ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಜೀವನದ ಪರಿಸ್ಥಿತಿಗಳನ್ನು ನಿಭಾಯಿಸಲು, ಅರಿವು, ಭಾವನೆ, ಮನಸ್ಥಿತಿ ಮತ್ತು ನಡುವಳಿಕೆಯ ಕಾರ್ಯವನ್ನು ಉತ್ತಮಗೊಳಿಸಲು ಮೆದುಳಿನ ಆರೋಗ್ಯ ಅತಿ ಮುಖ್ಯವಾಗಿದೆ. ನೀವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದಾದರೆ ಜೀವನ ಶೈಲಿಯಲ್ಲಿನ ಈ ಕೆಲವು ಬದಲಾವಣೆಗಳು ಮುಖ್ಯವಾಗಿರುತ್ತದೆ. ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಬಯಸಿದ್ದರೆ, ಆ ಕುರಿತಾಗಿ ಹೆಚ್ಚು ಚಿಂತಿಸುತ್ತಿದ್ದರೆ ಈ ಕೆಲವು ಟಿಪ್ಸ್ಗಳು ನಿಮಗಾಗಿ. ಇವು ನಿಮ್ಮ ಪರಿಪೂರ್ಣ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸಲು ಉತ್ತಮ ದಾರಿ ಇಲ್ಲಿದೆ.
ಹಣ್ಣು ಮತ್ತು ತರಕಾರಿಗಳು
ಮೆದುಳಿನ ಆರೋಗ್ಯಕ್ಕೆ ಫ್ಲೇವೊನೈಡ್ ಭರಿತ ಆಹಾರ ಅವಶ್ಯಕ ಎಂದು ಅಧ್ಯಯನಗಳು ತಿಳಿಸಿವೆ. ಪೌಷ್ಟಿಕಯುಕ್ತ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಮೆದುಳಿನ ಸಾಮರ್ಥ್ಯವನ್ನು ಇನ್ನಷ್ಟು ಚುರುಕುಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಿ
ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಇದು ಆಲೋಚನಾ ಶಕ್ತಿ ಮತ್ತು ಸ್ಮರಣೆಯನ್ನು ಮತ್ತಷ್ಟು ಕುಂಠಿತಗೊಳಿಸುತ್ತದೆ. ಇದು ನಿಮ್ಮ ಮೆದುಳಿನ ಕಾರ್ಯವನ್ನು ನಿಧಾನಗೊಳಿಸುವ ಮೂಲಕ ನಿಮ್ಮ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ದಿನಕ್ಕೆ 10 ನಿಮಿಷಗಳ ಕಾಲ ನಡಿಗೆ
ವಯಸ್ಸಾದ ಮೆದುಳಿಗೆ ನಡಿಗೆ ಉತ್ತಮ ಆರೋಗ್ಯ ಸುಧಾರಣೆಗೆ ಅವಶ್ಯಕ. ಸ್ಮರಣೆ ಮತ್ತು ನೆನಪಿನ ಶಕ್ತಿ ಕುಂಠಿತಗೊಳ್ಳುವವರಿಗೆ ವೇಗದ ನಡಿಗೆ ಮತ್ತು ನಿಯಮಿತ ವ್ಯಾಯಾಮ ಸ್ಮರಣೆ ಸುಧಾರಣೆಗೆ ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮವು ಮೆದುಳಿಗೆ ರಕ್ತದ ಹರಿವನ್ನು ನಿಯಂತ್ರಿಸುತ್ತದೆ.
ಆಲ್ಕೋಹಾಲ್ ಸೇವನೆ ತಪ್ಪಿಸುವುದು
ಅಧಿಕ ಆಲ್ಕೋಹಾಲ್ ಸೇವನೆಯು ನಿಮ್ಮ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಅಧ್ಯಯನಗಳೂ ಸಹ ನಡೆದಿವೆ. ಆಲ್ಕೋಹಾಲ್ ಸೇವನೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ಆಲ್ಕೋಹಾಲ್ ಕೇವಲ ಮೆದುಳಿನ ಸಮಸ್ಯೆಯೊಂದೇ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳನ್ನೂ ಸಹ ತಂದೊಡ್ಡುತ್ತದೆ. ಹಾಗಾಗಿ ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ:
ಬ್ರೇನ್ ಡೆಡ್ ಆದ ಮಹಿಳೆ 3 ಜನರ ಜೀವ ಉಳಿಸಿದಳು; ಮನಮಿಡಿಯುವ ಕಥೆಯಿದು
Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ
Published On - 12:48 pm, Tue, 5 October 21