Health Tips: ಬೇಸಿಗೆಯಲ್ಲಿ ಕರುಳನ್ನು ಆರಾಮದಾಯಕವಾಗಿರಿಸುವ ಆಹಾರಗಳು ಇಲ್ಲಿದೆ

ಈ ವರ್ಷದ ಬೇಸಿಗೆಯಂತೂ ಕಠೋರವಾಗಿದೆ. ದೇಹ ಶಾಖವನ್ನು ತಣಿಸಲು, ಜೀರ್ಣಿಸಿಕೊಳ್ಳಲು ಸುಲಭವಾದ ಮತ್ತು ಕರುಳಿಗೆ ಭಾರವಾಗದ ಆಹಾರವನ್ನು ತಿನ್ನುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ಕರುಳನ್ನು ಆರಾಮದಾಯಕವಾಗಿರಿಸುವ ಆಹಾರಗಳ ಪಟ್ಟಿ ಇಲ್ಲಿದೆ.

Health Tips: ಬೇಸಿಗೆಯಲ್ಲಿ ಕರುಳನ್ನು ಆರಾಮದಾಯಕವಾಗಿರಿಸುವ ಆಹಾರಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 12, 2023 | 2:40 PM

ಉತ್ತಮ ರೀತಿಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬೇಸಿಗೆಯ ಶಾಖದಿಂದ ದೇಹವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರಗಳ ಸೇವನೆಯ ಅಗತ್ಯವಿದೆ. ಜೀರ್ಣಿಸಿಕೊಳ್ಳಲು ಸುಲಭವಾದ ಮತ್ತು ನಿಮ್ಮ ಕರುಳಿಗೆ ಭಾರವಾಗದ ಆಹಾರಗಳ ಸೇವನೆ ಮಾಡುವುದು ಅಗತ್ಯವಾಗಿದೆ. ಜೊತೆಗೆ ದೇಹವನ್ನು ಹೈಡ್ರೇಟ್ ಆಗಿ ಇಡಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಮುಖ್ಯವಾಗಿದೆ. ಉರಿಯೂತವನ್ನು ಉಂಟು ಮಾಡುವ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟು ಮಾಡುವ ಸಕ್ಕರೆ ಅಥವಾ ಕೊಬ್ಬಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅನೇಕ ಜನರು ರಾಸಾಯನಿಕ ಮುಕ್ತ ಆಹಾರಗಳನ್ನು ಸೇವಿಸುವುದರ ಜೊತೆಗೆ ಹೆಚ್ಚಿನ ದೈಹಿಕ ಚಟುವಟಿಕೆ, ಉತ್ತಮ ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ತಮ್ಮ ಜೀವನಶೈಲಿಯನ್ನು ಬದಲಾಯಿಸಲು ಬಯಸುತ್ತಾರೆ. ಉತ್ತಮ ಜೀವನಕ್ಕಾಗಿ ಆಹಾರ ಮತ್ತು ಅಡುಗೆಯ ಅಗತ್ಯ ವಸ್ತುಗಳ ಸರಿಯಾದ ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ರಾಸಾಯನಿಕ ಅವಶೇಷಗಳಿಲ್ಲದ, ಕಡಿಮೆ ಸಂಸ್ಕರಿಸಿದ, ನೈಸರ್ಗಿಕ ಆಹಾರಗಳು ಮತ್ತು ಧಾನ್ಯಗಳು, ಒಣ ಹಣ್ಣು ಮತ್ತು ಬೀಜಗಳು, ಸೊಪ್ಪು ತರಕಾರಿಗಳನ್ನು ಸೇವನೆ ಮಾಡಬೇಕು.

ಆರೋಗ್ಯಕರ ಕರುಳನ್ನು ಪಡೆಯಲು ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡುವುದು ಮುಖ್ಯ ಎಂದು ಕಂಟ್ರಿಡಿಲೈಟ್‌ನ ಸಹ ಸಂಸ್ಥಾಪಕ ಮತ್ತು ಸಿಇಓ ಚಕ್ರಧರ್ ದಾಡೆ ಅವರು ಹೇಳಿದ್ದಾರೆ. ಗಯಾದ ಸಂಸ್ಥಾಪಕ ಮತ್ತು ನಿರ್ದೇಶಕ ಡಾಲಿ ಕುಮಾರ್ ಅವರು ದೇಹ ತಂಪಾಗಿರಲು ಮತ್ತು ಕರುಳನ್ನು ಆರಾಮದಾಯಕವಾಗಿರಲು ಸಹಾಯ ಮಾಡುವ ಆಹಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನೀರಿನಾಂಶ ಇರುವ ಹಣ್ಣುಗಳು: ನೀರು ಕುಡಿಯುವುದರಿಂದ ಖಂಡಿತವಾಗಿಯೂ ನಮ್ಮ ದೇಹದಲ್ಲಿ ನೀರಿನಾಂಶವನ್ನು ಹೆಚ್ಚುತ್ತಿದೆ. ಅದರೊಂದಿಗೆ ಶಿಫಾರಸ್ಸು ಮಾಡಿದ ಪ್ರಮಾಣದಷ್ಟು ನೀರನ್ನು ಸೇವಿಸಲು ಇದು ಕೆಲವೊಬ್ಬರಿಗೆ ಸವಾಲಾಗಬಹುದು. ಆದ್ದರಿಂದ ಹೆಚ್ಚಿನ ಪ್ರಮಾಣದ ನೀರಿನಾಂಶವಿರುವ ಹಣ್ಣುಗಳು ಸೇವಿಸಲು ಉತ್ತಮವಾದ ಆಯ್ಕೆಯಾಗಿದೆ. ಕಲ್ಲಂಗಡಿ, ಕರ್ಬೂಜ ಹಣ್ಣು, ಅನಾನಸ್, ದ್ರಾಕ್ಷಿಯಂತಹ ಹಣ್ಣುಗಳು ಹೆಚ್ಚಿನ ನೀರಿನಾಂಶಗಳಿಂದ ಕೂಡಿರುತ್ತವೆ. ಈ ಹಣ್ಣುಗಳನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರಿಸಿಟ್ಟುಕೊಳ್ಳಬಹುದು.

ತಂಪಾಗಿರಿಸುವ ತರಕಾರಿಗಳು: ತಂಪು ಪಾನೀಯಗಳು ಮತ್ತು ಐಸ್‌ಕ್ರೀಮ್‌ಗಳಂತಹ ತಂಪು ತಿನಿಸುಗಳು ಶಾಖವನ್ನು ಸೋಲಿಸಬಹುದು. ಆದರೆ ಅವುಗಳು ಯಾವುದೇ ಆರೋಗ್ಯ ಪ್ರಯೋಜನಗಳನ್ನು ನಮಗೆ ನೀಡುವುದಿಲ್ಲ. ಸೌತೆಕಾಯಿ, ಸೆಲರಿ, ಲೆಟಿಸ್‌ನಂತಹ ಹಸಿರು ತರಕಾರಿಗಳು ನೀರಿನಾಂಶದಲ್ಲಿ ಸಮೃದ್ಧವಾಗಿದೆ ಮತ್ತು ಇದು ದೇಹಕ್ಕೆ ತಂಪು ಪರಿಣಾಮವನ್ನು ನೀಡುತ್ತದೆ. ಇವುಗಳನ್ನು ಸಲಾಡ್ ಅಥವಾ ಸ್ಮೂಥಿ ರೂಪದಲ್ಲಿ ಸೇವನೆ ಮಾಡುವ ಮೂಲಕ ಕರುಳನ್ನು ಆರಾಮದಾಯಕವಾಗಿಸಬಹುದು.

ಪ್ರೋಬಯಾಟಿಕ್ ಭರಿತ ಆಹಾರಗಳು: ಮೊಸರು, ಕೆಫಿರ್, ಕಿಮ್ಚಿಗಳಂತಹ ಪ್ರೋಬಯಾಟಿಕ್ ಆಹಾರಗಳನ್ನು ಸೇವಿಸಿ. ಇದು ರುಚಿಕರ ಮಾತ್ರವಲ್ಲದೆ, ಪ್ರೋಬಯಾಟಿಕ್ ಅಂಶಗಳಿಂದ ಸಮೃದ್ಧವಾಗಿದೆ. ಅವು ಕರುಳಿನ ಆರೋಗ್ಯವನ್ನು ಉತ್ತೇಜಿಸವು ಪ್ರಯೋಜನಕರಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಈ ಆಹಾರಗಳು ನಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ನೇರ ಪ್ರೋಟೀನ್‌ಗಳು: ಬೇಯಿಸಿದ ಕೋಳಿ, ಮೀನು ಮತ್ತು ಮೊಟ್ಟೆಗಳಂತಹ ಪ್ರೋಟೀನ್ ಭರಿತ ಆಹಾರಗಳು ನಿಮ್ಮ ಹೊಟ್ಟೆಯನ್ನು ಪೂರ್ಣವಾಗಿರಿಸಲು ಮತ್ತು ತೃಪ್ತಿಪಡಿಸಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದು ಮತ್ತು ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ತಡೆಯುತ್ತದೆ.

ಗಿಡಮೂಲಿಕಾ ಚಹಾ: ಪುದೀನಾ ಚಹಾ, ಕ್ಯಾಮೊಮೈಲ್ ಚಹಾ, ಶುಂಠಿ ಚಹಾದಂತಹ ಗಿಡಮೂಲಿಕಾ ಚಹಾಗಳು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಚಹಾಗಳು ಉರಿಯೂತ ವಿರೋಧಿ ಮತ್ತು ವಿಶ್ರಾಂತಿಯ ಗುಣಗಳನ್ನು ಹೊಂದಿದ್ದು, ಕಠಿಣ ಬೆಸಿಗೆಯ ತಿಂಗಳುಗಳಲ್ಲಿ ನಿಮ್ಮ ಕರುಳನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Tips: H3N2 ಇನ್ಫುಯೆನ್ಸ ಮಧುಮೇಹಿಗಳಿಗೆ ಮಾರಕವಾಗಬಹುದು, ಈ ಕ್ರಮ ಅನುಸರಿಸಿ

ಒಣ ಹಣ್ಣುಗಳು ಮತ್ತು ಬೀಜಗಳು: ಇದು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ ಮತ್ತು ಇದು ಬೇಸಿಗೆಯ ತಿಂಗಳುಗಳಲ್ಲಿ ನಿಮ್ಮ ಕರುಳನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ” ಎಂದು ನ್ಯೂಟ್ರಿಲಿಯಸ್‌ನ ಸಹ ಸಂಸ್ಥಾಪಕಿ ಶ್ರೇಯಾ ಧೀರಜ್ ಜೈನ್ ಹೇಳುತ್ತಾರೆ. ಜೊತೆಗೆ ನಾವು ಬೇಸಿಗೆಯಲ್ಲಿ ಸೇವಿಸಬೇಕಾದ ಒಣಹಣ್ಣುಗಳನ್ನು ಶಿಫಾರಸು ಮಾಡಿದ್ದಾರೆ.

ಬಾದಾಮಿ: ಬಾದಾಮಿ ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳ ಸಮೃದ್ಧ ಮೂಲವಾಗಿದ್ದು, ಅದು ನಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಅವು ವಿಟಮಿನ್ ಇ ಅಂಶವನ್ನು ಹೊಂದಿದೆ. ಜೊತೆಗೆ ಇದು ಉತ್ಕರ್ಷಣ ನಿರೊಧಕವಾಗಿದ್ದು, ಅದು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಖರ್ಜೂರ: ಖರ್ಜೂರದಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅವು ಪೊಟ್ಯಾಸಿಯಮ್‌ನ್ನು ಸಹ ಹೊಂದಿರುತ್ತದೆ. ಇದು ದೇಹದಲ್ಲಿ ಎಲೆಕ್ಟೊಲೈಟ್‌ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಅಂಜೂರ: ಇದು ಫೈಬರ್‌ನಿಂದ ಸಮೃದ್ಧವಾಗಿದೆ ಮತ್ತು ಕುರುಳನ್ನು ಆರೋಗ್ಯಕರವಾಗಿಡಲು ಇದು ಸಹಾಯ ಮಾಡುತ್ತದೆ. ಇವುಗಳು ಪ್ರಿಬಯಾಟಿಕ್ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಪಿಸ್ತಾ: ಇದು ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದ್ದು, ಅದು ನಿಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮತ್ತು ಇವುಗಳು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಶ್ರೇಯಾ ಧೀರಜ್ ಜೈನ್ ಅವರು ಪ್ರೋಬಯಾಟಿಕ್ ಆಹಾರಗಳು, ಪ್ರಿಬಯಾಟಿಕ್ ಆಹಾರಗಳು ಮತ್ತು ಅರಶಿನವನ್ನು ಸೇವಿಸಬೇಕು ಎಮದು ಸಲಹೆ ನೀಡುತ್ತಾರೆ. ಈ ನ್ಯೂಟ್ರಾಸ್ಯುಟಿಕಲ್ ಆಹಾರಗಳು ಕಠಿಣ ಬೇಸಿಗೆಯ ತಿಂಗಳುಗಳಲ್ಲಿ ನಿಮ್ಮ ಕರುಳನ್ನು ಆರಾಮವಾಗಿಡಲು ಸಹಾಯ ಮಾಡುತ್ತದೆ.

Published On - 2:40 pm, Wed, 12 April 23

ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?