Thyroid Friendly Salt: ಥೈರಾಯ್ಡ್ ಸಮಸ್ಯೆ ಇರುವವರು ಯಾವ ಉಪ್ಪನ್ನು ತಿನ್ನಬೇಕು? ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ಥೈರಾಯ್ಡ್ ಸಮಸ್ಯೆ ಇರುವವರಿಗೆ ಅವರ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ ಮತ್ತು ಇನ್ನೂ ಕೆಲವು ಆಹಾರಗಳಿಂದ ದೂರ ಉಳಿಯಬೇಕಾಗುತ್ತದೆ. ಆದರೆ ಕೆಲವೊಮ್ಮೆ, ಥೈರಾಯ್ಡ್ ಸಮಸ್ಯೆ ಇರುವವರು ಆಹಾರದ ವಿಷಯದಲ್ಲಿ ಗೊಂದಲದಲ್ಲಿರುತ್ತಾರೆ. ಉಪ್ಪು ತಿನ್ನಬೇಕೋ? ಬೇಡವೋ? ಥೈರಾಯ್ಡ್ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬೇಕು? ಹೀಗೆ ಅನೇಕ ರೀತಿಯ ಉತ್ತರ ಸಿಗದ ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತದೆ. ಆದರೆ ಅವರ ಅನುಮಾನಗಳಿಗೆ ತಜ್ಞರು ನೀಡಿರುವಂತಹ ಮಾಹಿತಿ ಇಲ್ಲಿದೆ.

ಮಹಿಳೆಯರಲ್ಲಿ ಕಾಣಿಸುವ ಆರೋಗ್ಯ ಸಮಸ್ಯೆಗಳಲ್ಲಿ ಥೈರಾಯ್ಡ್ (Thyroid) ಕೂಡ ಒಂದಾಗಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಸುಮಾರು 40- 50 ಮಿಲಿಯನ್ (million) ಜನರು ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದ ಒತ್ತಡ (blood pressure), ಹೃದಯದ ಸಮಸ್ಯೆಯ ತರಹ ಇದು ಕೂಡ ಜನರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಜೀವನಶೈಲಿ (lifestyle), ಆಹಾರ (food), ಮಾಲಿನ್ಯ ಇತ್ಯಾದಿಗಳಿಂದ ಥೈರಾಯ್ಡ್ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಇದನ್ನು ನಿಯಂತ್ರಣದಲ್ಲಿಡುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ಇರುವವರಿಗೆ ಅವರ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ ಮತ್ತು ಇನ್ನೂ ಕೆಲವು ಆಹಾರಗಳಿಂದ ದೂರ ಉಳಿಯಬೇಕಾಗುತ್ತದೆ. ಆದರೆ ಕೆಲವೊಮ್ಮೆ, ಥೈರಾಯ್ಡ್ ಸಮಸ್ಯೆ ಇರುವವರು ಆಹಾರದ ವಿಷಯದಲ್ಲಿ ಗೊಂದಲದಲ್ಲಿರುತ್ತಾರೆ. ಉಪ್ಪು (Salt) ತಿನ್ನಬೇಕೋ? ಬೇಡವೋ? ಥೈರಾಯ್ಡ್ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬೇಕು? ಹೀಗೆ ಅನೇಕ ರೀತಿಯ ಉತ್ತರ ಸಿಗದ ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತದೆ. ಆದರೆ ಅವರ ಅನುಮಾನಗಳಿಗೆ ತಜ್ಞರು ನೀಡಿರುವಂತಹ ಮಾಹಿತಿ ಇಲ್ಲಿದೆ.
ಅಷ್ಟಕ್ಕೂ ಥೈರಾಯ್ಡ್ ಎಂದರೇನು ಗೊತ್ತಾ? ಥೈರಾಯ್ಡ್ ಗ್ರಂಥಿಯು ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯಾಗಿದೆ. ಇದು ಚಯಾಪಚಯ ಕ್ರಿಯೆಯ ವೇಗವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಇದನ್ನು ಮುಖ್ಯ ಚಯಾಪಚಯ ಗ್ರಂಥಿ ಎಂದೂ ಕರೆಯಲಾಗುತ್ತದೆ. ದೇಹದ ಚಯಾಪಚಯ ದರವನ್ನು ನಿಯಂತ್ರಿಸಲು, ಇದು ಟಿ 4 (ಥೈರಾಕ್ಸಿನ್) ಮತ್ತು ಟಿ 3 (ಟ್ರೈಯೋಡೋಥೈರೋನಿನ್) ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಅವು ನಮ್ಮ ದೇಹದಲ್ಲಿನ ಜೀವಕೋಶಗಳಿಗೆ ಶಕ್ತಿಯನ್ನು ಬಳಸಲು ನಿರ್ದೇಶಿಸುತ್ತವೆ. ಆದರೆ, ಅವು ಯಾವಾಗ ಹಾರ್ಮೋನುಗಳ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆಯೋ ಆಗ ಥೈರಾಯ್ಡ್ ಅಸ್ವಸ್ಥತೆಗಳು ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಇದರಿಂದ ಹಾರ್ಮೋನುಗಳಲ್ಲಿ ಏರುಪೇರಾಗಿ, ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಉಂಟಾಗುತ್ತದೆ. ಹಾಗಾದರೆ ಥೈರಾಯ್ಡ್ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬೇಕು? ಥೈರಾಯ್ಡ್ ಇದ್ದವರು ಉಪ್ಪನ್ನು ತಿನ್ನಬಹುದೇ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಥೈರಾಯ್ಡ್ ರೋಗಿಗಳು ಯಾವ ರೀತಿಯ ಉಪ್ಪನ್ನು ತಿನ್ನಬೇಕು?
ವೈದ್ಯರ ಪ್ರಕಾರ, ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ಉಪ್ಪಿನ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಥೈರಾಯ್ಡ್ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಗೆ ಅಯೋಡಿನ್ ಅತ್ಯಗತ್ಯ, ಆದ್ದರಿಂದ ಥೈರಾಯ್ಡ್ ರೋಗಿಗಳು ಯಾವಾಗಲೂ ಅಯೋಡೈಸ್ಡ್ ಉಪ್ಪನ್ನು (ಅಯೋಡಿನ್ ಅಂಶದ ಅನುಪಾತದೊಂದಿಗೆ ಬೆರೆಸಿದ ಉಪ್ಪನ್ನು ಅಯೋಡೈಸ್ಡ್ ಉಪ್ಪು ಎಂದು ಕರೆಯಲಾಗುತ್ತದೆ.) ಸೇವನೆ ಮಾಡಬೇಕು. ಈ ಉಪ್ಪು ಸಾಮಾನ್ಯವಾಗಿ ಸಂಸ್ಕರಿಸಿದ ಉಪ್ಪಿನ ರೂಪದಲ್ಲಿ ಲಭ್ಯವಿರುತ್ತದೆ. ಇದಕ್ಕೆ ಅಯೋಡಿನ್ ಸೇರಿಸಲಾಗುತ್ತದೆ. ಅಯೋಡೈಸ್ಡ್ ಉಪ್ಪು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹೈಪೋಥೈರಾಯ್ಡಿಸಮ್ ಅಪಾಯವನ್ನು ಕಡಿಮೆ ಮಾಡುತ್ತದೆ. ಅಯೋಡಿನ್ ಅಂಶದ ಕೊರತೆಯು ಗೊಯಿಟರ್ ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಅಯೋಡಿನ್ ಅಗತ್ಯವನ್ನು ಪೂರೈಸಲು ಅಯೋಡೈಸ್ಡ್ ಉಪ್ಪು ಅಗತ್ಯವಿದೆ.
ಇದನ್ನೂ ಓದಿ: ಪ್ರತಿದಿನ ಒಂದು ಸೀತಾಫಲ ತಿಂದರೆ ಏನಾಗುತ್ತೆ ಗೊತ್ತಾ?
ಥೈರಾಯ್ಡ್ ಸಮಸ್ಯೆ ಇರುವವರಿಗೆ ಈ ಉಪ್ಪು ಒಳ್ಳೆಯದಲ್ಲ
ಸಾಮಾನ್ಯವಾಗಿ ಥೈರಾಯ್ಡ್ ರೋಗಿಗಳು ಪಿಂಕ್ ಸಾಲ್ಟ್ ಅಥವಾ ಉಪ್ಪನ್ನು ತಿನ್ನುವುದನ್ನು ತಪ್ಪಿಸಬೇಕು ಎಂದು ಡಾ. ಸುರಿಂದರ್ ಕುಮಾರ್ ಹೇಳುತ್ತಾರೆ. ಏಕೆಂದರೆ ಈ ಉಪ್ಪಿನಲ್ಲಿ ಅಯೋಡಿನ್ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಮಿತವಾಗಿ ಬಳಕೆ ಮಾಡುವುದು ಒಳ್ಳೆಯದು. ಈ ಪಿಂಕ್ ಉಪ್ಪು ಹೈಪರ್ ಥೈರಾಯ್ಡಿಸಮ್ ನ ಉತ್ತಮ ಮೂಲವಾಗಿದೆ. ಸಾಮಾನ್ಯವಾಗಿ ಥೈರಾಯ್ಡ್ ಗೆ ಸಮುದ್ರದ ಉಪ್ಪನ್ನು ಸಹ ಶಿಫಾರಸು ಮಾಡಲಾಗುವುದಿಲ್ಲ. ಇದರಲ್ಲಿ ನೈಸರ್ಗಿಕವಾಗಿ ಅಯೋಡಿನ್ ಅಂಶ ಕಡಿಮೆ ಇರುತ್ತದೆ. ಆದರೆ ಹೈಪರ್ ಥೈರಾಯ್ಡಿಸಮ್ ನಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದು, ಆದರೆ ಅಯೋಡಿನ್ ಕೊರತೆ ಇರುವವರಿಗೆ ಅಲ್ಲ ಎಂದು ಹೇಳುತ್ತಾರೆ.
ಥೈರಾಯ್ಡ್ ಸಮಸ್ಯೆಯನ್ನು ಹೇಗೆ ನಿಯಂತ್ರಿಸುವುದು?
ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಕರವಾಗಿ ಅಥವಾ ನಿಯಂತ್ರಣದಲ್ಲಿಡುವುದು ದೊಡ್ಡ ಸವಾಲಲ್ಲ. ಥೈರಾಯ್ಡ್ ಗ್ರಂಥಿಯ ರಚನೆಗೆ ಅಯೋಡಿನ್ ಅಗತ್ಯವಿದೆ. ನಾವು ನಿಯಮಿತವಾಗಿ ನಮ್ಮ ಆಹಾರದಲ್ಲಿ ಅಯೋಡಿನ್ ಭರಿತ ಆಹಾರಗಳನ್ನು ಅಗತ್ಯ ಪ್ರಮಾಣದಲ್ಲಿ ಸೇರಿಸಿದರೆ, ನಮ್ಮ ಥೈರಾಯ್ಡ್ ಸಮತೋಲನಗೊಳ್ಳುತ್ತದೆ. ಆದ್ದರಿಂದ, ಅಯೋಡಿನ್ ಅಂಶ ತುಂಬಾ ಕಡಿಮೆ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬಾರದು. ಆಹಾರದಿಂದ ಸಮತೋಲಿತ ಪ್ರಮಾಣದ ಅಯೋಡಿನ್ ಲಭ್ಯವಿಲ್ಲದಿದ್ದಾಗ, ವೈದ್ಯರು ಕೆಲವೊಮ್ಮೆ ಅಯೋಡಿನ್ ಉಪ್ಪು, ಅಯೋಡಿನ್- ಬಲವರ್ಧಿತ ಆಹಾರಗಳನ್ನು ಶಿಫಾರಸು ಮಾಡುತ್ತಾರೆ. ಆದರೆ ಥೈರಾಯ್ಡ್ ಸಮಸ್ಯೆ ಕಂಡು ಬಂದಾಗ ವೈದ್ಯರ ಸಲಹೆಯನುಸಾರ ಆಹಾರಗಳ ಸೇವನೆ ಮಾಡುವುದು ಬಹಳ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Sat, 22 March 25