AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: 30-40 ವರ್ಷ ವಯಸ್ಸಿನಲ್ಲಿ ಈ ಅಗತ್ಯ ವೈದ್ಯಕೀಯ ಪರೀಕ್ಷೆ ಮಾಡಲೇಬೇಕು, ಯಾಕೆ ಗೊತ್ತಾ?

ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಮೂಲಭೂತ ಆರೋಗ್ಯ ಪರೀಕ್ಷೆಗಳನ್ನು 30 ವರ್ಷ ವಯಸ್ಸಿನ ನಂತರ ಮಾಡಿಸಿಕೊಳ್ಳಬೇಕು. ಆದರೆ 40 ವರ್ಷ ವಯಸ್ಸಿನ ನಂತರ ಕಡ್ಡಾಯವಾಗಿ ಹೃದಯ ಸಂಬಂಧಿ ಹಾಗೂ ಇತರ ಆರೋಗ್ಯ ಪರೀಕ್ಷೆಗಳನ್ನು ತಪ್ಪದೇ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

Health Tips: 30-40 ವರ್ಷ ವಯಸ್ಸಿನಲ್ಲಿ ಈ ಅಗತ್ಯ ವೈದ್ಯಕೀಯ ಪರೀಕ್ಷೆ ಮಾಡಲೇಬೇಕು, ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 08, 2023 | 6:36 PM

Share

ವಯಸ್ಸಾಗುತ್ತಾ ಹೋದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಅದರಲ್ಲಿಯೂ ಅನಾರೋಗ್ಯಕರ ಜೀವನಶೈಲಿ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ. ಯುವಜನತೆ ಸಾಮಾನ್ಯವಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುವುದನ್ನು ನಿರ್ಲಕ್ಷಿಸುತ್ತಾರೆ. ಕೆಲವು ಗಂಭೀರ ಕಾಯಿಲೆಗಳ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವುದರಿಂದ, ಆಗಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡಿಸುವುದು ಮುಖ್ಯವಾಗಿದೆ. ಇದರಿಂದ ಗಂಭೀರ ಕಾಯಿಲೆಯಿದ್ದರೆ ಅದನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಗುಣಪಡಿಸಬಹುದು. ಇತ್ತೀಚಿನ ದಿನಗಳಲ್ಲಿ ಹೊಸ ವೈರಸ್‌ಗಳು ಮತ್ತು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಆರೋಗ್ಯಕರ ದೇಹ ಮಾತ್ರ ಈ ರೀತಿಯ ವಿವಿಧ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆದರೆ ವಯಸ್ಸಾದಂತೆ ದೇಹದಲ್ಲಿನ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಮೂಲಭೂತ ಆರೋಗ್ಯ ಪರೀಕ್ಷೆಗಳನ್ನು 30 ವರ್ಷ ವಯಸ್ಸಿನ ನಂತರ ಮಾಡಿಸಿಕೊಳ್ಳಬೇಕು. ಆದರೆ 40 ವರ್ಷ ವಯಸ್ಸಿನ ನಂತರ ಹೃದಯ ಸಂಬಂಧಿ ಹಾಗೂ ಇತರ ಆರೋಗ್ಯ ಪರೀಕ್ಷೆಗಳನ್ನು ತಪ್ಪದೇ ಮಾಡಬೇಕು” ಎಂದು ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್‌ನಲ್ ಮೆಡಿಸಿನ್ ಸಲಹೆಗಾರ ಡಾ. ತುಷಾರ್ ತಯಾಲ್ ಹೇಳುತ್ತಾರೆ.

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸುಲಭವಾಗಿ ಆಯಾಸ, ನಿದ್ರಾಹೀನತೆ, ಎರಡು ವಾರಗಳಿಗಿಂತ ಹೆಚ್ಚು ಕಾಲ ತಲೆನೋವು, ಉಸಿರಾಟದ ತೊಂದರೆ, ಆಗಾಗ್ಗೆ ಜ್ವರ ಕಾಣಿಸಿಕೊಳ್ಳುವುದು ಕೀಲುನೋವು, ಸ್ನಾಯುಗಳ ಬಿಗಿತ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಮಾತ್ರ ನಿರ್ದಿಷ್ಟ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಡಾ. ತಾಪ್ಡಿಯಾ ಹೇಳುತ್ತಾರೆ.

ಯಾವ ವಯಸ್ಸಿನಲ್ಲಿ ಸಂಪೂರ್ಣ ಆರೋಗ್ಯ ತಪಾಸಣೆ ಅಗತ್ಯವಿದೆ:

42 ವರ್ಷ ವಯಸ್ಸಿನ ನಂತರ ಮತ್ತು 60 ವರ್ಷಗಳವರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆಗಳನ್ನು ಮಾಡಲು ಶಿಫಾರಸು ಮಾಡಲಾಗುತ್ತದೆ. ಅದರ ನಂತರದಲ್ಲಿ ಪ್ರತಿವರ್ಷವೂ ಆರೋಗ್ಯ ತಪಾಸಣೆಗಳನ್ನು ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿ ಕೂಡಾ ಸೂಕ್ತವಾದ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಬೇಕು. ಎಂದು ಡಾ. ತಪ್ಡಿಯಾ ಹೇಳುತ್ತಾರೆ.

30 ಮತ್ತು 40 ವರ್ಷದ ನಂತರದ ಪರೀಕ್ಷೆಗಳು

ರಕ್ತದೊತ್ತಡದ ಮೇಲ್ವಿಚಾರಣೆ: ಇದನ್ನು ಪ್ರತಿ ವರ್ಷ ಮಾಡಬೇಕು. ಆದರ್ಶಪ್ರಾಯವಾಗಿ ಬಿಪಿ 130/84 mm Hg ಗಿಂತ ಕಡಿಮೆ ಇರಬೇಕು.

ಮಧುಮೇಹದ ಪರೀಕ್ಷೆ: ಪ್ರತಿವರ್ಷ ಡಯಾಬಿಟಿಕ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಜಡಜೀವನಶೈಲಿ, ಸ್ಥೂಲಕಾಯತೆ, ಮಧುಮೆಹದ ಇತಿಹಾಸವನ್ನು ಹೊಂದಿರುವ ಕುಟುಂಬದಿಂದ ಬಂದರವರು ತಪ್ಪದೆ ಈ ಪರೀಕ್ಷೆಯನ್ನು ಮಾಡಬೆಕು.

ಯಕೃತ್ತಿನ ಕಾರ್ಯ ಪರೀಕ್ಷೆ: ದೀರ್ಘಕಾಲದ ಲಿವರ್ ಕಾಯಿಲೆ ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳಲು ವಾರ್ಷಿಕವಾಗಿ ಲಿವರ್ ಕಾರ್ಯ ಪರೀಕ್ಷೆಯನ್ನು ಮಾಡುವುದು ಮುಖ್ಯವಾಗಿರುತ್ತದೆ.

ಥೈರಾಯ್ಡ್ ಕಾರ್ಯ ಪರೀಕ್ಷೆ: ತೂಕ ಹೆಚ್ಚಾಗುವುದು, ಕೂದಲು ಉದುರುವುದು ಮತ್ತು ಅನಿಯಮಿತ ಮುಟ್ಟಿನಂತಹ ಥೈರಾಯ್ಡ್ ಲಕ್ಷಣಗಳು ಕಂಡು ಬಂದರೆ ನೀವು ತಕ್ಷಣ ಪರೀಕ್ಷೆಯನ್ನು ಮಾಡುವ ಅಗತ್ಯವಿದೆ.

ವಿಟಮಿನ್ ಡಿ ಮತ್ತು ಬಿ 12 ಪರೀಕ್ಷೆ: ಇದನ್ನು ವಾರ್ಷಿಕವಾಗಿ ಮಾಡಬಹುದು. ಮತ್ತು ಈ ವಿಟಮಿನ್‌ಗಳ ಕೊರತೆ ಕಂಡುಬಂದಲ್ಲಿ ಸೂಕ್ತವಾದ ಆಹಾಗಳ ಬದಲಾವಣೆಯನ್ನು ಮಾಡಿಕೊಳ್ಳಬೇಕು.

ಲಿಪಿಡ್ ಪ್ರೊಫೈಲ್: ವಿಶೇಷವಾಗಿ ಕುಳಿತುಕೊಂಡು ಕೆಲಸ ಮಾಡುವ ಜನರು ಮತ್ತು ಹೃದ್ರೋಗದ ಕುಟುಂಬದ ಇತಿಹಾಸ ಹೊಂದಿರುವವರು ಈ ಕೊಲೆಸ್ಟಾಲ್ ಪರೀಕ್ಷೆಗೆ ಒಳಗಾಗುವುದು ಮುಖ್ಯವಾಗಿದೆ.

ಸ್ತನ ಅಲ್ಟಾಸೌಂಡ್: ಸ್ತನ ಸಂಬಂಧಿ ಮಾರಕತೆಯನ್ನು ಬರದಂತೆ ತಡೆಯಲು ಪ್ರತಿ ಮೂರು ವರ್ಷಗಳಿಗೊಮ್ಮೆ ಅಲ್ಟಾಸೌಂಡ್ ಮಾಡಬೇಕು.

ಪ್ಯಾಪ್ ಸ್ಮೀಯರ್ ಪರೀಕ್ಷೆ: ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಲು ಇದನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಮಾಡಬೇಕು.

ಲೈಂಗಿಕವಾಗಿ ಹರಡುವ ಸೋಂಕುಗಳ ತಪಾಸಣೆ: ಈ ತಪಾಸಣೆಯನ್ನು ವಾರ್ಷಿಕವಾಗಿ ಮಾಡಬೆಕಾಗುತ್ತದೆ.

ಇದನ್ನೂ ಓದಿ: Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ

40 ವರ್ಷ ವಯಸ್ಸಿನ ನಂತರದಲ್ಲಿ ಮಾಡಬೇಕಾದ ಹೆಚ್ಚುವರಿ ಪರೀಕ್ಷೆಗಳು:

ಮಲ ಅತೀಂದ್ರಿಯ ರಕ್ತ ಪರೀಕ್ಷೆ: ಕರುಳಿನ ಕ್ಯಾನ್ಸರ್ ಚಿಹ್ನೆಗಳನ್ನು ಮೊದಲೆ ಪತ್ತೆಹಚ್ಚಲು ಈ ಪರೀಕ್ಷೆಯನ್ನು ಮಾಡಬಹುದು.

ಪ್ರಾಸ್ಟೇಟ್ ಗ್ರಂಥಿ ಪರೀಕ್ಷೆ: ಇದು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ್ನು ಪತ್ತೆಹಚ್ಚಲು ಮಾಡಬೇಕಾದ ಪರೀಕ್ಷೆಯಾಗಿದೆ.

ಮ್ಯಾಮೊಗ್ರಾಮ್: ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣದ ಪತ್ತೆಗಾಗಿ ಮಹಿಳೆಯರು ಈ ಪರೀಕ್ಷೆಯನ್ನು ವಾರ್ಷಿಕವಾಗಿ ಮಾಡಬೇಕು.

ಇಸಿಜಿ-ಎಲೆಕ್ಟೊಕಾಡಿಯೋಗ್ರಾಮ್: ಹೃದ್ರೋಗದ ಆರಂಭಿಕ ಪತ್ತೆಗಾಗಿ ಈ ಪರೀಕ್ಷೆಯನ್ನು ವಾರ್ಷಿಕವಾಗಿ ಮಾಡಬೇಕು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ