Health Tips: ಕಂಪನಿಗಳಲ್ಲಿ ನೈಟ್​ ಡ್ಯೂಟಿ ಮಾಡುತ್ತಿದ್ದೀರಾ? ಆರೋಗ್ಯ ಕಾಳಜಿಗೆ ಈ ಕೆಲವು ವಿಷಯಗಳನ್ನು ಮರೆಯದಿರಿ

ಸರಿಯಾದ ನಿದ್ರೆ, ಆಹಾರ, ಸಮಯಕ್ಕೆ ಊಟ ತಿಂಡಿಗಳನ್ನು ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಕೆಲವು ಬದಲಾವಣೆಗೆ ತಕ್ಕಂತೆ ನಿಮ್ಮ ಜೀವನ ಶೈಲಿ ಬದಲಾಗಿದ್ದರೂ ಸಹ ಆರೋಗ್ಯದ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಅಳವಡಿಸಿಕೊಂಡು ಆರೋಗ್ಯದ ಕಾಳಜಿ ಮಾಡಿಕೊಳ್ಳಿ.

Health Tips: ಕಂಪನಿಗಳಲ್ಲಿ ನೈಟ್​ ಡ್ಯೂಟಿ ಮಾಡುತ್ತಿದ್ದೀರಾ? ಆರೋಗ್ಯ ಕಾಳಜಿಗೆ ಈ ಕೆಲವು ವಿಷಯಗಳನ್ನು ಮರೆಯದಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jul 20, 2021 | 8:20 AM

ಇಂದಿನ ಕೆಲಸದ ಶೈಲಿ ಬಲಾಗಿದೆ. ಮೊದಲೆಲ್ಲಾ ಹೆಚ್ಚು ಹಗಲಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಹೆಚ್ಚಿನ ಕಂಪನಿಯಲ್ಲಿ ರಾತ್ರಿ(Night Duty) ಮತ್ತು ಹಗಲು ಎರಡೂ ಸಮಯದಲ್ಲಿ ಕೆಲಸ ಮಾಡುತ್ತಾರೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಜೀವನ ಶೈಲಿಯೇ(life Style) ಬದಲಾಗುತ್ತದೆ. ಹಾಗಿದ್ದಾಗ ನಿಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರವಹಿಸಲೇ ಬೇಕು. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಿರುವಾಗ ಕೆಲವೊಂದಿಷ್ಟು ಆಹಾರ ಕ್ರಮ ಮತ್ತು ಜೀವನ ಶೈಲಿಯ ಬಗ್ಗೆ ತಿಳಿಯಲೇಬೇಕು. ಸರಿಯಾದ ನಿದ್ರೆ, ಆಹಾರ, ಸಮಯಕ್ಕೆ ಊಟ ತಿಂಡಿಗಳನ್ನು ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಕೆಲವು ಬದಲಾವಣೆಗೆ ತಕ್ಕಂತೆ ನಿಮ್ಮ ಜೀವನ ಶೈಲಿ ಬದಲಾಗಿದ್ದರೂ ಸಹ ಆರೋಗ್ಯದ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಅಳವಡಿಸಿಕೊಂಡು ಆರೋಗ್ಯದ ಕಾಳಜಿ ಮಾಡಿಕೊಳ್ಳಿ.

ಸಾಕಷ್ಟು ನಿದ್ರೆ ಕೆಲಸ ಬಳಿಕ ದೇಹಕ್ಕೆ ಬೇಕಾದಷ್ಟು ನಿದ್ರೆಯನ್ನು ಮಾಡಿ. ನಿದ್ರೆ ಮಾಡುವ ಮೂಲಕ ನಿಮ್ಮ ಮನಸ್ಸು ಹಗುರಗೊಳ್ಳುತ್ತದೆ. ಕೆಲಸದಲ್ಲಿ ಚಟುವಟಿಕೆಯಿರುತ್ತದೆ. ಅನೇಕ ಸಮಸ್ಯೆಗಳಿಂದ ದೂರವಿರಬಹುದು. ಕೆಲಸ ರಾತ್ರಿಯಿದ್ದರೂ ಸಹ ಕೆಲಸ ಮುಗಿದ ತಕ್ಷಣ ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ನೀವು ಸಾಕಷ್ಟು ನಿದ್ರೆಯನ್ನು ಪಡೆಯುವುದು ಅವಶ್ಯಕ.

ಜಂಕ್​ಫುಡ್​ಗಳಿಂದ ದೂರವಿರಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೊರಗಡೆ ಜಂಕ್​ಫುಡ್​ಗಳನ್ನು ಹೆಚ್ಚು ತಿನ್ನುತ್ತಾರೆ. ಸಂಜೆಯ ಸ್ನ್ಯಾಕ್ಸ್, ರಾತ್ರಿ ಊಟದ ಸಮಯದಲ್ಲಿಯೂ ಸಹ ಹೊಟ್ಟೆ ತುಂಬಿಸಿಕೊಳ್ಳಲು ಜಂಕ್​ಫುಡ್​ಗಳನ್ನು ಸೇವಿಸುತ್ತಾರೆ. ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು. ಹಾಗಾಗಿ ಜಂಕ್​ಫುಡ್​ಗಳ​ ಸೇವನೆಯಿಂದ ದೂರವಿರಿ.

ಹಣ್ಣು ಸೇವಿಸಿ ಸಾಕಷ್ಟು ಹಣ್ಣುಗಳನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಜತೆಗೆ ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಇದು ದೇಹದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ಪೌಷ್ಟಿಕ ಹಣ್ಣುಗಳು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ಚಹ ಮತ್ತು ಕಾಫಿ ಸೇವನೆಯನ್ನು ಕಡಿಮೆ ಮಾಡಿ ರಾತ್ರಿ ಹೊತ್ತು ಕೆಲಸ ಮಾಡುವವರು ಚಹ ಮತ್ತು ಕಾಫಿಯನ್ನು ಹೆಚ್ಚು ಸೇವಿಸುತ್ತಾರೆ. ಆಗಾಗ ಬಿಸಿ ಬಿಸಿ ಕಾಫಿ ಅಥವಾ ಚಹವನ್ನು ಕುಡಿಯುತ್ತಲೇ ಇರುತ್ತಾರೆ. ನಿದ್ರೆ ಬಾರದೆಂಬ ಆಶಯದೊಂದಿಗೆ ಇದನ್ನು ಅಳವಡಿಸಿಕೊಂಡರೂ ಆರೋಗ್ಯದ ದೃಷ್ಟಿಯಿಂದ ಪದೇ ಪದೇ ಚಹ ಅಥವಾ ಕಾಫಿ ಸೇವನೆ ಒಳ್ಳೆಯದಲ್ಲ.

ವ್ಯಾಯಾಮ ಮಾಡಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೆಚ್ಚಿನ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಉತ್ತಮ. ಆರೋಗ್ಯವಾಗಿರಲು ಪ್ರತಿದಿನವೂ ವ್ಯಾಯಾಮ ಮಾಡುವ ಅಭ್ಯಾಸ ಒಳ್ಳೆಯದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ವ್ಯಾಯಾಮ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮನ್ನು ನೀವು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ.

ಇದನ್ನೂ ಓದಿ:

Health Tips: ಈ ಪೌಷ್ಟಿಕ ಆಹಾರಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ‘ಮೂರು’ ಪದಾರ್ಥಗಳು

Health Tips: ಮಳೆಗಾಲದ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ಈ ಕೆಲವು ವಿಷಯಗಳನ್ನು ನೀವು ಗಮನಿಸಲೇಬೇಕು

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್