಧಿವಾತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಇದು ಕಾರ್ಪಿನೋಜೆನಿಕ್ ಸಂಯುಕ್ತಗಳನ್ನು ರೂಪಿಸುತ್ತದೆ. ಇದು ದೇಹದ ಕೊಬ್ಬನ್ನು ಆಕ್ಸಿಡೀಕರಣ ಮಾಡುವುದನ್ನು ತಡೆಯುತ್ತದೆ.
ಜೀರಿಗೆ ಜೀರಿಗೆ ಹಸಿವು ನಿಗ್ರಹ ಮತ್ತು ಅಜೀರ್ಣಕ್ಕೆ ಉತ್ತಮ ಪರಿಹಾರವಾಗಿದೆ. ಕ್ಯುಮಿಕ್ ಡಿಹೈಡ್ರೇಶನ್ ಎಂಬ ಇದರ ಸುಗಂಧ ದ್ರವ್ಯವು ಲಾಲಾರಸ ಗ್ರಂಥಿಗಳನ್ನು ಸಕ್ರಿಯಗೊಳಿಸುತ್ತದೆ. ಉಸಿರಾಟದ ವ್ಯವಸ್ಥೆಗೆ ಸಹಕಾರಿಯಾಗಿದ್ದು, ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಲವಂಗ ಲವಂಗ ಶ್ವಾಸಕೋಶಕ್ಕೆ ಒಳ್ಳೆಯದು. ಇದು ಹಲ್ಲುಗಳನ್ನು ರಕ್ಷಿಸುವ ಗುಣಗಳನ್ನು ಹೊಂದಿದೆ. ಲವಂಗವನ್ನು ನಂಜುನಿರೋಧಕ ಮತ್ತು ಪ್ರತಿಜೀವಕ ಔಷಧಿಗಳಲ್ಲಿ ಬಳಸಲಾಗುತ್ತದೆ.
ಸಾಸಿವೆ ಸಾಸಿವೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು ಇದರಲ್ಲಿ ಸೇರಿವೆ. ಸಂಧಿವಾತ ಮತ್ತು ಸ್ನಾಯು ನೋವುಗಳನ್ನು ಕಡಿಮೆ ಮಾಡುತ್ತದೆ. ಉಸಿರಾಟದ ತೊಂದರೆಗಳನ್ನು ಸಾಸಿವೆ ನಿವಾರಿಸುತ್ತದೆ.
ದಾಲ್ಚಿನ್ನಿ ದಾಲ್ಚಿನ್ನಿಯನ್ನು ಪೋಷಕಾಂಶಗಳ ಗಣಿ ಎಂದು ಕರೆಯುತ್ತಾರೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಸೋಡಿಯಂ ಮತ್ತು ವಿಟಮಿನ್ ಸಿ ಯಂತಹ ಅನೇಕ ಪೋಷಕಾಂಶಗಳಿವೆ. ಇವು ದೇಹಕ್ಕೆ ತುಂಬಾ ಒಳ್ಳೆಯದು. ಸಕ್ಕರೆ ಮಟ್ಟವನ್ನು ದಾಲ್ಚಿನ್ನಿ ನಿಯಂತ್ರಿಸುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಕರಿ ಮೆಣಸು ಕೆಲವು ದೇಶಗಳ ಆಹಾರಗಳಲ್ಲಿ ಕೆಂಪು ಮೆಣಸು ಬದಲಿಗೆ ಕರಿ ಮೆಣಸು ಬಳಸಲಾಗುತ್ತದೆ. ಇವು ಜೀರ್ಣಕ್ರಿಯೆಗೆ ಒಳ್ಳೆಯದು. ಸುಲಭವಾಗಿ ಜೀರ್ಣವಾಗಲು ಆಹಾರಕ್ಕೆ ಬೇಕಾದ ಹೈಡ್ರೋಕ್ಲೋರಿಕ್ ಆಮ್ಲವನ್ನು ಕರಿ ಮೆಣಸು ಬಿಡುಗಡೆ ಮಾಡುತ್ತದೆ. ಕರಿ ಮೆಣಸು ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ನೆಮ್ಮದಿ ದೊರೆಯುತ್ತದೆ.
ಅರಿಶಿಣ ಅರಿಶಿಣ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಇದಲ್ಲದೆ, ಅರಿಶಿಣವನ್ನು ರಕ್ತ ಶುದ್ಧೀಕರಣ, ಪಿತ್ತಜನಕಾಂಗ ಮತ್ತು ಕಣ್ಣಿನ ಕಾಯಿಲೆಗಳಿಗೆ, ಗಾಯಗಳನ್ನು ಗುಣಪಡಿಸಲು ಮತ್ತು ಉರಿಯೂತದ ನೋವುಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಚರ್ಮದಲ್ಲಿ ತುರಿಕೆ ಇದ್ದಾಗ, ಅರಿಶಿಣ ಮತ್ತು ಎಣ್ಣೆಯನ್ನು ಒಟ್ಟಿಗೆ ಬೆರೆಸಿ ಹಚ್ಚುವುದು ಸೂಕ್ತ.
ಇದನ್ನೂ ಓದಿ: Health Tips: ಕಂಪನಿಗಳಲ್ಲಿ ನೈಟ್ ಡ್ಯೂಟಿ ಮಾಡುತ್ತಿದ್ದೀರಾ? ಆರೋಗ್ಯ ಕಾಳಜಿಗೆ ಈ ಕೆಲವು ವಿಷಯಗಳನ್ನು ಮರೆಯದಿರಿ
Health Tips: ನುಗ್ಗೆಕಾಯಿ ಮಾತ್ರವಲ್ಲ, ಸೊಪ್ಪಿನಲ್ಲೂ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ