ಮುಟ್ಟು ಸರಿಯಾಗಿ ಆಗದಿದ್ದರೆ ಚಿಂತಿಸಬೇಡಿ, ಈ ರೀತಿಯಾಗುವುದಕ್ಕೆ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಿ
ಮಹಿಳೆಯರಿಗೆ ನಿಯಮಿತವಾಗಿ ಋತುಚಕ್ರವಾಗಬೇಕು. ಆದರೆ, ವಯಸ್ಸು ಹೆಚ್ಚಾದಂತೆ, ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ. ಆದರೆ ವಯಸ್ಸಾದಂತೆ ಋತುಚಕ್ರ ನಿಜವಾಗಿಯೂ ಅನಿಯಮಿತವಾಗುತ್ತದೆಯೇ, ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ನಿಮ್ಮ ಮನೆಯಲ್ಲಿರುವವರಲ್ಲಿ ಯಾರಿಗಾದರೂ ಈ ರೀತಿಯ ಸಮಸ್ಯೆಗಳು ಕಂಡುಬಂದಿದೆಯೇ? ಅನಿಯಮಿತ ಋತುಚಕ್ರಕ್ಕೆ ವಯಸ್ಸೊಂದೇ ಕಾರಣವಾಗುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೀವನಶೈಲಿಯಲ್ಲಿ ಆಗಿರುವಂತಹ ಕೆಲವು ಅನಾರೋಗ್ಯಕರ ಬದಲಾವಣೆಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಮಹಿಳೆಯರು ಅನುಭವಿಸುವ ಅನಿಯಮಿತ ಋತುಚಕ್ರದ ಸಮಸ್ಯೆಗಳು ಕೂಡ ಒಂದು. ಆದರೆ ಕೆಲವರಲ್ಲಿ ಈ ಅನಿಯಮಿತ ಋತುಚಕ್ರವು (Periods) ಪಿಸಿಓಎಸ್ (PCOS), ಫೈಬ್ರಾಯ್ಡ್‌ಗಳು ಇತ್ಯಾದಿ ಗಂಭೀರ ವೈದ್ಯಕೀಯ ಸ್ಥಿತಿಯನ್ನು ಕೂಡ ಸೂಚಿಸುತ್ತದೆ. ಅದಕ್ಕಾಗಿಯೇ ಋತುಚಕ್ರವು ಅನಿಯಮಿತವಾದ ತಕ್ಷಣ, ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಆದರೆ ಕೆಲವರು ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇದರ ಹೊರತಾಗಿ ಮಹಿಳೆಯರಿಗೆ ವಯಸ್ಸಾದಂತೆ, ಋತುಚಕ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತದೆ. ಇದು ಹಲವರ ಗಮನಕ್ಕೂ ಬಂದಿರಬಹುದು. ಆದರೆ ವಯಸ್ಸಾದಂತೆ ಋತುಚಕ್ರ ನಿಜವಾಗಿಯೂ ಅನಿಯಮಿತವಾಗುತ್ತದೆಯೇ, ಇದಕ್ಕೆ ಕಾರಣಗಳೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ ಋತುಚಕ್ರ ಅನಿಯಮಿತವಾಗಬಹುದು. ಇದನ್ನು ಪೆರಿಮೆನೋಪಾಸ್ ಎಂದು ಕರೆಯಲಾಗುತ್ತದೆ. ಇದು ಋತುಬಂಧದ ಸಮಯದಲ್ಲಿ ಅಂದರೆ ಮುಟ್ಟು ನಿಲ್ಲುವ ಸಮಯ. ಆಗ ಈ ರೀತಿಯಾಗುವುದು ಸಾಮಾನ್ಯವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳ ಮಟ್ಟವು ವೇಗವಾಗಿ ಕಡಿಮೆಯಾಗುತ್ತದೆ. ಇದೇ ಕಾರಣದಿಂದ ಮಹಿಳೆಯರು ಅನಿಯಮಿತ ಋತುಚಕ್ರವನ್ನು ಅನುಭವಿಸುತ್ತಾರೆ. ಮಾತ್ರವಲ್ಲ ಮಹಿಳೆಯರಿಗೆ ಕೆಲವೊಮ್ಮೆ, ಭಾರೀ ರಕ್ತಸ್ರಾವ ಇನ್ನು ಕೆಲವೊಮ್ಮೆ ತುಂಬಾ ಕಡಿಮೆ ರಕ್ತಸ್ರಾವವಾಗುತ್ತದೆ. ಅದರ ಜೊತೆ ಜೊತೆಗೆ ಮುಟ್ಟಿನ ಚಕ್ರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಸಹ ಗಮನಿಸಬಹುದು. ಸಾಮಾನ್ಯವಾಗಿ, 20 ರಿಂದ 30 ವರ್ಷ ವಯಸ್ಸಿನ ನಡುವೆ ಮುಟ್ಟು ಸಾಮಾನ್ಯವಾಗಿರುತ್ತದೆ, ಆದರೆ 40 ವರ್ಷದ ನಂತರ ಈ ರೀತಿಯ ಬದಲಾವಣೆಗಳು ಕಂಡುಬರುವುದಕ್ಕೆ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: ಋತುಚಕ್ರದ ನಂತರವೂ ಅತಿಯಾಗಿ ಬಿಳಿ ವಿಸರ್ಜನೆಯ ಜೊತೆಗೆ ದುರ್ವಾಸನೆ ಬರುತ್ತಿದ್ದರೆ ಚಿಂತಿಸಬೇಡಿ! ಈ ರೀತಿ ಮಾಡಿ
ವಯಸ್ಸಾದಂತೆ ಋತುಚಕ್ರದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತದೆ?
ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ, ಋತುಚಕ್ರವು ಅನಿಯಮಿತವಾಗುವುದು ಸಾಮಾನ್ಯ. ಕೆಲವೊಮ್ಮೆ ಋತುಚಕ್ರವು ದೀರ್ಘವಾಗಿರಬಹುದು ಅಂದರೆ ಬ್ಲಡ್ ಫ್ಲೋ ಹೆಚ್ಚಾಗಿದ್ದು ಹಲವು ದಿನಗಳ ವರೆಗೆ ಇರಬಹುದು. ಕೆಲವೊಮ್ಮೆ, ರಕ್ತಸ್ರಾವವಾಗುವುದು ಕಡಿಮೆಯಾಗಿರಬಹುದು. ಇದು 21 ರಿಂದ 35 ದಿನಗಳ ಚಕ್ರವಾಗಿರುತ್ತದೆ. ಇನ್ನು ವೃದ್ಧಾಪ್ಯದ ಸಮಯದಲ್ಲಿ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯ. ಕೆಲವರಲ್ಲಿ ಋತುಚಕ್ರ ಸರಿಯಾಗಿ ಬರದೆಯೇ ಇರಬಹುದು. ಇನ್ನು ಕೆಲವರಲ್ಲಿ ಋತುಚಕ್ರ ನಿಲ್ಲುವುದೇ ಇಲ್ಲ. ಋತುಬಂಧದ ಸಮಯದಲ್ಲಿ ಈ ರೀತಿ ಸಮಸ್ಯೆಗಳು ಕಂಡುಬರುವುದು ಬಹಳ ಸಾಮಾನ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ, ಋತುಚಕ್ರ ತಡವಾಗಿ ಬರುವುದು ಅಥವಾ ಪ್ರತಿ ತಿಂಗಳು ಸರಿಯಾಗಿ ಆಗದಿರುವುದು ಒಂದು ರೋಗದ ಸಂಕೇತವು ಆಗಿರಬಹುದು. ಹಾಗಾಗಿ ಮುಟ್ಟು ಪ್ರತಿ ತಿಂಗಳು ಆಗದೆಯೇ ತಪ್ಪುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




