
ಜೀವನಶೈಲಿಯಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತಿದ್ದು ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದೆ. ಇವುಗಳಲ್ಲಿ ವಿಟಮಿನ್ ಬಿ 12 ಕೊರತೆಯೂ ಒಂದು. ದೇಹಕ್ಕೆ ಅಗತ್ಯವಾಗಿರುವ ಈ ವಿಟಮಿನ್ ಕಡಿಮೆಯಾದಾಗ, ದೇಹದಲ್ಲಿ ತೀವ್ರ ಆಯಾಸ ಮತ್ತು ನರ ದೌರ್ಬಲ್ಯದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ನೈಸರ್ಗಿಕವಾಗಿ ಮತ್ತು ತ್ವರಿತವಾಗಿ ಈ ಕೊರತೆಯನ್ನು ಕಡಿಮೆ ಮಾಡಲು ಸುಲಭವಾದ ಪರಿಹಾರವಿದೆ. ಅಂದರೆ, ಬಾಳೆಹಣ್ಣನ್ನು (Banana) ಒಂದು ವಿಶೇಷ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ವಿಟಮಿನ್ ಕೊರತೆಯನ್ನು ನೀಗಿಸಿಕೊಳ್ಳಬಹುದು. ಆದರೆ ಈ ಹಣ್ಣಿನಲ್ಲಿ ವಿಟಮಿನ್ ಬಿ 12 (Vitamin B12) ನೇರವಾಗಿ ಸಿಗುವುದಿಲ್ಲವಾದರೂ ಕೂಡ ಆ ವಿಟಮಿನ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾದರೆ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಯಾವ ರೀತಿಯಾವ ರೀತಿ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ, ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ವಿಟಮಿನ್ ಬಿ 12 ಕೊರತೆಯೂ ಒಂದು. ಈ ವಿಟಮಿನ್ ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದ್ದು ಇದರ ಕೊರತೆಯು ಆಯಾಸ, ಆಲಸ್ಯ, ಮೆದುಳಿನ ಗೊಂದಲ, ನರಮಂಡಲದ ಸಮಸ್ಯೆಗಳು ಮತ್ತು ರಕ್ತಹೀನತೆಗೆ ಕಾರಣವಾಗಬಹುದು. ಮಾತ್ರವಲ್ಲ ಇನ್ನು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ಈ ವಿಟಮಿನ್ ಕೊರತೆಯು ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಇದನ್ನು ತ್ವರಿತವಾಗಿ ನೀಗಿಸಲು, ಈ ಇಂದು ಹಣ್ಣನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆ ಮೂಲಕ ವಿಟಮಿನ್ ಬಿ 12 ಕೊರತೆಯಾಗದಂತೆ ನೋಡಿಕೊಳ್ಳಬಹುದು.
ಬಾಳೆಹಣ್ಣು ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದರೆ ಈ ಹಣ್ಣಿನಲ್ಲಿ ವಿಟಮಿನ್ ಬಿ 12 ನೇರವಾಗಿ ಸಿಗುವುದಿಲ್ಲ. ಆದರೆ ಇವು ನಿಮ್ಮ ದೇಹ ವಿಟಮಿನ್ ಬಿ 12 ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬಾಳೆಹಣ್ಣುಗಳು ಪೊಟ್ಯಾಸಿಯಮ್, ವಿಟಮಿನ್ ಬಿ 6 ಮತ್ತು ಫೈಬರ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಾತ್ರವಲ್ಲ ವಿಟಮಿನ್ ಬಿ 12 ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಿ ಅದರ ಕೊರತೆಯನ್ನು ನೀಗಿಸಲು, ಬಾಳೆಹಣ್ಣನ್ನು ಎರಡು ರೀತಿಯಲ್ಲಿ ಬಳಕೆ ಮಾಡಬಹುದು.
ಇದನ್ನೂ ಓದಿ: ವಿಟಮಿನ್ ಬಿ12 ಪ್ರಯೋಜನಗಳೇನು? ಭಾರತದ 70% ಜನರಲ್ಲಿ ಇದರ ಕೊರತೆಯಾಗುವುದಕ್ಕೆ ಕಾರಣವೇನು?
ಬಾಳೆಹಣ್ಣಿನ ಮಿಲ್ಕ್‌ಶೇಕ್ : ಹಾಲು ವಿಟಮಿನ್ ಬಿ 12 ರ ಉತ್ತಮ ಮೂಲ ಎಂಬುದು ತಿಳಿದ ವಿಚಾರ. ಬಾಳೆಹಣ್ಣಿನೊಂದಿಗೆ ಹಾಲನ್ನು ಬೆರೆಸಿ ಕುಡಿಯುವುದರಿಂದ ವಿಟಮಿನ್ ಬಿ 12ನ ಕೊರತೆಯನ್ನು ಕಡಿಮೆ ಮಾಡುತ್ತೆ. ಮಾತ್ರವಲ್ಲದೆ ತೂಕ ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.
ತಯಾರಿಸುವ ವಿಧಾನ: ಬಾಳೆಹಣ್ಣನ್ನು ಸಿಪ್ಪೆ ತೆಗೆದು ಬ್ಲೆಂಡರ್‌ನಲ್ಲಿ ಹಾಕಿ. ಹಾಲು ಮತ್ತು ಸಕ್ಕರೆ ಸೇರಿಸಿ. ನಯವಾದ ಮಿಶ್ರಣ ಸಿಕ್ಕ ಮೇಲೆ, ನೀವು ಅದನ್ನು ತಂಪು ತಂಪಾಗಿ ಕುಡಿಯಲು ಬಯಸಿದರೆ, ನೀವು ಐಸ್ ಕ್ಯೂಬ್‌ಗಳನ್ನು ಸೇರಿಸಿ ಮಿಶ್ರಣ ಮಾಡಬಹುದು.
ಬಾಳೆಹಣ್ಣಿನ ಮೊಸರು: ಸಾಮಾನ್ಯವಾಗಿ ಪ್ರತಿನಿತ್ಯ ಸೇವನೆ ಮಾಡುವ ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ಇರುತ್ತದೆ. ಬಾಳೆಹಣ್ಣು ಮತ್ತು ಮೊಸರಿನ ಮಿಶ್ರಣವು ಅದರ ಪ್ರಯೋಜನಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.
ತಯಾರಿಸುವ ವಿಧಾನ: ಮೊಸರನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಮ್ಯಾಶ್ ಮಾಡಿ. ಕತ್ತರಿಸಿದ ಬಾಳೆಹಣ್ಣಿಗೆ ಸೇರಿಸಿ. ಬಳಿಕ ಆ ಮಿಶ್ರಣಕ್ಕೆ ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಮತ್ತು ಉಪ್ಪನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಬೇಕಾದರೆ ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಬಹುದು. ಈ ರೀತಿ ಮಾಡಿಕೊಂಡರೆ ಬಾಳೆಹಣ್ಣಿನ ಮೊಸರು ತಿನ್ನಲು ಸಿದ್ದವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ