AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ultra-Processed Food: ಮಧುಮೇಹದ ಅಪಾಯವನ್ನು ಹೆಚ್ಚಿಸುವ ಈ ಆಹಾರಗಳನ್ನು ಸೇವನೆ ಮಾಡಬೇಡಿ

ಜನರು ಆರೋಗ್ಯ ಕಾಪಾಡಿಕೊಳ್ಳುವುದರ ಬದಲು ಅದನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಅಲ್ಟ್ರಾ-ಸಂಸ್ಕರಿಸಿದ ಆಹಾರದ (Ultra-Processed Food) ಸೇವನೆ ಹೆಚ್ಚಾಗುತ್ತಿದ್ದು ಇದು ಎಷ್ಟರ ಮಟ್ಟಿಗೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಸಿದ್ಧ(ಪ್ಯಾಕ್‌ ಮಾಡಿದ) ಆಹಾರಗಳು ಹೆಚ್ಚಾಗಿ ಉಪ್ಪು, ಸಕ್ಕರೆ ಹಾಗೂ ಸಂರಕ್ಷಕಗಳಿಂದ ಅಡಕವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ ಅಧ್ಯಯನವೊಂದು ಅಲ್ಟ್ರಾ- ಸಂಸ್ಕರಿಸಿದ ಆಹಾರಗಳು ಟೈಪ್ 2 ಮಧುಮೇಹವನ್ನು ಹೆಚ್ಚಿಸಬಹುದು. ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಪದೇ ಪದೇ ಸೇವನೆ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ತೀರಾ ಹದಗೆಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Ultra-Processed Food: ಮಧುಮೇಹದ ಅಪಾಯವನ್ನು ಹೆಚ್ಚಿಸುವ ಈ ಆಹಾರಗಳನ್ನು ಸೇವನೆ ಮಾಡಬೇಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 18, 2024 | 12:06 PM

Share

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯ ಕಾಪಾಡಿಕೊಳ್ಳುವುದರ ಬದಲು ಅದನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಅಲ್ಟ್ರಾ-ಸಂಸ್ಕರಿಸಿದ ಆಹಾರದ (Ultra-Processed Food) ಸೇವನೆ ಹೆಚ್ಚಾಗುತ್ತಿದ್ದು ಇದು ಎಷ್ಟರ ಮಟ್ಟಿಗೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಸಿದ್ಧ(ಪ್ಯಾಕ್‌ ಮಾಡಿದ) ಆಹಾರಗಳು ಹೆಚ್ಚಾಗಿ ಉಪ್ಪು, ಸಕ್ಕರೆ ಹಾಗೂ ಸಂರಕ್ಷಕಗಳಿಂದ ಅಡಕವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ ಅಧ್ಯಯನವೊಂದು ಅಲ್ಟ್ರಾ- ಸಂಸ್ಕರಿಸಿದ ಆಹಾರಗಳು ಟೈಪ್ 2 ಮಧುಮೇಹವನ್ನು ಹೆಚ್ಚಿಸಬಹುದು. ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಪದೇ ಪದೇ ಸೇವನೆ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ತೀರಾ ಹದಗೆಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು (ಯುಪಿಎಫ್) ಎಂದರೇನು?

ಇವು ಸಾಮಾನ್ಯವಾಗಿ ಹೆಚ್ಚು ಸಂಸ್ಕರಿಸಿದ ಆಹಾರಗಳಾಗಿದ್ದು ಇವುಗಳಿಗೆ ಹೆಚ್ಚಾಗಿ ಕೃತಕ ರುಚಿ, ಬಣ್ಣಗಳು, ಸಿಹಿಕಾರಕಗಳು ಮತ್ತು ಸಂರಕ್ಷಕಗಳನ್ನು ಸೇರಿಸಲಾಗಿರುತ್ತದೆ. ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ – ಯುರೋಪ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೆಲವು ಆಹಾರಗಳನ್ನು ಸೇವನೆ ಮಾಡಬಾರದು ಎಂದಿದೆ. ಅವುಗಳೆಂದರೆ,

*ಪ್ಯಾಕೇಜ್ ಮಾಡಿದ ತಿಂಡಿಗಳು ಅಂದರೆ ಚಿಪ್ಸ್, ಕುಕೀ, ಕ್ಯಾಂಡಿಗಳು

*ಸಿದ್ಧವಾಗಿರುವ ಅಥವಾ ರೆಡಿಯಾಗಿರುವ ಊಟ, ಮೈಕ್ರೋವೇವ್ ಮಾಡಬಹುದಾದ ಆಹಾರಗಳು

*ಸಂಸ್ಕರಿಸಿದ ಮಾಂಸಗಳು ಅಂದರೆ ಸಾಸೇಜ್ಗಳು, ಬೇಕನ್ ಮಾಂಸಗಳು

*ಸೋಡಾ ಮತ್ತು ಸಿಹಿಯಾದ ಪಾನೀಯಗಳು

ಈ ಅಧ್ಯಯನಕ್ಕಾಗಿ, ಸಂಶೋಧಕರು ಎಂಟು ಯುರೋಪಿಯನ್ ದೇಶಗಳ ಸುಮಾರು 312,000 ಜನರ ಯುಪಿಎಫ್ ಬಳಕೆಯನ್ನು ವಿಶ್ಲೇಷಿಸಿದ್ದು, ಭಾಗವಹಿಸುವವರನ್ನು ಸರಾಸರಿ 11 ವರ್ಷಗಳ ಕಾಲ ಟ್ರ್ಯಾಕ್ ಮಾಡಲಾಗಿದೆ. ಆ ಸಮಯದಲ್ಲಿ, ಸುಮಾರು 15,000 ಜನರಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗಿದೆ ಎಂಬುದು ಕಂಡು ಬಂದಿದೆ.

ಇದನ್ನೂ ಓದಿ: ವ್ಯಕ್ತಿಯ ಅತಿಯಾದ ಎತ್ತರವು ಕ್ಯಾನ್ಸರ್​ಗೆ ಕಾರಣವಾಗಬಹುದೇ? ಸಂಶೋಧನೆ ಹೇಳುವುದೇನು?

ಟೈಪ್ 2 ಮಧುಮೇಹದ ಅಪಾಯವನ್ನು ಹೇಗೆ ಕಡಿಮೆ ಮಾಡಬಹುದು?

ಮೊಟ್ಟೆ, ಹಾಲು ಮತ್ತು ಹಣ್ಣುಗಳಂತಹ ಸಂಸ್ಕರಿಸದ ಅಥವಾ ಕನಿಷ್ಠ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿ ಜೀವಕೋಶಗಳಿಗೆ ಹಾನಿಯಾಗಬಹುದು, ಅಲ್ಲದೆ ಇವು ದೀರ್ಘಕಾಲದ ಉರಿಯೂತವನ್ನು ಪ್ರಚೋದಿಸುತ್ತದೆ, ಇದು ಹೃದ್ರೋಗ, ಮಧುಮೇಹ, ಯಕೃತ್ತಿನ ಕಾಯಿಲೆ ಮತ್ತು ಕ್ಯಾನ್ಸರ್ ಗೆ ಸಂಬಂಧಿಸಿದೆ. ಯುಪಿಎಫ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಇದಕ್ಕೆಲ್ಲಾ ಪರಿಹಾರವಾಗಿದೆ. ಅಲ್ಲದೆ ಇದನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ