
ಚಳಿಗಾಲದಲ್ಲಿ ಥೈರಾಯ್ಡ್ (Thyroid) ರೋಗಿಗಳು ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಶೀತ ಹೆಚ್ಚಾದಂತೆ, ದೇಹದಲ್ಲಿ ಆಲಸ್ಯ, ಆಯಾಸ, ತೂಕ ಹೆಚ್ಚಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಅದರಲ್ಲಿಯೂ ಥೈರಾಯ್ಡ್ ಇರುವಾಗ, ಔಷಧಿಗಳ ಜೊತೆಗೆ, ಸರಿಯಾದ ಆಹಾರ ಸೇವನೆಯೂ ಸಹ ಬಹಳ ಮುಖ್ಯವಾಗುತ್ತದೆ. ಹೆಚ್ಚು ಹುರಿದ ಮತ್ತು ಸಿಹಿ ಅಂಶವಿರುವ ಆಹಾರ ಸೇವನೆ ಥೈರಾಯ್ಡ್ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಈ ರೀತಿಯ ಅನುಚಿತ ಆಹಾರ ಪದ್ಧತಿ, ಔಷಧಿಗಳ ಪರಿಣಾಮವನ್ನು ಕೂಡ ಕಡಿಮೆ ಮಾಡಬಹುದು. ಹಾಗಾಗಿ ರೋಗಲಕ್ಷಣಗಳು ನಿಯಂತ್ರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯವಾಗುತ್ತದೆ. ಹಾಗಾದರೆ, ಥೈರಾಯ್ಡ್ ರೋಗಿಗಳು ಚಳಿಗಾಲದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡಾ. ಅಮಿತ್ ಕುಮಾರ್ ಅವರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಥೈರಾಯ್ಡ್ ಸಮಸ್ಯೆ ಇರುವವರು ಹೊರಗೆ ಸಿಗುವ ಹುರಿದ, ಮಸಾಲೆಯುಕ್ತ ಮತ್ತು ಜಂಕ್ ಫುಡ್‌ಗಳನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇವು ತೂಕ ಹೆಚ್ಚಾಗಲು ಮತ್ತು ಆಯಾಸವನ್ನು ಹೆಚ್ಚಿಸಲು ಕಾರಣವಾಗಬಹುದು. ಸೋಯಾ ಮತ್ತು ಸೋಯಾ ಆಧಾರಿತ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಥೈರಾಯ್ಡ್ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸಬಹುದು. ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯಂತಹ ತರಕಾರಿಗಳನ್ನು ಕಚ್ಚಾ ರೂಪದಲ್ಲಿ ಅತಿಯಾಗಿ ತಿನ್ನುವುದು ಸಹ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೆಚ್ಚುವರಿಯಾಗಿ, ಹೆಚ್ಚು ಸಕ್ಕರೆ, ಸಂಸ್ಕರಿಸಿದ ಹಿಟ್ಟು ಮತ್ತು ಬೇಕರಿ ಉತ್ಪನ್ನಗಳನ್ನು ಸೇವಿಸುವುದು ಹಾನಿಕಾರಕವಾಗಿದೆ. ಚಳಿಗಾಲದಲ್ಲಿ ಚಹಾ ಮತ್ತು ಕಾಫಿಯನ್ನು ಅತಿಯಾಗಿ ಸೇವಿಸುವುದು ಥೈರಾಯ್ಡ್ ರೋಗಿಗಳಿಗೆ ಸೂಕ್ತವಲ್ಲ. ಆದ್ದರಿಂದ, ಈ ಆಹಾರಗಳನ್ನು ಸೀಮಿತಗೊಳಿಸುವುದರಿಂದ ರೋಗಲಕ್ಷಣಗಳನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.
ಚಳಿಗಾಲದಲ್ಲಿ, ಥೈರಾಯ್ಡ್ ಸಮಸ್ಯೆ ಇದ್ದವರು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಸೀಮಿತ ಪ್ರಮಾಣದಲ್ಲಿ ಬೆಚ್ಚಗಿನ ಹಾಲು, ಮೊಸರು ಮತ್ತು ಚೀಸ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಸಿರು ತರಕಾರಿ, ಕಾಲೋಚಿತ ಹಣ್ಣು ಮತ್ತು ಧಾನ್ಯಗಳು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಬಾದಾಮಿ, ವಾಲ್ನಟ್ಸ್ ಮತ್ತು ಅಗಸೆಬೀಜಗಳಂತಹ ಬೀಜಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ ಮತ್ತು ಶೀತದಿಂದ ರಕ್ಷಿಸುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವುದರಿಂದ ಆಯಾಸ ಕಡಿಮೆಯಾಗುತ್ತದೆ ದೇಹವನ್ನು ಸಕ್ರಿಯವಾಗಿರಿಸುತ್ತದೆ. ಈ ಆಹಾರಗಳು ಥೈರಾಯ್ಡ್ ರೋಗಿಗಳಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಭಾಗಗಳಲ್ಲಿ ನೋವು ಕಂಡುಬಂದರೆ ನಿರ್ಲಕ್ಷಿಸಬೇಡಿ ಇದು ಥೈರಾಯ್ಡ್ ಲಕ್ಷಣವಾಗಿರಬಹುದು!
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ