AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಗರ್ಭಿಣಿಯರು ಆರೋಗ್ಯ ಸುಧಾರಣೆಗೆ ಸೇವಿಸಬೇಕಾದ ಪೋಷಕಾಂಶಗಳು

ಗರ್ಭಿಣಿಯರು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಆಹಾರ ವ್ಯವಸ್ಥೆಯಲ್ಲಿ ಕೆಲವೊಂದಿಷ್ಟು ಪದಾರ್ಥಗಳನ್ನು ಸೇರಿಸುವುದು ಮುಖ್ಯ. ಫೈಬರ್, ಕ್ಯಾಲ್ಸಿಯಂ, ವಿಟಮಿನ್​ ಅಂಶಗಳು ಗರ್ಭಿಣಿಯ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

Health Tips: ಗರ್ಭಿಣಿಯರು ಆರೋಗ್ಯ ಸುಧಾರಣೆಗೆ ಸೇವಿಸಬೇಕಾದ ಪೋಷಕಾಂಶಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 13, 2021 | 8:21 AM

Share

ಗರ್ಭಿಣಿಯರು ತಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸುವುದು ಮುಖ್ಯ. ಅವರ ಆರೋಗ್ಯದ ಜತೆಗೆ ಮಗುವಿನ ಆರೋಗ್ಯವೂ ಸಹ ಸುಧಾರಣೆಯಾಗಲು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಹಾಗಿರುವಾಗ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಆಹಾರ ವ್ಯವಸ್ಥೆಯಲ್ಲಿ ಕೆಲವೊಂದಿಷ್ಟು ಪದಾರ್ಥಗಳನ್ನು ಸೇರಿಸುವುದು ಮುಖ್ಯ. ಫೈಬರ್, ಕ್ಯಾಲ್ಸಿಯಂ, ವಿಟಮಿನ್​ ಅಂಶಗಳು ಗರ್ಭಿಣಿಯ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಫೋಲಿಕ್ ಆಮ್ಲ ಅಥವಾ ಫೋಲೇಟ್ ಆಮ್ಲ ಇದು ಬಿ ಜೀವಸತ್ವವಾಗಿದ್ದು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗಿದೆ. ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಜತೆಗೆ ಗರ್ಭಿಣಿಯರು ವಿಟಮಿನ್​ಯುಕ್ತ ಆಹಾರವನ್ನು ಸೇವಿಸುವುದು ಮುಖ್ಯ. ಫೋಲಿಕ್ ಆಮ್ಲ ಹಸಿರು ತರಕಾರಿಗಳಲ್ಲಿ ಹಾಗೂ ಸಿಟ್ರಸ್ ಹಣ್ಣುಗಳಲ್ಲಿ ಸಿಗುವುದರಿಂದ ಇದು ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಕಬ್ಬಿಣ ಮಗುವು ತನ್ನ ಕೆಂಪು ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಉತ್ಪಾದಿಸಲು ತಾಯಿಯಿಂದ ಕಬ್ಬಿಣವನ್ನು ಪಡೆಯುತ್ತದೆ. ಮಹಿಳೆಯರಲ್ಲಿ ರಕ್ತದ ಪರಿಮಾಣ ಹೆಚ್ಚಿರುವುದರಿಂದ ರಕ್ತ ತೆಳುವಾಗುವುದು ಮತ್ತು ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಬಹುದು. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಸಮಸ್ಯೆ ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಸಿರು ಎಲೆಗಳು, ತರಕಾರಿಗಳು, ಬೀನ್ಸ್, ಡ್ರೈ ಫ್ರೂಟ್ಸ್​ಗಳನ್ನು ಸೇವಿಸಿ. ವಿಟಮಿನ್ ಸಿ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಇದು ಗರ್ಭಿಣಿಯರ ಆರೋಗ್ಯವನ್ನು ಸುಧಾರಿಸುತ್ತದೆ.

ಕ್ಯಾಲ್ಸಿಯಂ ಮಗುವಿನ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಗರ್ಭಿಣಿಯರ ಮೂಳೆ ಆರೋಗ್ಯವನ್ನು ಕಾಪಾಡಲು ಕ್ಯಾಲ್ಸಿಯಂ ಅಂಶ ಸಹಾಯಕವಾಗಿದೆ. ಹಾಲು, ಮೊಸರು, ಪನೀರ್ ಹೀಗೆ ಮುಂತಾದ ಪದಾರ್ಥಗಳಲ್ಲಿ ಜತೆಗೆ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಂಶವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಇಂತಹ ಆಹಾರ ಪದಾರ್ಥಗಳನ್ನು ಗರ್ಭಿಣಿಯರು ಸೇವಿಸುವುದರಿಂದ ಮಹಿಳೆಯ ಆರೋಗ್ಯದ ಜತೆಗೆ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಸಹಾಯಕವಾಗುತ್ತದೆ.

ಇದನ್ನೂ ಓದಿ:

Women Health: ಗರ್ಭಿಣಿಯರಿಗೆ ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಹಿತವಲ್ಲ; ಏಕೆ ಗೊತ್ತಾ?

Women Health: ನಿಮ್ಮ ಮಗು ಆರೋಗ್ಯವಾಗಿ ಮತ್ತು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗಾಗಿ ಕೆಲವೊಂದಿಷ್ಟು ಟಿಪ್ಸ್​ಗಳು

(These importance nutrients to eat during pregnancy check in Kannada)