ವಯಸ್ಸು ಹೆಚ್ಚಾದಂತೆ, ದೇಹದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಅದರಲ್ಲಿಯೂ ನಮ್ಮ ಅನಾರೋಗ್ಯಕರ ಜೀವನಶೈಲಿಯಿಂದಾಗಿ, 35- 40 ನೇ ವಯಸ್ಸಿನಲ್ಲಿ ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಂಡು ಬರಲು ಪ್ರಾರಂಭಿಸುತ್ತವೆ. ಈ ವಯಸ್ಸಿನಲ್ಲಿ ಹೃದ್ರೋಗದಿಂದ ಯಕೃತ್ತಿನ ವರೆಗೆ ನಾನಾ ರೀತಿಯ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಹಾಗಾದರೆ 35- 40 ನೇ ವಯಸ್ಸಿನಲ್ಲಿ ಆರೋಗ್ಯವಾಗಿರಲು ಯಾವ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ.
ತಜ್ಞರು ಹೇಳುವ ಪ್ರಕಾರ, ಈ ವಯಸ್ಸಿನಲ್ಲಿ ಉತ್ತಮ ಜೀವನಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ 35- 40 ರಲ್ಲಿ, ಮೂಳೆಗಳ ಬಲವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಫಲವತ್ತತೆಯೂ ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಹೃದಯದಿಂದ ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಇದಕ್ಕೆ ಪೂರಕವಾಗಿ ಡಾ. ರಾಹುಲ್ ಚೌಧರಿ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ಹೇಳಿರುವ 4 ಪ್ರಮುಖ ವಿಷಯಗಳು ಇಲ್ಲಿವೆ.
ಇದನ್ನೂ ಓದಿ: ಗಣರಾಜ್ಯೋತ್ಸವ ನೋಡೋದಕ್ಕೆ ದಿಲ್ಲಿಗೆ ಹೋಗುವವರು ಅಲ್ಲಿನ ಈ ಚಾಟ್ಸ್ ತಿನ್ನದೇ ಬರಬೇಡಿ
*ಈ ವಯಸ್ಸಿನಲ್ಲಿ, ನೀವು ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಉದಾಹರಣೆಗೆ, ಕೊಲೆಸ್ಟ್ರಾಲ್ ಪರೀಕ್ಷೆ ಮತ್ತು ಹೃದ್ರೋಗದ ಯಾವುದೇ ಲಕ್ಷಣವಿದ್ದರೆ, ಎಕ್ಸ್- ರೇ ಮಾಡಬಹುದು.
*ಈ ವಯಸ್ಸಿನಲ್ಲಿ ರಕ್ತದೊತ್ತಡ ಸಮಸ್ಯೆಯೂ ಇದ್ದು ಇಂತಹ ಸಂದರ್ಭಗಳಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.
*ಈ ವಯಸ್ಸಿನಲ್ಲಿ, ಮಧುಮೇಹದ ಅಪಾಯವು ಹೆಚ್ಚಾಗುತ್ತದೆ, ಆದ್ದರಿಂದ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ.
*35 ರಿಂದ 40 ನೇ ವಯಸ್ಸಿನಲ್ಲಿ ಮೂಳೆ ಸಾಂದ್ರತೆ ಕಡಿಮೆಯಾಗುತ್ತದೆ, ಮತ್ತು ಮೂಳೆ ಮುರಿತದ ಅಪಾಯವೂ ಹೆಚ್ಚಾಗುತ್ತದೆ, ಆದ್ದರಿಂದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸುವುದು ಬಹಳ ಮುಖ್ಯ. ಇದು ಕಡಿಮೆಯಿದ್ದರೆ, ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕನ್ನು ಸರಿಯಾಗಿ ಪಡೆದುಕೊಳ್ಳಿ.
*35- 40 ವಯಸ್ಸಿನಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯ, ಆದರೆ ಅವುಗಳನ್ನು ನಿಭಾಯಿಸುವುದು ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ, ವಾಕಿಂಗ್, ಯೋಗದಂತಹ ಕನಿಷ್ಠ 30 ನಿಮಿಷಗಳ ಲಘು ವ್ಯಾಯಾಮವನ್ನು ಮಾಡುವುದು ಒಳ್ಳೆಯದು.
*ಆದಷ್ಟು ಫಾಸ್ಟ್ ಫುಡ್ ಸೇವನೆ ಮಾಡುವುದನ್ನು ತಪ್ಪಿಸಿ ಜೊತೆಗೆ ತಾಜಾ ಹಣ್ಣು, ತರಕಾರಿ, ಬೇಳೆ ಕಾಳುಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಿ.
*ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ.
*ಯಾವುದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡರೂ ಸಹ ಮೊದಲು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ತಡಮಾಡಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ