Nag Panchami 2025: ನಾಗನಿಗೆ ಪ್ರೀಯವಾದ ಕೇದಗೆ ಹೂವಿನಲ್ಲೂ ಅಡಗಿದೆ ಆರೋಗ್ಯದ ಗುಟ್ಟು

ಕೇದಿಗೆ ಹೂವಿನ ಪರಿಮಳ ನಿಮ್ಮನ್ನು ಅದೆಷ್ಟೋ ದೂರದಿಂದಲೇ ಸೆಳೆಯಬಹುದು. ಅಂತಹ ಶಕ್ತಿ ತೆಳು ಅರಿಶಿನ ಬಣ್ಣದ ಹೂವಿಗಿದೆ. ಈ ಹೂವು ನಾಗನಿಗೆ ಬಲು ಪ್ರೀಯ. ಅದಕ್ಕಾಗಿಯೇ ಈ ಹೂವಿನ ಮರ ಇರುವಲ್ಲಿ ಹಾವುಗಳಿರುತ್ತವೆ ಎನ್ನುವ ನಂಬಿಕೆ ಇದೆ. ಅದಕ್ಕಾಗಿಯೇ ಈ ಸೌಗಂಧಿಕ ಹೂವನ್ನು ನಾಗರಪಂಚಮಿಯ ದಿನ ನಾಗಬನಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಆದರೆ ಈ ಹೂವನ್ನು ಕೇವಲ ಪೂಜೆಗೆ ಮಾತ್ರವಲ್ಲ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಬಳಸಲಾಗುತ್ತದೆ. ಹೇಗೆ ಗೊತ್ತಾ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Nag Panchami 2025: ನಾಗನಿಗೆ ಪ್ರೀಯವಾದ ಕೇದಗೆ ಹೂವಿನಲ್ಲೂ ಅಡಗಿದೆ ಆರೋಗ್ಯದ ಗುಟ್ಟು
Bangaluru (6)
Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2025 | 5:56 PM

ತೆಳು ಅರಿಶಿನ ಬಣ್ಣದಿಂದ ಕಂಗೊಳಿಸುವ ಕೇದಿಗೆ (Kewda flower) ಹೂವಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಗಾಳಿ ಬೀಸುವ ದಿಕ್ಕಿನಲ್ಲಿ ನೂರಾರು ಮೀಟರ್ ದೂರಕ್ಕೂ ತನ್ನ ಪರಿಮಳ ಸೂಸುವ ಈ ಸೌಗಂಧಿಕ ಹೂವನ್ನು ನಾಗರಪಂಚಮಿಯ ದಿನ ನಾಗಬನಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಇದು ನಾಗನಿಗೆ ಬಲು ಪ್ರೀಯ. ಅದಕ್ಕಾಗಿಯೇ ಈ ಹೂವಿನ ಮರ ಇರುವಲ್ಲಿ ಹಾವುಗಳಿರುತ್ತವೆ ಎನ್ನುವ ನಂಬಿಕೆ ಇದೆ. ನಾಗರ ಪಂಚಮಿಯ (Nag Panchami) ಸಮಯದಲ್ಲಿ ಕೇದಿಗೆ ಹೂವಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ ಕೇದಗೆ ಪುಷ್ಪಕ್ಕೂ ನಾಗ ದೇವರಿಗೂ ಅವಿನಾಭಾವ ಸಂಬಂಧವಿದೆ. ಮಾತ್ರವಲ್ಲ ಈ ಹೂವನ್ನು ಪೂಜೆಗೆ ಮಾತ್ರವಲ್ಲ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಬಳಸಲಾಗುತ್ತದೆ. ಹೇಗೆ ಗೊತ್ತಾ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾಗನಿಗೂ, ಕೇದಿಗೆ ಹೂವಿಗೂ ಏನು ಸಂಬಂಧ:

ನಾಗರ ಪಂಚಮಿಯ ದಿನ ಕೇದಿಗೆ ಹೂವನ್ನು ನಾಗನಿಗೆ ಅರ್ಪಿಸುವುದಕ್ಕೆ ಕಾರಣವಿದೆ. ಪುರಾಣದ ಪ್ರಕಾರ, ತುಂಬಾ ವರ್ಷಗಳ ಹಿಂದೆ, ಆರು ಜನ ಅಣ್ಣಂದಿರು ಮತ್ತು ಒಬ್ಬಳು ತಂಗಿ ಇರುವ ಒಂದು ಕುಟುಂಬವೊಂದು ಇತ್ತಂತೆ. ಆ ಮೆನೆಯಲ್ಲಿರುವ ಅಣ್ಣಂದಿರು ನಾಗಗಳಿಗೆ ತೊಂದರೆ ಕೊಟ್ಟು ನಾಗ ದೇವರ ಕೋಪಕ್ಕೆ ಗುರಿಯಾಗಿ ತೊಂದರೆ ಅನುಭವಿಸುತ್ತಿದ್ದರಂತೆ. ಆ ಸಮಯದಲ್ಲಿ ತಂಗಿಯು ಕೇದಿಗೆ ಪುಷ್ಪದಿಂದ ಪಂಚಮಿಯ ದಿನದಂದು ನಾಗ ದೇವರನ್ನು ಭಕ್ತಿಯಿಂದ ಪೂಜಿಸಿ ದೇವರ ಬಳಿ ಕ್ಷಮೆ ಕೇಳಿ, ತನ್ನ ಅಣ್ಣಂದಿರ ಶಾಪ ವಿಮೋಚನೆಗೆಯಾಗುವುದಕ್ಕೆ ಕಾರಣಳಾಗುತ್ತಾಳೆ, ಹಾಗಾಗಿ ಅಂದಿನಿಂದ ಕೇದಗೆ ಹೂವನ್ನು ನಾಗದೇವರ ಪೂಜೆಗೆ ಬಳಸುತ್ತಾರೆ ಎನ್ನುವ ಪ್ರತೀತಿ ಇದೆ.

ಇದನ್ನೂ ಓದಿ: Nag Panchami 2025: ನಾಗರಪಂಚಮಿ ದಿನ ಮಾಡುವ ಕಡುಬನ್ನು ಅರಶಿನ ಎಲೆಯಲ್ಲಿಯೇ ಮಾಡಲು ಕಾರಣವೇನು?

ಕೇದಗೆ ಹೂವಿನ ಆರೋಗ್ಯ ಪ್ರಯೋಜನಗಳು:

ಕೇದಗೆ ಹೂವು ಸುಗಂಧ ತೈಲ, ಸೌಂದರ್ಯವರ್ಧಕಗಳು ಮತ್ತು ಪೂಜೆಗೆ ಮಾತ್ರವಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೇದಗೆಯ ಎಲೆಗಳು, ಹೂವುಗಳು ಮತ್ತು ಬೇರುಗಳನ್ನು ವಿವಿಧ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.

  • ಕೇದಗೆಯ ತೈಲವನ್ನು ಸ್ನಾಯು ಸೆಳೆತ, ತಲೆನೋವು ಮತ್ತು ನರಗಳ ದೌರ್ಬಲ್ಯಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
  • ಕೇದಗೆಯ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಸೊಂಪಾಗಿ ಬೆಳೆಯುತ್ತದೆ ಮಾತ್ರವಲ್ಲ ಕೂದಲಿಗೆ ಹೊಳಪು ಸಿಗುತ್ತದೆ.
  • ಕೇದಗೆಯ ಎಲೆಗಳನ್ನು ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳಿಗೆ ಮತ್ತು ಉರಿಯೂತಕ್ಕೆ ಮದ್ದಾಗಿ ಉಪಯೋಗ ಮಾಡಲಾಗುತ್ತದೆ.
  • ಇದರ ಬೇರುಗಳನ್ನು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ.
  • ಕೇದಗೆಯ ಪರಿಮಳ ಮನಸ್ಸಿಗೆ ಶಾಂತಿ ನೀಡಿ ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.
  • ಕೇದಗೆಯ ಎಲೆಗಳನ್ನು ರಕ್ತವನ್ನು ಶುದ್ಧೀಕರಿಸಲು ಬಳಸಲಾಗುತ್ತದೆ. ಮಾತ್ರವಲ್ಲ ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
  • ಕೇದಗೆಯ ಬೇರುಗಳನ್ನು ಜಾಂಡೀಸ್ ಗೆ ಮದ್ದು ನೀಡಲು ಬಳಕೆ ಮಾಡಲಾಗುತ್ತದೆ.
  • ಕೇದಗೆಯನ್ನು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ.
  • ಕೇದಗೆಯನ್ನು ಉಸಿರಾಟದ ತೊಂದರೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಆದರೆ ಅದನ್ನು ಬಳಸುವ ಮೊದಲು, ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sat, 26 July 25