ನಿದ್ರಾಹೀನತೆ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡ ಚೀನಾ, ಇಲ್ಲಿದೆ ನೋಡಿ

ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾನಾ ರೀತಿಯಲ್ಲಿ ಕಸರತ್ತು ಮಾಡಿರುತ್ತೇವೆ. ಆದರೆ ಜೋಕಾಲಿಯ ರೀತಿಯಲ್ಲಿ ಸ್ವಿಂಗ್ ಮಾಡುತ್ತಾ ಕುತ್ತಿಗೆಯನ್ನು ತೂಗು ಹಾಕಿಕೊಂಡು ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ನೋಡಿದ್ದೀರಾ? ಇದು ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದರಿಂದ ಚೀನಾದವರು ನಿದ್ರಾಹೀನತೆಯಂತಹ ಸಮಸ್ಯೆಯನ್ನು ನಿವಾರಿಸಿಕೊಂಡಿದ್ದಾರೆ. ಹಾಗಾದರೆ ಇದನ್ನು ಮಾಡುವುದು ಹೇಗೆ? ನಿದ್ರಾಹೀನತೆಗೆ ಈ ವ್ಯಾಯಾಮ ಯಾವ ರೀತಿ ಸಹಾಯ ಮಾಡುತ್ತದೆ? ಎಂಬುದನ್ನು ತಿಳಿದುಕೊಳ್ಳಿ.

ನಿದ್ರಾಹೀನತೆ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡ ಚೀನಾ, ಇಲ್ಲಿದೆ ನೋಡಿ
ನಿದ್ರಾಹೀನತೆ
Image Credit source: Getty Images

Updated on: May 30, 2025 | 5:22 PM

ಚೀನಾ (China) ದ ಶೆನ್ಯಾಂಗ್​ ನಗರದ ವಿಚಿತ್ರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುಗರರಿಗೆ ಸ್ವಲ್ಪ ವಿಚಿತ್ರವಾಗಿ ಕಂಡರೂ ಕೂಡ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಮಾತ್ರ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಸಮಯದ ಅರಿವಿಲ್ಲದೆ ದುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಾನಾ ರೀತಿಯ ಆರೋಗ್ಯ (Health) ಸಮಸ್ಯೆಗಳು ನಮ್ಮನ್ನು ಅಂಟಿಕೊಳ್ಳುತ್ತಿದೆ. ರಾತ್ರಿ- ಹಗಲು ಎನ್ನದೆ ಎಲ್ಲೆಂದರಲ್ಲಿ ಲ್ಯಾಪ್ಟಾಪ್ ಕಾಲಿನ ಮೇಲಿಟ್ಟು ಕೆಲಸ ಮಾಡುವವರಿಗೆ ನಮ್ಮ ಆರೋಗ್ಯ ಸ್ಥಿತಿ ಯಾವ ಮಟ್ಟಕ್ಕೆ ಬಂದು ತಲುಪಬಹುದು ಎಂಬುದರ ಪರಿವೆ ಇರುವುದಿಲ್ಲ. ಎಲ್ಲಕಿಂತ ಹೆಚ್ಚಾಗಿ ಈ ರೀತಿ ಅಭ್ಯಾಸ ಒತ್ತಡ ಮತ್ತು ನಿದ್ರಾಹೀನತೆ (Insomnia) ಗೆ ಕಾರಣವಾಗುತ್ತದೆ. ಇದು ಚಿಕ್ಕ ಆರೋಗ್ಯ ಸಮಸ್ಯೆ ಎನಿಸಿದರೂ ಕೂಡ ಇದನ್ನು ನಿವಾರಿಸಿಕೊಳ್ಳಲು ಆಗದೆ ಇದರಿಂದ ಪ್ರತಿ ರಾತ್ರಿ ಹಿಂಸೆ ಪಡುವವರು ಲಕ್ಷಗಟ್ಟಲೆ ಜನರಿದ್ದಾರೆ. ಹಾಗಾಗಿ ಚೀನಾದವರು ಈ ರೀತಿ ಸಮಸ್ಯೆಯನ್ನು ತಡೆಯಲು ಕುತ್ತಿಗೆಯನ್ನು ತೂಗು ಹಾಕಿ ವ್ಯಾಯಾಮ ಮಾಡುತ್ತಿದ್ದಾರೆ. ಯಾಕೆ ಈ ರೀತಿ ಮಾಡುತ್ತಾರೆ? ನಿದ್ರಾಹೀನತೆ ತಡೆಯಲು ಈ ವ್ಯಾಯಾಮ ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ನಿದ್ರಾಹೀನತೆ ತಡೆಯಲು ಜೋಕಾಲಿ ವ್ಯಾಯಾಮ

ಚೀನಾದ ಶೆನ್ಯಾಂಗ್​ ನಗರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ವೀಡಿಯೊವನ್ನು @TansuYegen ಹೆಸರಿನ ಖಾತೆಯು ಹಂಚಿಕೊಳ್ಳಲಾಗಿದ್ದು, ಜನರಿಗೆ ಈ ಬಗ್ಗೆ ಕುತೂಹಲ ಮೂಡಿದ್ದು ಈ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ತೋರಿಸಿದ್ದಾರೆ. ಶೆನ್ಯಾಂಗ್​ ನಗರದ ಜನರು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲು ಕುತ್ತಿಗೆಯನ್ನು ತೂಗು ಹಾಕುವ ವ್ಯಾಯಾಮ ಮಾಡುತ್ತಿದ್ದಾರೆ. ಅಂದರೆ ತಮ್ಮ ಕುತ್ತಿಗೆಯನ್ನು ಯು ಆಕಾರದ ಬೆಲ್ಟ್​​ನಿಂದ ನೇತು ಹಾಕಿಕೊಂಡು ಆ ಬಳಿಕ ತಮ್ಮ ಕಾಲುಗಳನ್ನು ಇಳಿ ಬಿಟ್ಟು, ಜೋಕಾಲಿಯ ರೀತಿಯಲ್ಲಿ ಸ್ವಿಂಗ್ ಮಾಡುತ್ತಿದ್ದಾರೆ. ಈ ವ್ಯಾಯಾಮ ಮಾಡುವವರು ಹೇಳುವ ಪ್ರಕಾರ, ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಗಂಭೀರ ಕಾಯಿಲೆಗಳನ್ನು ಗುಣಪಡಿಸಬಹುದಂತೆ. ಹಾಗಾದರೆ ಈ ವಿಡಿಯೋ ಹೇಗಿದೆ ನೋಡಿ.

ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ:

ಇತ್ತೀಚಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುವರ ಸಂಖ್ಯೆ ಹೆಚ್ಚಾಗಿದ್ದು. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಾರೆ. ಆದರೆ ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಕುಳಿತುಕೊಳ್ಳುವ ಭಂಗಿ ಸರಿ ಇರುವುದಿಲ್ಲ ಇದರಿಂದ ರಾತ್ರಿ ಮಲಗಿದಾಗ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರೆ ಸರಿಯಾಗಿ ಬರಲು ನಾನಾ ರೀತಿಯ ಕಸರತ್ತನ್ನು ಮಾಡುತ್ತಾರೆ. ಕೆಲವರಂತೂ ಹೆಚ್ಚು ದಿಂಬು ಇಟ್ಟು ನಿದ್ರಿಸುತ್ತಾರೆ. ಈ ರೀತಿಯ ಅಭ್ಯಾಸಗಳು ಮತ್ತಷ್ಟು ನಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ. ನಿದ್ರೆ ಸರಿಯಾಗಿ ಆಗದಿದ್ದಾಗ ಒತ್ತಡ ಹೆಚ್ಚಾಗುತ್ತದೆ ಜೊತೆಗೆ ಬೇರೆ ಬೇರೆ ರೀತಿಯ ಕಾಯಿಲೆಗಳು ಬರುತ್ತದೆ. ಆದರೆ ಚೀನಾದವರ ಈ ವಿಚಿತ್ರ ಪ್ರಯೋಗ ಈ ರೀತಿ ಸಮಸ್ಯೆಗೆ ಪರಿಹಾರ ನೀಡುತ್ತದೆಯಂತೆ. ಜೊತೆಗೆ ಇದು ಗರ್ಭಕಂಠದ ಒತ್ತಡವನ್ನು ಕೂಡ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ನಿದ್ರೆ ಮಾಡಲಾಗದೆ ಒದ್ದಾಡುತ್ತಿದ್ದೀರಾ? ನಿದ್ರಾಹೀನತೆಗೆ ಅಶ್ವಗಂಧ ರಾಮಬಾಣ

ಇನ್ನು ಹಲವು ದಿನಗಳ ವರೆಗೆ ಸತತವಾಗಿ ಈ ವ್ಯಾಯಾಮ ಮಾಡಿದ ವ್ಯಕ್ತಿಯೊಬ್ಬ ಈ ಬಗ್ಗೆ ಉತ್ತಮ ಫಲಿತಾಂಶ ನೀಡಿದ್ದು, ನನಗೆ ಈ ವಿಧಾನ ಬಹಳ ಉಪಯೋಗವಾಗಿದೆ ಎಂದಿದ್ದಾನೆ. ಹಾಗೆಯೇ ಇನ್ನೊಬ್ಬ ವ್ಯಕ್ತಿ ಇದನ್ನು ಮಾಡಿ ಸಾವನ್ನಪ್ಪಿದ್ದಾನೆ. ಹೀಗಾಗಿ ಈ ಬಗ್ಗೆ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಅಪಾಯವಿದೆ. ಹಾಗಾಗಿ ಯಾರೂ ಕೂಡ ವೈದ್ಯರ ಸಲಹೆ ಇಲ್ಲದೆ ವಿಡಿಯೋ ನೋಡಿ ಈ ವಿಧಾನವನ್ನು ಅನುಸರಿಸಬೇಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ