AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನವಿಡೀ ನಿದ್ರೆ ಮಾಡುತ್ತಿದ್ದೀರಾ ಈ ಸಮಸ್ಯೆಗೆ ಇಲ್ಲಿದೆ ಕಾರಣ

ನಾವು ಆರೋಗ್ಯವಾಗಿರಲು ದೇಹಕ್ಕೆ ಅಗತ್ಯವಿರುವ ಎಲ್ಲಾ ಜೀವಸತ್ವಗಳ ಪ್ರಮಾಣ ಸರಿಯಾಗಿರುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಈ ಜೀವಸತ್ವಗಳ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಜೀವಸತ್ವಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ಒಂದು ನಿದ್ರೆಯ ಸಮಸ್ಯೆ. ದಿನವಿಡೀ ನಿದ್ರಾವಸ್ಥೆಯಲ್ಲಿರುವುದು ಸಹ ವಿಟಮಿನ್ ಕೊರತೆಗೆ ಕಾರಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದಕ್ಕೆ ಕಾರಣವಾಗುವ ವಿಟಮಿನ್ ಯಾವುದು? ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ದಿನವಿಡೀ ನಿದ್ರೆ ಮಾಡುತ್ತಿದ್ದೀರಾ ಈ ಸಮಸ್ಯೆಗೆ ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 06, 2025 | 10:59 AM

Share

ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ ಅದಕ್ಕಾಗಿ ಹಲವಾರು ತ್ಯಾಗ ಮಾಡುವುದರ ಜೊತೆಗೆ ಕಟ್ಟುನಿಟ್ಟಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಹಾಗಾಗಿ ಪ್ರತಿನಿತ್ಯ ನಿಮ್ಮ ದಿನಚರಿಯನ್ನು ಒಂದೇ ತರನಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಅದಲ್ಲದೆ ನಿಮ್ಮ ಆಹಾರ ಪದ್ಧತಿಯಲ್ಲಿ ಎಲ್ಲಾ ರೀತಿಯ ಜೀವಸತ್ವಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಕೊರತೆಯಾದರೂ ಕೂಡ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಏಕೆಂದರೆ ನಾವು ಆರೋಗ್ಯವಾಗಿರಲು ದೇಹಕ್ಕೆ ಅಗತ್ಯವಿರುವ ಎಲ್ಲಾ ಜೀವಸತ್ವಗಳ ಪ್ರಮಾಣ ಸರಿಯಾಗಿರುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಈ ಜೀವಸತ್ವಗಳ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಜೀವಸತ್ವಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ಒಂದು ನಿದ್ರೆಯ ಸಮಸ್ಯೆ. ದಿನವಿಡೀ ನಿದ್ರಾವಸ್ಥೆಯಲ್ಲಿರುವುದು ಸಹ ವಿಟಮಿನ್ ಕೊರತೆಗೆ ಕಾರಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದಕ್ಕೆ ಕಾರಣವಾಗುವ ವಿಟಮಿನ್ ಯಾವುದು? ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಟಮಿನ್ ಬಿ 12 ಕೊರತೆಯಾಗಿದೆ ಎಂದು ಹೇಗೆ ತಿಳಿಯುತ್ತದೆ?

ಎಲ್ಲರಿಗೂ ತಿಳಿದಿರುವಂತೆ, ವಿಟಮಿನ್ ಬಿ 12 ಪ್ರಮುಖ ಸೂಕ್ಷ್ಮ ಪೋಷಕಾಂಶವಾಗಿದೆ. ಇದು ದೇಹದ ವಿವಿಧ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದರ ಕೊರತೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಈ ವಿಟಮಿನ್ ಕೊರತೆಯಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ? ಆರೋಗ್ಯದ ಮೇಲೆ ಇದು ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದು ತಿಳಿದಿದೆಯೇ? ಸಾಮಾನ್ಯವಾಗಿ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದಾಗ ದಿನವಿಡೀ ಮಂಪರಿನ ಅನುಭವಾಗುತ್ತದೆ. ಯಾವುದೇ ರೀತಿಯ ದಣಿವಾಗದ ಕೆಲಸ ಮಾಡದಿದ್ದಾಗಲೂ ಕೂಡ ದೇಹ ಆಯಾಸಗೊಳ್ಳುತ್ತದೆ. ಜೊತೆಗೆ ಶಕ್ತಿ ಇಲ್ಲದೆ ದೇಹ ಹುಮ್ಮಸ್ಸು ಕಳೆದುಕೊಂಡಂತೆ ಭಾಸವಾಗುತ್ತಿದ್ದರೆ ನಿಮಗೆ ವಿಟಮಿನ್ ಬಿ 12 ಕೊರತೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಅಷ್ಟೇ ಅಲ್ಲ, ಈ ಅಂಶದ ಕೊರತೆಯು ನಮ್ಮ ಮನಸ್ಥಿತಿಯ ಬದಲಾವಣೆಗೆ ಕಾರಣವಾಗಬಹುದು. ಇದರೊಂದಿಗೆ, ಮೆಮೊರಿ ಸಮಸ್ಯೆಗಳು ಸಹ ನಿಮ್ಮನ್ನು ಕಾಡಬಹುದು. ಯಾವ ವಸ್ತುವನ್ನು ಎಲ್ಲಿ ಇಟ್ಟೆ ಎಂಬುದೇ ಹಲವು ರೀತಿಯ ಗೊಂದಲಕ್ಕೆ ಕಾರಣವಾಗಬಹುದು. ಅಲ್ಲದೆ ನೆನೆಪಿನ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತದೆ. ರಾತ್ರಿಯಲ್ಲಿ ಆಯಾಸ ಮತ್ತು ಅತಿಯಾದ ಬೆವರುವಿಕೆ ಕೂಡ ವಿಟಮಿನ್ ಬಿ 12 ಕೊರತೆಯ ಲಕ್ಷಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದಲ್ಲದೆ ಈ ವಿಟಮಿನ್ ಕೊರತೆಯು ನಿಮ್ಮ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ಖಿನ್ನತೆ ಅಥವಾ ಅಸಹಾಯಕತೆಗೆ ಕಾರಣವಾಗುತ್ತದೆ. ಹಾಗಾಗಿ ನೀವು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ನಿಮ್ಮ ಮೆದುಳು ತೀಕ್ಷ್ಣವಾಗಿ ಕೆಲಸ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್!

ದೇಹ ಬಿ 12 ಅನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ, ಆಹಾರದ ಮೂಲಕವೇ ನಾವು ವಿಟಮಿನ್ ಬಿ 12 ತೆಗೆದುಕೊಳ್ಳಬೇಕು. ಇದು ಮುಖ್ಯವಾಗಿ ಪ್ರಾಣಿ ಉತ್ಪನ್ನಗಳಲ್ಲಿ ಲಭ್ಯವಿರುತ್ತದೆ. ವಿಟಮಿನ್ ಬಿ 12 ಡೈರಿ ಉತ್ಪನ್ನಗಳು, ಮಾಂಸ ಮತ್ತು ಮೊಟ್ಟೆಗಳಲ್ಲಿ ಲಭ್ಯವಿದೆ. ಸಸ್ಯಾಹಾರಿಗಳು ಇದನ್ನು ಪೂರಕಗಳ ಮೂಲಕ ಅಥವಾ ಬಲವರ್ಧಿತ ಆಹಾರದ ಮೂಲಕ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ಈ ವಿಟಮಿನ್ ಬಿ 12 ಐದು ವರ್ಷಗಳ ವರೆಗೆ ಯಕೃತ್ತಿನಲ್ಲಿ ಸಂಗ್ರಹವಾಗುತ್ತದೆ. ಈ ಶೇಖರಣೆ ಕಡಿಮೆಯಾದಾಗ ವಿಟಮಿನ್ ಕೊರತೆ ಉಂಟಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ