GMO : ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ತಳೀಯವಾಗಿ ಮಾರ್ಪಡಿಸಿದ ಆಹಾರವು ಪ್ರಮುಖವಾಗಿದೆ

ಭಾರತದಲ್ಲಿ 33 ಲಕ್ಷ ಮಕ್ಕಳ ಅಪೌಷ್ಠಿಕತೆ ಹಾಗೂ ಅದರಲ್ಲಿ ಅರ್ಧದಷ್ಟು, ತೀವ್ರ ವರ್ಗಕ್ಕೆ ಸೇರಿದ್ದಾರೆ ಎಂಬ ಅಂಶವನ್ನು ಬಯಲು ಮಾಡಿದೆ. ತಜ್ಞರ ಪ್ರಕಾರ, ಭಾರತ ಉತ್ತಮ ಗುಣಮಟ್ಟದ ಪೋಷಕಯುಕ್ತ ಆಹಾರ ಉತ್ಪಾದಿಸಲು ಬದಲಾಗುತ್ತಿರುವ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ.

GMO : ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ತಳೀಯವಾಗಿ ಮಾರ್ಪಡಿಸಿದ ಆಹಾರವು ಪ್ರಮುಖವಾಗಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:May 13, 2022 | 3:22 PM

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಳಿ ಮಾರ್ಪಡಿಸಿದ ಆಹಾರ , ಪೌಷ್ಟಿಕ ಭದ್ರತೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಸಿವು ಒಂದು ಬಹುದೊಡ್ಡ ಜಾಗತಿಕ ಸವಾಲಾಗಿದ್ದು, ತೀವ್ರಗತಿಯಿಂದ ಏರುತ್ತಿರುವ ಜನಸಂಖ್ಯೆಯಿಂದ ಇದು ಭವಿಷ್ಯದಲ್ಲಿ ಇನ್ನೂ ತೀವ್ರವಾಗಬಹುದು. ವಿಶ್ವ ಸಂಸ್ಥೆಯ ಒಂದು ಅಂದಾಜಿನ ಪ್ರಕಾರ, 2010ರಲ್ಲಿ 2.37 ಬಿಲಿಯನ್ ಜನರು ಆಹಾರವಿಲ್ಲದೆ ಅಥವಾ ಆರೋಗ್ಯಕರ ಸಮತೋಲನ ಆಹಾರವನ್ನು ನಿಯಮಿತವಾಗಿ ಪಡೆಯದೆ ಬಳಲಿದ್ದಾರೆ. ವಿಪರ್ಯಾಸವೆಂದರೆ, ಆಹಾರ ಧಾನ್ಯದ ಉತ್ಪಾದನೆ ಜಾಗತಿಕವಾಗಿ ದಾಖಲೆಮಟ್ಟದಲ್ಲಿದ್ದರೂ ಹಸಿವಿನಿಂದ ಕಂಗೆಡುವವರ ಸಂಖ್ಯೆ ಏರುತ್ತಿದೆ. ಇಂತಹ ಸನ್ನಿವೇಶದಲ್ಲಿ ತಳಿ ಮಾರ್ಪಡಿಸಿದ ಅಥವಾ ಕುಲಾಂತರಿ ಬೆಳೆಗಳು 2030ರ ವೇಳೆಗೆ ಶೂನ್ಯ ಹಸಿವು ಗುರಿಯನ್ನು ಸಾಧಿಸಲು ಪ್ರಮುಖ ಪಾತ್ರ ವಹಿಸಬಹುದು. ಕುಲಾಂತರಿ ಬೆಳೆಯಲ್ಲಿ ಸಸ್ಯಗಳನ್ನು ತಳಿ ತಂತ್ರಜ್ಞಾನದಿಂದ ಮಾರ್ಪಡಿಸಿ ಉತ್ತಮ ಇಳುವರಿ ಹಾಗೂ ಕೀಟ ವಿರೋಧಿ ಗುಣಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ರೈತರಿಗೆ ಉತ್ತಮ ಉತ್ಪನ್ನ ಪಡೆಯುವಲ್ಲಿ ಹಾಗೂ ಸ್ಥಳೀಯ ಮತ್ತು ಋತುಮಾನದ ಪರಿಸರ ಸವಾಲುಗಳನ್ನು ನಿಭಾಯಿಸುವಲ್ಲಿ ನೆರವಾಗಲಿದೆ. ಕೆಲವೊಂದು ಕುಲಾಂತರಿ ಬೆಳೆಗಳಲ್ಲಿ ಪೌಷ್ಠಿಕತೆ, ವಿಟಮಿನ್ ಗಳು, ಖನಿಜಗಳನ್ನು ವೃದ್ಧಿಸಿ, ಅಪೌಷ್ಟಿಕತೆ ಹಾಗೂ ಮಕ್ಕಳ ಬೆಳವಣಿಗೆ ಕುಂಠಿತವಾಗುವುದನ್ನು ಹತ್ತಿಕ್ಕುವಂತೆ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಕುಲಾಂತರಿ ಬೆಳೆಗಳು ಅಪೌಷ್ಠಿಕತೆಯ ವಿಚಾರಗಳನ್ನು ನಿರ್ವಹಿಸಲು ಸಮರ್ಥ ಮಾಧ್ಯಮವಾಗಬಹುದು.

ಇತ್ತೀಚೆಗೆ, ಮಾಹಿತಿ ಹಕ್ಕು ಪ್ರಶ್ನೆಯಲ್ಲಿ, ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಭಾರತದಲ್ಲಿ 33 ಲಕ್ಷ ಮಕ್ಕಳ ಅಪೌಷ್ಠಿಕತೆ ಹಾಗೂ ಅದರಲ್ಲಿ ಅರ್ಧದಷ್ಟು, ತೀವ್ರ ವರ್ಗಕ್ಕೆ ಸೇರಿದ್ದಾರೆ ಎಂಬ ಅಂಶವನ್ನು ಬಯಲು ಮಾಡಿದೆ. ತಜ್ಞರ ಪ್ರಕಾರ, ಭಾರತ ಉತ್ತಮ ಗುಣಮಟ್ಟದ ಪೋಷಕಯುಕ್ತ ಆಹಾರ ಉತ್ಪಾದಿಸಲು ಬದಲಾಗುತ್ತಿರುವ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಖ್ಯಾತ ಪ್ಲಾಂಟ್ ಬಯೋ ಟೆಕ್ನಾಲಾಜಿಸ್ಟ್ ಮತ್ತು ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜಿನೆಟಿಕ್ ರಿಸೋರ್ಸ್ ಸ್ (ಐಸಿಎಆರ್) ನ ನಿರ್ದೇಶಕ ಪ್ರೊ. ಕೆ.ಸಿ. ಬನ್ಸಾಲ್ ಹೇಳುತ್ತಾರೆ, “ನಾವು ನಮ್ಮ ಆಹಾರದ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಸಾಂಪ್ರಾದಾಯಿಕ ವಿಧಾನಗಳನ್ನು ಬಳಸುತ್ತಿದ್ದು, ಇಂದಿನ ದಿನಗಲ್ಲಿ ನಿಗದಿತ ಖನಿಜಗಳು ಹಾಗೂ ಪೌಷ್ಠಿಕತೆಯನ್ನು ನಮ್ಮ ಆಹಾರಕ್ಕೆ ಸೇರಿಸಬೇಕಿದ್ದರೆ, ಕಳೆದ 25 ವರ್ಷದಿಂದ ರುಜುವಾತಾಗಿರುವ ತಳಿ ತಂತ್ರಜ್ಞಾನವನ್ನು ಅಪ್ಪಿಕೊಳ್ಳಬೇಕಾಗಿದೆ ” ಎಂದು.

ಮೊಟ್ಟ ಮೊದಲ ಬಾರಿಗೆ ಕುಲಾಂತರಿ ಬೆಳೆಗಳನ್ನು 1996ರಲ್ಲಿ ಅಮೆರಿಕದಲ್ಲಿ ಬೆಳೆಸಲಾಯಿತು. ಐಎಸ್ಎಎಎ (International Service for the acquisition of Agri –biotech Application ) ಪ್ರಕಾರ 2019ರಲ್ಲಿ, 190 ಮಿಲಿಯನ್ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಕುಲಾಂತರಿ ಬೆಳೆಗಳನ್ನು ಸುಮಾರು 29 ರಾಷ್ಟ್ರಗಳ 17 ಮಿಲಿಯನ್ ರೈತರು ಕೃಷಿ ಮಾಡಿದ್ದರು. ಆದಾಗ್ಯೂ ಕುಲಾಂತರಿ ಬೆಳೆಗಳ ಬೀಜಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ದೊಡ್ಡ ಸಂಸ್ಥೆಗಳಿಂದ ತಯಾರಿಸಲ್ಪಟ್ಟಿತ್ತು. ಈ ವೇಳೆ ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಅವುಗಳ ಪೌಷ್ಟಿಕ ಸವಾಲುಗಳನ್ನು ಎದುರಿಸಲು ಕುಲಾಂತರಿ ಬೆಳೆಗಳ ಅಗತ್ಯವಿದ್ದು, ಈ ದೇಶಗಳಲ್ಲಿ ಈ ಹೊಸ ತಂತ್ರಜ್ಞಾನದ ಅಥವಾ ಕುಲಾಂತರಿ ಬೆಳೆಗಳ ಬೀಜಗಳು ಅತಿ ವಿರಳ . ಇದಕ್ಕೂ ಮಿಗಿಲಾಗಿ ಪರಿಸರದ ಮೇಲಾಗುವ ಪರಿಣಾಮದ ಕುರಿತು ಕಾಳಜಿ, ಸ್ಥಳೀಯ ಬೆಲೆ ವೈವಿಧ್ಯಗಳ ಸುರಕ್ಷತೆ ಹಾಗೂ ಆರೋಗ್ಯ ಸಂಬಂಧಿತ ವಿಚಾರಗಳು, ಜೊತೆಗೆ ನಿರ್ಬಂಧಿತ ನಿಯಮಗಳು ಕುಲಾಂತರಿ ಬೆಳೆಗಳ ವ್ಯಾಪಕ ಅಳವಡಿಕೆಗೆ ಅಡ್ಡಿಯಾಗಿವೆ.

ಪ್ರೊ. ಬನ್ಸಾಲ್ ಹೇಳುತ್ತಾರೆ, “ಪ್ರಸ್ತುತ 15 ಕುಲಾಂತರಿ ಆಹಾರ ಬೆಳೆಗಳನ್ನು ವಿಶ್ವದಲ್ಲಿ ವಾಣೀಜ್ಯೀಕರಣ ಮಾಡಲಾಗಿದ್ದು, ಇದರಲ್ಲಿ ಭಾರತದ ಬಿ.ಟಿ. ಕಾಟನ್ ಕೂಡ ಸೇರಿದೆ. ಕುಲಾಂತರಿ ತಳಿ ತಂತ್ರಜ್ಞಾನದ ಜೊತೆಗೆ ಭಾರತ ಜಿನೋಮ್ ಎಡಿಟಿಂಗ್ ನಂತಹ ಹೊಸ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಅಗತ್ಯವಿದೆ. ಜೊತೆಗೆ ಈ ತಂತ್ರಜ್ಞಾನಗಳು ಆಹಾರದ ಪೌಷ್ಟಿಕ ಮೌಲ್ಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲಿವೆ.” ಕುಲಾಂತರಿ ಬೆಳೆಗಳು ಭಾರತದಲ್ಲಿ ರೈತರಿಗೆ ಹವಾಮಾನ ವೈಪರೀತ್ಯ ಹಾಗೂ ಸಂಕುಚಿತವಾಗುತ್ತಿರುವ ನೀರಿನ ಹಾಗೂ ಭೂಮಿ ಸಂಪನ್ಮೂಲಗಳ ಸವಾಲುಗಳನ್ನು ಸುಸ್ಥಿರವಾಗಿ ಎದುರಿಸಲು ರೈತರಿಗೆ ನೆರವಾಗಲಿದೆ.

ಪ್ರೊ. ಬನ್ಸಾಲ್ ಬಲವಾಗಿ ಪ್ರತಿಪಾದಿಸುತ್ತಾರೆ, “ಹವಾಮಾನ ವೈಪರೀತ್ಯದಿಂದಾಗಿ ನಮ್ಮ ಭೂಮಿ ಹಾಗೂ ಜಲ ಸಂಪನ್ಮೂಲ ಇಳಿಮುಖವಾಗುತ್ತಿದೆ. ಆದ್ದರಿಂದ ತಳಿ ಮಾರ್ಪಾಡಿನಂತಹ ತಂತ್ರಜ್ಞಾನವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಬಳಸುವ ಪ್ರಾಮುಖ್ಯತೆ ಇಂದು ಬಂದಿದೆ. ಕುಲಾಂತರಿ ತಳಿಯಿಂದ ಅಭಿವೃದ್ಧಿಪಡಿಸಿದ ಬೆಳೆಗಳು , ಅನಿಯಮಿತ ಹವಾಮಾನ ಏರಿಳಿತದ ಪರಿಸ್ಥಿತಿಯನ್ನು ತಡೆದುಕೊಳ್ಳುವ ಜೊತೆಗೆ ಕಡಿಮೆ ನೀರು ಹಾಗೂ ಮಣ್ಣಿನ ಸಂಪನ್ಮೂಲದಲ್ಲಿ ಬೆಳೆಯಬಲ್ಲದು ”. ಕುಲಾಂತರಿ ಬೆಳೆಗಳು ಇಂದಿನ ಗೊಂದಲಮಯ ಕಾಲಘಟ್ಟದಲ್ಲಿ ಭವಿಷ್ಯದ ಆಹಾರ ಭದ್ರತೆಯನ್ನು ಒದಗಿಸುವ ಮಾರ್ಗಕ್ಕೆ ನಾಂದಿ ಹಾಡಬಹುದು.

ಇನ್ನಷ್ಟು ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:09 pm, Fri, 13 May 22

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ