Health Tips: ಅರಿಶಿಣ ಹಾಲು ಸೇವಿಸಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿದಿದೆಯೇ?

| Updated By: preethi shettigar

Updated on: Sep 18, 2021 | 8:25 AM

ಹಾಲಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿರುತ್ತವೆ. ಇದು ಮೆದುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Health Tips: ಅರಿಶಿಣ ಹಾಲು ಸೇವಿಸಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿದಿದೆಯೇ?
ಸಾಂದರ್ಭಿಕ
Follow us on

ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಉತ್ತಮ ವಿಟಮಿನ್ ಇರುವ ಆಹಾರ ಸೇವಿಸುವುದರಿಂದ ನೀವು ಆರೋಗ್ಯವಾಗಿರಲು ಸಹಾಯಕವಾಗಿದೆ. ಹೆಚ್ಚಿನ ಜನರಿಗೆ ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಇರುತ್ತದೆ. ಇದರ ರುಚಿಗಾಗಿ ಸ್ವಲ್ಪ ಅರಿಶಿಣ ಪುಡಿ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹಾಲಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿರುತ್ತವೆ. ಇದು ಮೆದುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿನ ಕೋಶಗಳ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರ ಜತೆಗೆ ಅರಿಶಿಣ ಸೇರಿಸಿ ಕುಡಿಯುವ ಅಭ್ಯಾಸ ಇನ್ನೂ ಒಳ್ಳೆಯದು.

ಕೆಮ್ಮು ಮತ್ತು ನೆಗಡಿಯಂಥಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಅರಿಶಿಣ ಹಾಲು ಸಹಾಯಕ. ಅರಿಶಿಣ ಹಾಲು ಹೆಚ್ಚು ಆರೋಗ್ಯಕರ ಗುಣಗಳನ್ನು ಹೊಂದಿದೆ. ದೇಹದ ಆಯಾಸ ಜತೆಗೆ ಒತ್ತಡವನ್ನು ನಿವಾರಣೆ ಮಾಡಲು ಇದು ಸಹಾಯಕವಾಗಿದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಒಂದು ಗ್ಲಾಸ್ ಅರಿಶಿಣ ಹಾಲು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಅರಿಶಿಣ ಹಾಲಿನ ಸೇವನೆಯ ಪ್ರಯೋಜನಗಳು
*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
*ಕಾಮಾಲೆ ಉರಿಯೂತ ಸಮಸ್ಯೆಗೆ ಪರಿಹಾರ ಸಿಗುತ್ತದೆ
*ಕಫ, ನೆಗಡಿ, ಜ್ವರದಂಥಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು
*ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ಸೆಳೆತ, ನೋವನ್ನು ಕಡಿಮೆ ಮಾಡುತ್ತದೆ
*ಅರಿಶಿಣದಲ್ಲಿರುವ ಕರ್ಕ್ಯುಮಿನ್ ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ
*ಅರಿಶಿಣ ಹಾಲಿನಲ್ಲಿರುವ ಪೋಷಕಾಂಶಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ

ಇದನ್ನೂ ಓದಿ:

Recipe of the day: ಖಾರ ನಿಪ್ಪಟ್ಟು ಮಾಡುವ ಸರಳ ವಿಧಾನ ತಿಳಿದುಕೊಳ್ಳಿ

Health Tips: ಗರ್ಭಿಣಿಯರು ಆರೋಗ್ಯ ಸುಧಾರಣೆಗೆ ಸೇವಿಸಬೇಕಾದ ಪೋಷಕಾಂಶಗಳು

(Turmeric milk benefits of turmeric powder milk health benefits)