Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆರಡು ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ: ಆರೋಗ್ಯ ಇಲಾಖೆಗೆ ಕಳಪೆ ಗುಣಮಟ್ಟ ಔಷಧಿಯ ಆತಂಕ

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆದ ಬೆನ್ನಲ್ಲೇ, ಬಾಣಂತಿಯರಿಗೆ ನೀಡಿದ್ದ ಗ್ಲೂಕೋಸ್‌ ಸರಿ ಇಲ್ಲ ಎನ್ನವ ಅಂಶ ಪತ್ತೆಯಾಗಿತ್ತು. ಆದರೆ, ಇದೀಗ ಎಲ್ಲ ಕಡೆ ಸರಬರಾಜು ಆಗುತ್ತಿರುವ ಐವಿ ಫ್ಲೂಯಿಡ್​ಗಳೇ ಕಳಪೆ ಎಂಬ ವಿಚಾರ ಬಹಿರಂಗವಾಗುತ್ತಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಮತ್ತೆರಡು ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ: ಆರೋಗ್ಯ ಇಲಾಖೆಗೆ ಕಳಪೆ ಗುಣಮಟ್ಟ ಔಷಧಿಯ ಆತಂಕ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: Ganapathi Sharma

Updated on:Feb 06, 2025 | 9:19 AM

ಬೆಂಗಳೂರು, ಫೆಬ್ರವರಿ 6: ಕರ್ನಾಟಕದಾದ್ಯಂತ ಬಾಣಂತಿಯರ ಸರಣಿ ಸಾವು ಸಂಭವಿಸಲು ಕಾರಣ ಏನು ಎಂದು ತಿಳಿಯಲು ಸರ್ಕಾರ ಮುಂದಾಗಿತ್ತು. ಅದಕ್ಕಾಗಿ ಡಾ. ಸವಿತಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ‌, ಸಾವಿಗೆ ಕಾರಣ ಏನು ಎಂದು ತಿಳಿಯಿರಿ ಎಂದು ಬಳ್ಳಾರಿಗೆ ಕಳುಹಿಸಲಾಗಿತ್ತು. ಬಳಿಕ ಗ್ಲೂಕೋಸ್‌ನಲ್ಲಿ ಸಮಸ್ಯೆ ಇರುವುದು ಗೊತ್ತಾಗಿತ್ತು. ಕಳಪೆ ಐವಿ ಫ್ಲೂಯಿಡ್ ಕಾರಣ ಎಂದು ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಇದೀಗ ಮತ್ತೆರಡು ಐವಿ ಫ್ಲೂಯಿಡ್ ಕೂಡಾ ಬಳಕೆಗೆ ಯೋಗ್ಯವಲ್ಲ ಎಂಬ ಅಂಶ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.

ಬಳ್ಳಾರಿಯಲ್ಲಿ ಬಳಸಿದ್ದ ಐವಿ ಫ್ಲೂಯಿಡ್‌ನ 3 ಬ್ಯಾಚ್‌ಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಅವುಗಳಲ್ಲಿ ಎರಡು ಬ್ಯಾಚ್ ಐವಿ ಫ್ಲೂಯಿಡ್‌ ಬಳಕೆಗೆ ಯೋಗ್ಯವಲ್ಲ ಎಂಬುದು ತಿಳಿದುಬಂದಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆರಡು ಐವಿ ಫ್ಲೂಯಿಡ್ ಕೂಡಾ ಬಳಕೆಗೆ ಯೋಗ್ಯವಲ್ಲ ಎಂಬುದು ಬಹಿರಂಗವಾಗಿದೆ. ಪಶ್ಚಿಮ ಬಂಗಾಳ ಕಂಪನಿಯ ಉತ್ಪನ್ನಗಳು ಉತ್ತಮವಾಗಿಲ್ಲ ಎನ್ನುವಂತಾಗಿದೆ.

ಡೆಸ್ಟ್ರೋಸ್ ಹಾಗೂ ಇಂಜೆಕ್ಷನ್ ಕೂಡ ಅಸುರಕ್ಷಿತ

ಐವಿ ಫ್ಲೂಯಿಡ್ ಬಳಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಕುತ್ತು ತರುತ್ತದೆ. ಡೆಸ್ಟ್ರೋಸ್ ಹಾಗೂ ಇಂಜೆಕ್ಷನ್ ಕೂಡ ಅಸುರಕ್ಷಿತ ಎಂಬ ಅಂಶ ಬಯಲಾಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಯಾವ ಐವಿ ಫ್ಲೂಯಿಡ್ ಬಳಸಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಐವಿ ಫ್ಲೂಯಿಡ್ ಅಸುರಕ್ಷಿತ ಎಂಬುದು ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯ ಪ್ರಯೋಗದಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ 8 ತಿಂಗಳ ಗರ್ಭಿಣಿ ಸಾವು

ಒಟ್ಟಿನಲ್ಲಿ ಐವಿ ಫ್ಲೂಯಿಡ್ ಈ ಹಿಂದೆಯೂ ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಬಳಿಕ ಕೇಂದ್ರದ ಲ್ಯಾಬ್‌ನಲ್ಲಿ ಪಾಸಿಟಿವ್ ಬಂದಿತ್ತು. ಇದೀಗ ಮತ್ತೆ ಫ್ಲೂಯಿಡ್‌ಗಳ ಮರು ಪರೀಕ್ಷೆ ಮಾಡಲಾಗ್ತಿದ್ದು, ಇನ್ನು ಯಾವೆಲ್ಲ ಔಷಧ ಸುರಕ್ಷಿತವಲ್ಲ ಎಂಬುದು ಗೊತ್ತಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Thu, 6 February 25

ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ