ಸೈಲೆಂಟ್ ಆಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಬೆಳಗಿನ ಅಭ್ಯಾಸಗಳಿವು

ನಿಮ್ಮ ಆರೋಗ್ಯಕರ ಅಭ್ಯಾಸಗಳು ಕೂಡ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಎಲ್ಲವೂ ಮಿತವಾಗಿದ್ದರೆ ಮಾತ್ರ ಆರೋಗ್ಯಕ್ಕೆ ಉತ್ತಮ. ಬೆಳಗ್ಗೆ ಎದ್ದು ನೀವು ಮಾಡುವ ಕೆಲವು ಒಳ್ಳೆಯ ಅಭ್ಯಾಸಗಳು ಕೂಡ ಆರೋಗ್ಯವನ್ನು ಹದಗೆಡಿಸಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.

ಸೈಲೆಂಟ್ ಆಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಬೆಳಗಿನ ಅಭ್ಯಾಸಗಳಿವು
ಸಾಂದರ್ಭಿಕ ಚಿತ್ರ

Updated on: Jan 13, 2024 | 4:00 PM

ನಮ್ಮ ಆಹಾರದ ಆಯ್ಕೆ ನಮ್ಮದೇ ಆಗಿದ್ದರೂ ಕೆಲವೊಮ್ಮೆ ನಾವು ನಾಲಿಗೆಯ ಮಾತು ಕೇಳಿಬಿಡುತ್ತೇವೆ. ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಆ ಆಹಾರವನ್ನು ಸೇವಿಸುತ್ತೇವೆ. ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯೇ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣ. ಕೆಲವೊಮ್ಮೆ ಆರೋಗ್ಯಕರವೆಂದು ಕೆಲವು ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದಲೂ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಆರೋಗ್ಯಕರ ಅಭ್ಯಾಸಗಳು ಕೂಡ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನಿಮಗೆ ತಿಳಿದಿದೆಯಾ?

ಅನಾರೋಗ್ಯಕರವಾದ ಆಹಾರ ಸೇವನೆಯಿಂದ ಮತ್ತು ಕೆಲವೊಮ್ಮೆ ಅತಿಯಾಗಿ ಆರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದಲೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹೀಗಾಗಿ, ಎಲ್ಲವೂ ಮಿತವಾಗಿದ್ದರೆ ಮಾತ್ರ ಆರೋಗ್ಯಕ್ಕೆ ಉತ್ತಮ. ಬೆಳಗ್ಗೆ ಎದ್ದು ನೀವು ಮಾಡುವ ಕೆಲವು ಒಳ್ಳೆಯ ಅಭ್ಯಾಸಗಳು ಕೂಡ ಆರೋಗ್ಯವನ್ನು ಹದಗೆಡಿಸಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸ್ತನ ಕ್ಯಾನ್ಸರ್​ನ ಐದು ಆರಂಭಿಕ ಲಕ್ಷಣಗಳು

ನಿಮ್ಮ ಹಲ್ಲುಗಳನ್ನು ನೀವು ಎಷ್ಟು ಬಾರಿ ಉಜ್ಜುತ್ತೀರಿ? ಒಂದು ಸಲ? ಎರಡು ಬಾರಿ? ಅಥವಾ ಪ್ರತಿ ಬಾರಿ ಊಟದ ನಂತರ? ಬೆತ್ರ ಹಲ್ಲು ಉಜ್ಜುವುದಾದರೆ ಅದು ಒಳ್ಳೆಯದಲ್ಲ. ಹಾಗಂತ ಪ್ರತಿ ಬಾರಿ ಊಟವಾದ ಬಳಿಕವೂ ಹಲ್ಲುಜ್ಜುವುದು ಕೂಡ ಆರೋಗ್ಯಕರವಲ್ಲ. ಹಾಗಾದರೆ ನೀವು ದಿನಕ್ಕೆ ಎಷ್ಟು ಬಾರಿ ಹಲ್ಲುಜ್ಜಬೇಕು? ದಿನಕ್ಕೆ 2 ಬಾರಿ ಹಲ್ಲುಜ್ಜಿದರೆ ಸಾಕು. ಬೆಳಿಗ್ಗೆ ಮತ್ತು ಮಲಗುವ ಮುನ್ನ ಹಲ್ಲುಜ್ಜುವುದು ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಿಂತ ಹೆಚ್ಚು ಹಲ್ಲುಜ್ಜುವುದರಿಂದ ಹಲ್ಲುಗಳು ಸವೆಯಬಹುದು. ಹಲ್ಲಿನ ನೈಸರ್ಗಿಕ ದಂತಕವಚ ಹಲ್ಲುಗಳಿಗೆ ಅವುಗಳ ಬಣ್ಣವನ್ನು ನೀಡುತ್ತದೆ. ಆದ್ದರಿಂದ, ಪ್ರತಿ ಊಟದ ನಂತರ ಹಲ್ಲುಜ್ಜುವುದು ಒಳ್ಳೆಯದಲ್ಲ.

ದಿನಕ್ಕೆ 8 ಲೋಟ ನೀರು ಕುಡಿಯಬೇಕೆಂದು ಹಲವರು ಹೇಳುತ್ತಾರೆ. ನಮ್ಮ ದೇಹಕ್ಕೆ ದಿನಕ್ಕೆ 8 ಗ್ಲಾಸ್ ನೀರು ಬೇಕು ಎಂಬುದರ ಹಿಂದೆ ಯಾವುದೇ ವಿಜ್ಞಾನವಿಲ್ಲ. ಸತ್ಯವೇನೆಂದರೆ ಅದು ದೇಹಕ್ಕೆ ಅಗತ್ಯವಿರುವ ನೀರಿನ ಒಟ್ಟು ಗುಣಮಟ್ಟವಾಗಿದೆ. ನೀವು ಸೇವಿಸುವ ಆಹಾರದಿಂದ ಕೂಡ ಸ್ವಲ್ಪ ಪ್ರಮಾಣದ ನೀರನ್ನು ಪಡೆಯುತ್ತೀರಿ. ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ನೀರು ಇರುತ್ತದೆ. ಹೀಗಾಗಿ, ನಿಮಗೆ ಬಾಯಾರಿಕೆ ಆದಾಗ ನೀರು ಕುಡಿದರೆ ಸಾಕಾಗುತ್ತದೆ.

ದೇಹಕ್ಕೆ ವರ್ಕ್ ಔಟ್ ಬಹಳ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಎಷ್ಟು ಹೊತ್ತು ವರ್ಕ್​ಔಟ್ ಮಾಡಬೇಕು? ನೀವು ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೀರಾ? ಹೌದು ಎಂದಾದರೆ ನಿಮ್ಮ ಫಿಟ್‌ನೆಸ್ ನಿಯಮಗಳನ್ನು ನೀವು ಮರುಪರಿಶೀಲಿಸಬೇಕು. ನಿಮ್ಮ ವ್ಯಾಯಾಮವನ್ನು ನೀವು ಒಂದು ದಿನ ಬಿಟ್ಟುಬಿಟ್ಟರೆ ಅಥವಾ ಒಂದೆರಡು ದಿನಗಳವರೆಗೆ ಅತಿಯಾಗಿ ಮಾಡಿದರೆ ಅದರಿಂದ ನಿಮ್ಮ ವರ್ಕ್​ಔಟ್ ಸಮತೋಲನಗೊಳ್ಳುತ್ತದೆ ಎಂದು ಅರ್ಥವಲ್ಲ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Health Care: ದಿನವೂ ವರ್ಕ್​ಔಟ್ ಮಾಡಿದ ನಂತರ ನಿಮಗೆ ಶಕ್ತಿ ನೀಡುವ 7 ಆಹಾರ​ಗಳಿವು

ವರ್ಕ್​ಔಟ್ ಚಯಾಪಚಯ ಕ್ರಿಯೆಗೆ ಒಳ್ಳೆಯದು, ಆದರೆ ನಿಮ್ಮ ಸ್ನಾಯುಗಳು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅತಿಯಾದ ವರ್ಕ್​ಔಟ್ ನಿಮ್ಮ ಫಿಟ್ನೆಸ್ ಗುರಿಯನ್ನು ಅಡ್ಡಿಪಡಿಸಬಹುದು. ಮಹಿಳೆಯರಿಗೆ ಇದು ಕೆಲವೊಮ್ಮೆ ಋತುಚಕ್ರಕ್ಕೆ ಅಡ್ಡಿಪಡಿಸುತ್ತದೆ.

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಮರೆಯಬೇಡಿ. ನಾವೆಲ್ಲರೂ ನಡೆಸುತ್ತಿರುವ ಜಡ ಮತ್ತು ಒತ್ತಡದ ಜೀವನದಲ್ಲಿ ಕಡಿಮೆ ಪ್ರಮಾಣದ ಸಕ್ಕರೆಯನ್ನು ಸೇವಿಸುವುದು ಉತ್ತಮ. ಸೋಂಕು ಮತ್ತು ರೋಗಗಳ ವಿರುದ್ಧ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಅದರ ಬದಲಾಗಿ ನೀವು ನೈಸರ್ಗಿಕ ಸಕ್ಕರೆ ಅಂಶವನ್ನು ಸೇವಿಸಬಹುದು. ಸಕ್ಕರೆಯ ಬದಲು ಬೆಲ್ಲ, ಜೇನುತುಪ್ಪ ಸೇವಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ