Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮೆದುಳು ತೀಕ್ಷ್ಣವಾಗಿ ಕೆಲಸ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್!

ಪ್ರತಿಯೊಬ್ಬರ ಮೆದುಳಿನ ಸಾಮರ್ಥ್ಯ ಒಂದೇ ರೀತಿಯಲ್ಲಿ ಇದ್ದರೂ ಅದು ಕಾರ್ಯ ನಿರ್ವಹಿಸುವ ರೀತಿ ಮಾತ್ರ ಭಿನ್ನವಾಗಿರುತ್ತದೆ. ಹಾಗಾಗಿ ನಾವು ಮೆದುಳನ್ನು ಸಕ್ರಿಯವಾಗಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತಹ ಅಭ್ಯಾಸ, ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಆಲೋಚನಾ ಕ್ರಮಗಳು ಸುಧಾರಣೆಯಾಗುತ್ತದೆ ಜೊತೆಗೆ ಮೆದುಳಿಗೆ ವ್ಯಾಯಾಮವಾಗುತ್ತದೆ. ಅಲ್ಲದೆ ಮರೆವು ಕಡಿಮೆಯಾಗುತ್ತದೆ. ಹಾಗಾದರೆ ಮೆದುಳು ತೀಕ್ಷ್ಣವಾಗಿ ಕೆಲಸ ಮಾಡಲು ಯಾವ ರೀತಿಯ ಸಲಹೆಗಳನ್ನು ಪಾಲನೆ ಮಾಡಬೇಕು ತಿಳಿದುಕೊಳ್ಳಿ.

ನಿಮ್ಮ ಮೆದುಳು ತೀಕ್ಷ್ಣವಾಗಿ ಕೆಲಸ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 06, 2025 | 10:20 AM

ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ನೆನಪಿನ ಶಕ್ತಿ ಎನ್ನುವುದು ತುಂಬಾ ಭಿನ್ನವಾಗಿ ಇರುತ್ತದೆ. ಕೆಲವರು ಅತೀ ಬುದ್ಧಿವಂತರಾಗಿದ್ದರೆ, ಇನ್ನು ಕೆಲವರು ನಿಧಾನವಾಗಿ ಆಲೋಚನೆ ಮಾಡುವವರಾಗಿರುತ್ತಾರೆ. ಆದರೆ ಯಾರೂ ಕೂಡ ದಡ್ಡರಲ್ಲ ಅದು ಅವರವರ ಸಾಮರ್ಥ್ಯವಾಗಿರುತ್ತದೆ. ಅಂದರೆ ಪ್ರತಿಯೊಬ್ಬರ ಮೆದುಳಿನ ಸಾಮರ್ಥ್ಯ ಒಂದೇ ರೀತಿಯಲ್ಲಿ ಇದ್ದರೂ ಅದು ಕಾರ್ಯ ನಿರ್ವಹಿಸುವ ರೀತಿ ಮಾತ್ರ ಭಿನ್ನವಾಗಿರುತ್ತದೆ. ಹಾಗಾಗಿ ನಾವು ಮೆದುಳನ್ನು ಸಕ್ರಿಯವಾಗಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತಹ ಅಭ್ಯಾಸ, ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಆಲೋಚನಾ ಕ್ರಮಗಳು ಸುಧಾರಣೆಯಾಗುತ್ತದೆ ಜೊತೆಗೆ ಮೆದುಳಿಗೆ ವ್ಯಾಯಾಮವಾಗುತ್ತದೆ. ಅಲ್ಲದೆ ಮರೆವು ಕಡಿಮೆಯಾಗುತ್ತದೆ. ಹಾಗಾದರೆ ಮೆದುಳು ತೀಕ್ಷ್ಣವಾಗಿ ಕೆಲಸ ಮಾಡಲು ಯಾವ ರೀತಿಯ ಸಲಹೆಗಳನ್ನು ಪಾಲನೆ ಮಾಡಬೇಕು ತಿಳಿದುಕೊಳ್ಳಿ.

ನಿಮಗೆ ತಿಳಿದಿರಬಹುದು, ನಿಯಮಿತವಾಗಿ ಹೊಸ ಭಾಷೆ, ಆಟಗಳನ್ನು ಕಲಿಯುವುದರಿಂದ ಮೆದುಳಿಗೆ ವ್ಯಾಯಾಮ ಸಿಗುತ್ತದೆ. ಜೊತೆಗೆ ಅವು ಮೆದುಳಿನ ವಿವಿಧ ಭಾಗಗಳನ್ನು ಉತ್ತೇಜಿಸುತ್ತವೆ ಮತ್ತು ಸ್ಮರಣ ಶಕ್ತಿಯನ್ನು ಸುಧಾರಿಸುತ್ತವೆ. ಏಕೆಂದರೆ ಯಾವತ್ತಿಗೂ ಹೊಸ ವಿಷಯಗಳನ್ನು ಕಲಿಯುವುದು ಮೆದುಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. ಆದರೆ ಏನನ್ನಾದರೂ ಕಲಿಯುವಾಗ ಸಾಧ್ಯವಾದಷ್ಟು ಇಂದ್ರಿಯಗಳನ್ನು ಬಳಸಬೇಕು. ಇದು ಬಹಳ ಮುಖ್ಯವಾಗುತ್ತದೆ. ಅಂದರೆ ಓದುವಾಗ, ಕೇಳುವಾಗ, ನೋಡುವಾಗ, ಅಥವಾ ರುಚಿ ನೋಡುವಾಗ ಮತ್ತು ಪರಿಮಳವನ್ನು ಗ್ರಹಿಸುವಾಗ ಹೆಚ್ಚು ಇಂದ್ರಿಯಗಳನ್ನು ಬಳಸುವುದು ಮೆದುಳಿನ ಹೆಚ್ಚಿನ ಭಾಗಗಳನ್ನು ಉತ್ತೇಜಿಸುತ್ತದೆ. ಇದಲ್ಲದೆ, ಮಾಹಿತಿಯನ್ನು ಸಹ ಚೆನ್ನಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದರೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಏನು ಮಾಡಬೇಕು?

  • ಸಾಮಾನ್ಯವಾಗಿ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಬಯಸುವವರು ಅಗತ್ಯವಿರುವ ಮಾಹಿತಿಯನ್ನು ಮರು ಓದು ಅಂದರೆ ಅನೇಕ ಬಾರಿ ವಿಷಯಗಳನ್ನು ಓದುವುದರಿಂದ ಅಥವಾ ಅದನ್ನು ಬರೆಯುವ ಮೂಲಕ ಸ್ಮರಣ ಶಕ್ತಿಯನ್ನು ಬಲಪಡಿಸಬಹುದು. ಪುನರಾವರ್ತನೆ ಮೆದುಳಿನ ಸಂಪರ್ಕಗಳನ್ನು ಬಲಪಡಿಸುತ್ತದೆ.
  • ವಿಷಯಗಳನ್ನು ಒಮ್ಮೆಗೆ ಓದಿ ಮುಗಿಸುವ ಬದಲು ಅವುಗಳನ್ನು ಸ್ವಲ್ಪ ಸಮಯದ ನಂತರ ಮತ್ತೆ ಓದುವುದರಿಂದ ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. ಇದನ್ನು ಸ್ಪೇಸ್ಡ್ ರಿಪೀಟ್ ಎಂದು ಕರೆಯಲಾಗುತ್ತದೆ.
  • ನಿಮ್ಮ ವಸ್ತುಗಳನ್ನು ಕ್ರಮಬದ್ಧವಾಗಿಡುವ ಮೂಲಕ ನೀವು ದೈನಂದಿನ ಕಾರ್ಯಗಳನ್ನು ಸುಲಭಗೊಳಿಸಬಹುದು. ಇದು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
  • ಸಂಕ್ಷಿಪ್ತ ಪದಗಳು ಅಥವಾ ನುಡಿಗಟ್ಟುಗಳನ್ನು ಬಳಸುವ ಮೂಲಕ ದೈನಂದಿನ ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಇಂತಹ ತಂತ್ರಗಳು ಮಾಹಿತಿಯನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮರಣೆಯನ್ನು ಸುಧಾರಿಸಬಹುದು. ಈ ವಿಷಯಗಳು ಓದುವ ಮಕ್ಕಳಿಗೂ ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳ ನೆನಪಿನ ಶಕ್ತಿಯೂ ಹೆಚ್ಚುತ್ತದೆ. ಮರೆವು ಹಂತ ಹಂತವಾಗಿ ಕಡಿಮೆಯಾಗುತ್ತದೆ. ವಯಸ್ಸನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ತಮ್ಮ ಸ್ಮರಣೆಯನ್ನು ತೀಕ್ಷ್ಣವಾಗಿಡಲು ಬಯಸುವುದರಿಂದ ಈ ಸಲಹೆಗಳು ಪ್ರತಿಯೊಬ್ಬರಿಗೂ ಸಹಕಾರಿಯಾಗಲಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​