Health Tips: ಮೈಗ್ರೇನ್ ಎಂದು ಸುಮ್ಮನೆ ಮಲಗುವ ಬದಲು, ಈ ಆಹಾರ ಪದಾರ್ಥಗಳನ್ನು ಸೇವಿಸಿ ವಿಶ್ರಾಂತಿ ಪಡೆಯಿರಿ
Migraine: ಮೈಗ್ರೇನ್ನಿಂದ ದೂರ ಉಳಿಯಲು ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ. ಅದಕ್ಕೆ ಉತ್ತರ ಆಹಾರ ಕ್ರಮ ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ನಮ್ಮಲ್ಲಿ ಹಲವರು ಮೈಗ್ರೇನ್ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಹೊಂದಿರುವ ಜನರು ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಏಕೆಂದರೆ ಮೈಗ್ರೇನ್ನಿಂದ ಬರುವ ಈ ಅರೆ ತಲೆನೋವು ಸಹಿಸುವುದು ಬಹಳ ಕಷ್ಟ. ಅದರಲ್ಲೂ ಮಳೆಗಾಲದಲ್ಲಿ ಹವಾಮಾನವು ತಂಪಾಗಿರುವುದರಿಂದ ಅತಿ ಹೆಚ್ಚು ಮೈಗ್ರೇನ್( Migraine )ತಲೆನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಕಾಯಿಲೆಗೆ ಇಂತಹದ್ದೇ ಔಷಧಿ ಎಂದು ಇಲ್ಲ. ಆದರೂ ಚಿಕಿತ್ಸೆ ಪಡೆದ ಕೆಲವರು ಗುಣಮುಖರಾಗಿದ್ದಾರೆ. ಆದರೆ ಇನ್ನು ಕೂಡ ಹಲವರು ಇದರಿಂದ ಹೊರಬರಲಾರದೆ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಮೈಗ್ರೇನ್ನಿಂದ ದೂರ ಉಳಿಯಲು ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ. ಅದಕ್ಕೆ ಉತ್ತರ ಆಹಾರ ಕ್ರಮ ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಶುಂಠಿ ಮೈಗ್ರೇನ್ನಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಬೇಕು. ಇದು ಉರಿಯೂತದ ಗುಣಲಕ್ಷಣಗಳನ್ನು ದೂರ ಮಾಡಿ, ಎಲ್ಲಾ ರೀತಿಯ ನೋವನ್ನು ನಿವಾರಿಸುತ್ತದೆ. ಶುಂಠಿ ರಸವನ್ನು ನೇರವಾಗಿ ತೆಗೆದುಕೊಳ್ಳಬಹುದು ಅಥವಾ ಶುಂಠಿಯನ್ನು ನೀರಿಗೆ ಹಾಕಿ ಕಷಾಯ ರೂಪದಲ್ಲಿ ಕೂಡ ಸೇವಿಸಬಹುದು.
ಮೊಸರು ಮೊಸರಿನಲ್ಲಿರುವ ವಿಟಮಿನ್ ಬಿ ಮೈಗ್ರೇನ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೈಗ್ರೇನ್ನಿಂದ ಬಳಲುತ್ತಿರುವವರು ಪ್ರತಿದಿನ ಮೊಸರು ಸೇವಿಸಿದರೆ ತಲೆನೋವಿನಿಂದ ದೂರ ಇರಬಹುದು.
ಮೀನು ಮತ್ತು ತರಕಾರಿ ಮೈಗ್ರೇನ್ನಿಂದ ಬಳಲುತ್ತಿರುವ ಜನರು ನಿಯಮಿತವಾಗಿ ಮೀನು ಮತ್ತು ಹಸಿರು ತರಕಾರಿಗಳನ್ನು ತೆಗೆದುಕೊಳ್ಳಿ. ಇದು ಮೈಗ್ರೇನ್ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಂಜೂರ ಹಣ್ಣು ಅಂಜೂರ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಂಜೂರವನ್ನು ಒಣಗಿಸಿ ಅಥವಾ ನೇರವಾಗಿ ಹಣ್ಣಿನ ರೂಪದಲ್ಲಿ ತೆಗೆದುಕೊಳ್ಳಬಹುದು. ಇದರಲ್ಲಿರುವ ಕೆಲವು ಜೀವಸತ್ವಗಳು ನೋವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಲ್ಲಂಗಡಿ ಹಣ್ಣು ಕಲ್ಲಂಗಡಿ ಮೈಗ್ರೇನ್‌ಗೆ ಉತ್ತಮ ಔಷಧವಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ದ್ರವ ಶಕ್ತಿ ಸಮತೋಲನದಲ್ಲಿರುತ್ತವೆ. ಇದು ಮೈಗ್ರೇನ್ ಅನ್ನು ದೂರವಾಗಿಸುತ್ತದೆ.
ನೀರು ಕೆಲವು ಸಂದರ್ಭಗಳಲ್ಲಿ ನಿರ್ಜಲೀಕರಣವು ಮೈಗ್ರೇನ್‌ಗೆ ಕಾರಣವಾಗಬಹುದು. ಆದ್ದರಿಂದ ಪ್ರತಿದಿನ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ: Health Benefits: ದಿನಕ್ಕೆ ಒಂದು ಬಾರಿಯಾದರೂ ಬರಿಗಾಲಿನಲ್ಲಿ ನಡೆಯಿರಿ; ಕಾಲಿಗೆ ತಾಗುವ ಮಣ್ಣು ಸ್ನಾಯುವನ್ನು ಬಲಪಡಿಸುತ್ತದೆ
Heart Health: ಹೃದಯಾಘಾತ ಮಾತ್ರ ಅಲ್ಲ, ಹೃದಯಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳಿಂದ ಪಾರಾಗಲು ಸದಾ ಪ್ರಯತ್ನಿಸಿ