ಅಧಿಕ ಶುಂಠಿ ಸೇವನೆಯಿಂದ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳೇನು?

| Updated By: ನಯನಾ ರಾಜೀವ್

Updated on: May 13, 2022 | 4:31 PM

Ginger Side Effects:ಶುಂಠಿ(Ginger)ಯಲ್ಲಿ ಜೀರ್ಣಕಾರಿ ಶಕ್ತಿ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಕೆಲವು ಪಲ್ಯಗಳು, ಕೋಸಂಬರಿ, ಮಜ್ಜಿಗೆ ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಆದರೆ ಅಧಿಕ ಶುಂಠಿ ಸೇವನೆಯೂ ಕೂಡ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ

ಅಧಿಕ ಶುಂಠಿ ಸೇವನೆಯಿಂದ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳೇನು?
ಶುಂಠಿ
Follow us on

ಶುಂಠಿ(Ginger)ಯಲ್ಲಿ ಜೀರ್ಣಕಾರಿ ಶಕ್ತಿ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಕೆಲವು ಪಲ್ಯಗಳು, ಕೋಸಂಬರಿ, ಮಜ್ಜಿಗೆ ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಆದರೆ ಅಧಿಕ ಶುಂಠಿ ಸೇವನೆಯೂ ಕೂಡ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಶುಂಠಿಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳೆಸುತ್ತೇವೆ .ಕೆಮ್ಮು ,ಶೀತ ,ಜ್ವರ ಇತ್ಯಾದಿಗಳು ಬರುವ ಸೂಚನೆ ಇದ್ದರೆ ಇದನ್ನು ಹೆಚ್ಚಾಗಿ ಬಳಸುತ್ತೇವೆ. ಶುಂಠಿಯನ್ನು ಹೆಚ್ಚಾಗಿ ಮನೆಮದ್ದಾಗಿ ಬಳಸುತ್ತೇವೆ.

ಅಧಿಕ ಶುಂಠಿ ಬಳಕೆ ಬೇಡ
ಗರ್ಭಿಣಿಯರು ಶುಂಠಿಯನ್ನು ಸೇವಿಸಬೇಕೊ ಅಥವಾ ಬೇಡವೆನ್ನುವುದು ಚರ್ಚೆಗೆ ಒಳಪಟ್ಟಿದೆ. ಎದೆಹಾಲುಣಿಸುವ ಮಹಿಳೆಯರು ಇದನ್ನು ಸೇವಿಸಬೇಕು ಅಥವಾ ಬೇಡವೋ ಎಂಬುದರ ಬಗ್ಗೆಯೂ ಸರಿಯಾದ ಮಾಹಿತಿ ಲಭ್ಯವಿಲ್ಲ. ಆದರೆ ಇಂತಹ ಸಮಯದಲ್ಲಿ ಅದನ್ನು ಬಳಸದಿರುವುದು ಸೂಕ್ತ. ಇದರ ಬಗ್ಗೆ ಸಾಕಷ್ಟು ಸಂಶೋದನೆಗಳು ನಡೆದಿದೆ.
ಶುಂಠಿಯನ್ನು ಸೇವಿಸುವುದರಿಂದ ಅಪಾರ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ.

ಶುಂಠಿ ಬಳಕೆಯಿಂದಾಗುವ ಪ್ರಯೋಜನಗಳು
ಶುಂಠಿಯಲ್ಲಿರುವ ಜಿಂಜರಾಲ್ ಎಂಬ ಅಂಶವು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. 1.5 ರಿಂದ 3 ಗ್ರಾಂ ನಡುವೆ , ಕನಿಷ್ಠ ಡೋಸೇಜ್ ಅನ್ನು ಸೇವಿಸಬೇಕು ಮತ್ತು ಅದನ್ನು ಅಡುಗೆ, ನಿಂಬೆ ಶುಂಠಿ ರಸ, ಇತ್ಯಾದಿ ವಿವಿಧ ಮಾಪಕಗಳಲ್ಲಿ ಬಳಸಬಹುದು.

  • ಸೀಡಲ್ ಟ್ರಿನಿಡೇಡ್, ಹಿರಿಯ ಅಧಿಕಾರಿ, ಡಯೆಟಿಟಿಕ್ಸ್, ಪಿ.ಡಿ.ಹಿಂದುಜಾ ಆಸ್ಪತ್ರೆ ಮತ್ತು ಎಂಆರ್‌ಸಿ ಪ್ರಕಾರ ಶುಂಠಿ ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸುತ್ತಾರೆ. ಜೀರ್ಣಕ್ರಿಯೆಯಲ್ಲಿ ಶುಂಠಿ, ವಾಕರಿಕೆ ತಡೆಯುತ್ತದೆ ಮತ್ತು ಉರಿಯೂತದ ಗುಣಗಳನ್ನು ಹೋಗಲಾಡಿಸುತ್ತದೆ.
  • ಪ್ರತಿದಿನ ಶುಂಠಿಯ ಸೇವನೆಯಿಂದ ಚಯಾಪಚಯ ಕ್ರಿಯೆಯು ಉತ್ತಮವಾಗಿರುತ್ತದೆ. ಶುಂಠಿಯನ್ನು ಉತ್ತಮ ಘಮ ಬರಲು ಮತ್ತು ಇದು ತುಂಬಾ ಹೆಸರುವಾಸಿಯಾದ ಸಾಂಬರ್ ಪದಾರ್ಥವಾಗಿದೆ. ಪ್ರಪಂಚದಾದ್ಯಂತ ಇದನ್ನು ಆಹಾರ ಪದಾರ್ಥಗಳಲ್ಲಿ ಮತ್ತು ಔಷಧಿಗಳಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ರೈಜೋಮೋ ಎಂಬ ಅಂಶವಿದ್ದು, ಗಾಢವಾದ ವಾಸನೆ ಮತ್ತು ರುಚಿಯನ್ನು ನೀಡುತ್ತದೆ.
  • ಪ್ರತಿದಿನ ಸುಮಾರು 120 ಮಿಗ್ರಾಂ ಶುಂಠಿ ಸಾರವನ್ನು 21 ದಿನಗಳವರೆಗೆ ನೀಡುವುದರಿಂದ ವೆಂಟಿಲೇಟರ್ ಬೆಂಬಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಠಾತ್ ಉಸಿರಾಟದ ವ್ಯವಸ್ಥೆಯ ವೈಫಲ್ಯದಿಂದ ಬಳಲುತ್ತಿರುವ ಜನರಲ್ಲಿ ತೀವ್ರ ನಿಗಾ ಘಟಕಗಳನ್ನು ಕಳೆಯುವ ಗಮನಾರ್ಹ ಸಮಯವನ್ನು ಸಂಶೋಧನೆಯು ಸೂಚಿಸುತ್ತದೆ. ಆದರೆ ಇದರ ಪ್ರಮಾಣ ಎಷ್ಟಿರಬೇಕು ಎಂಬುದರ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ಫಲಿತಾಂಶ ಉತ್ತಮವಾಗಿರುತ್ತದೆ.
  • ಶುಂಠಿ ಏಷ್ಯಾದ ಬೆಚ್ಚಗಿನ ಭಾಗಗಳಲ್ಲಿ, ಚೀನಾ, ಜಪಾನ್ ಮತ್ತು ಭಾರತದಂತಹ ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ, ಆದರೆ ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿಯೂ ಇದನ್ನು ಬೆಳೆಯಲಾಗುತ್ತದೆ. ಶುಂಠಿಯ ಬಹು ಉಪಯೋಗಿಯಾಗಿದೆ.
  • ಇದನ್ನು ಮಧುಮೇಹ, ಋತುಚಕ್ರದಲ್ಲಿ ಬರುವಂತಹ ನೋವು, ಮೈಗ್ರೇನ್, ತಲೆನೋವು ಮತ್ತು ಸಂಧಿವಾತಗಳ ನೋವಿಗೆ ಬಳಸಲಾಗುತ್ತದೆ. ಶುಂಠಿಯನ್ನು ಆಹಾರ ಪದಾರ್ಥಗಳಲ್ಲಿ ಉತ್ತಮ ಘಮ ನೀಡಲು ಬಳಸಲಾಗುತ್ತದೆ. ಶುಂಠಿಯಲ್ಲಿರುವ ರಾಸಾಯನಿಕ ಒಂದನ್ನು ಔಷಧಿಗಳಲ್ಲಿಯು ಸಹ ಬಳಸಲಾಗುತ್ತದೆ.ಸಾಂಬಾರು ಪದಾರ್ಥಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಪದಾರ್ಥ ಇದಾಗಿದೆ.

 

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:30 pm, Fri, 13 May 22