Thyroid Patients: ಥೈರಾಯ್ಡ್​​ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಲೇಬಾರದು! ಕಾರಣ ತಿಳಿಯಿರಿ

| Updated By: Skanda

Updated on: Jul 02, 2021 | 7:05 AM

ಥೈರಾಯ್ಡ್ ಸಮಸ್ಯೆ ಹೊಂದಿರುವವರು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿವಹಿಸಲೇಬೇಕು. ಇದು​ ತೂಕ ನಷ್ಟ, ನಿದ್ರಾಹೀನತೆ, ಬಾಯಾರಿಕೆ, ಅತಿಯಾದ ಬೆವರು, ದೌರ್ಬಲ್ಯ, ಆತಂಕವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.

Thyroid Patients: ಥೈರಾಯ್ಡ್​​ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಲೇಬಾರದು! ಕಾರಣ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಆರೋಗ್ಯಕರ ಜೀವನ ಶೈಲಿಯಲ್ಲಿ ಉತ್ತಮವಾದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥವನ್ನು ಸೇವಿಸುವುದು ಮುಖ್ಯ. ಆಹಾರ ಕ್ರಮ ಸರಿಯಾಗಿಲ್ಲದೆಯೇ ಅದೆಷ್ಟೋ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಈಗೀಗ ಸಾಮಾನ್ಯವೆಂಬಂತೆ ಥೈರಾಯ್ಡ್​ ಸಮಸ್ಯೆ ಕಂಡು ಬರುತ್ತಿದೆ. ಥೈರಾಯ್ಡ್​ ಗ್ರಂಥಿಯಲ್ಲಿನ ಹಾರ್ಮೋನ್​ ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ, ದೇಹವು ಸಣ್ಣ ಪ್ರಮಾಣದಲ್ಲಿ ಥೈರಾಯ್ಡ್​ ಹಾರ್ಮೋನ್​ ಉತ್ಪಾಸಿದಿಸಿದರೆ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ಪುರುಷರಿಗಿಂತ ಮಹಿಳೆಯಲ್ಲಿ ಥೈರಾಯ್ಡ್​ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಗಂಟಲು ನೋವು, ಕೂದಲು ಉದುರುವ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದ್ದರೆ ಅದು ಥೈರಾಯ್ಡ್ ಲಕ್ಷಣಗಳಾಗಿವೆ.

ಥೈರಾಯ್ಡ್​ ಸಮಸ್ಯೆಯುಳ್ಳವರು ಈ ಕೆಳಗಿನ ಆಹಾರವನ್ನು ಸೇವಿಸಬಾರದು. ಇದು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಹೊಂದಿರುವವರು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿವಹಿಸಲೇಬೇಕು. ಇದು​ ತೂಕ ನಷ್ಟ, ನಿದ್ರಾಹೀನತೆ, ಬಾಯಾರಿಕೆ, ಅತಿಯಾದ ಬೆವರು, ದೌರ್ಬಲ್ಯ, ಆತಂಕವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.

ಎಲೆಕೋಸು, ಹೂಕೋಸು
ಥೈರಾಯ್ಡ್​ ಸಮಸ್ಯೆ ಹೊಂದಿರುವವರು ಹೂಕೋಸು, ಎಲೆಕೋಸನ್ನು ಸೇವಿಸಬಾರದು. ಇದರಲ್ಲಿರುವ ಗಿಟಾರ್ನಾಯ್ಡ್ಸ್​ ಅಂಶವು ಥೈರಾಯ್ಡ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ನೀವು ಈ ತರಕಾರಿಗಳನ್ನು ಹೆಚ್ಚು ಸೇವಿಸದಿರುವುದು ಉತ್ತಮ.

ಚಹಾ ಅಥವಾ ಕೆಫೀನ್​ ಉತ್ಪನ್ನಗಳು
ಚಹಾ ಅಥವಾ ಕೆಫೀನ್​ ಉತ್ಪನ್ನಗಳು ಥೈರಾಯ್ಡ್​ ಗ್ರಂಥಿಯ ಮೇಲೆ ಪರಿಣಾಮವನ್ನು ಬೀರುತ್ತವೆ. ನಿಮ್ಮ ರಕ್ತದಲ್ಲಿನ ಥೈರಾಯ್ಡ್​ ಮಟ್ಟವನ್ನು ಕ್ರಮೇಣ ಹೆಚ್ಚಿಸುತ್ತದೆ. ಇದು ಹೆಚ್ಚಿನ ಗಂಟಲು ನೋವಿಗೆ ಕಾರಣವಾಗುತ್ತದೆ. ಹಾಗೂ ರೋಗಿಯ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

ಮಾಂಸಹಾರ ಸೇವನೆ
ಕೆಂಪು ಮಾಂಸ ಸೇವನೆಯನ್ನು ತ್ಯಜಿಸಬೇಕು. ಇದು ಸ್ಯಾಚುರೇಟೆಡ್​ ಕೊಬ್ಬು ಮತ್ತು ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಥೈರಾಯ್ಡ್​ ರೋಗಿಗಳಿಗೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಇದು ದೇಹದ ಉಷ್ಣತೆಯು ಅಸಹಜ ಮಟ್ಟಕ್ಕೆ ಏರಲು ಕಾರಣವಾಗುತ್ತದೆ. ಆದ್ದರಿಂದ ಮಾಂಸಹಾರವನ್ನು ಆದಷ್ಟು ತಪ್ಪಿಸುವುದು ಹೆಚ್ಚು ಸೂಕ್ತ.

ಸೋಯಾಬೀನ್​
ಸೋಯಾಬೀನ್​ ಇದು ದೇಹದಲ್ಲಿನ ಥೈರಾಯ್ಡ್​ ಹಾರ್ಮೋನ್​ ಉತ್ಪಾದನೆ ಹಾಗೂ ಅದಕ್ಕೆ ಸಂಬಂಧಿಸಿದ ಕಿಣ್ವಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಕಂಡುಬರುವ ಗೈಟ್ರೋಗನ್​ಗಳು ಥೈರಾಯ್ಡ್​ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಆಹಾರ ಸೇವನೆಯನ್ನು ಆದಷ್ಟು ತಪ್ಪಿಸುವುದು ಉತ್ತಮ.

ಇದನ್ನೂ ಓದಿ:

ಹಲಸಿನ ಹಣ್ಣಿನ ಬೀಜದಲ್ಲಿ ಚಟ್ನಿ ಹೇಗೆ ಮಾಡುವುದು ಅಂತೀರಾ ನೀವೇ ನೋಡಿ

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?