Urine problem: ಉರಿ ಮೂತ್ರದ ಸಮಸ್ಯೆಗೆ ಈ ಸರಳ ಮನೆಮದ್ದನ್ನು ಪ್ರಯತ್ನಿಸಿ ನೋಡಿ

| Updated By: ಅಕ್ಷತಾ ವರ್ಕಾಡಿ

Updated on: Jun 02, 2024 | 2:10 PM

ಮೂತ್ರ ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾದರೂ ಕೂಡ ಇದನ್ನು ನಿರ್ಲಕ್ಷ ಮಾಡುವಂತಿಲ್ಲ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ನೀರಿನ ಕೊರತೆಯಾಗಿರುವುದು ಅಥವಾ ಮೂತ್ರನಾಳಗಳಲ್ಲಿ ಏನಾದರೂ ಸೋಂಕುಗಳಿದ್ದರೂ ಈ ರೀತಿಯ ಅನುಭವವಾಗುತ್ತದೆ. ಹಾಗಾದರೆ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ಯಾವೆಲ್ಲಾ ಬಗೆಯ ಮನೆಮದ್ದುಗಳನ್ನು ಮಾಡಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Urine problem: ಉರಿ ಮೂತ್ರದ ಸಮಸ್ಯೆಗೆ ಈ ಸರಳ ಮನೆಮದ್ದನ್ನು ಪ್ರಯತ್ನಿಸಿ ನೋಡಿ
Burning urine problem
Follow us on

ಉರಿ ಮೂತ್ರದ ಸಮಸ್ಯೆಯನ್ನು ಕಡೆಗಣಿಸುವವರೇ ಹೆಚ್ಚು. ಮೂತ್ರ ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾದರೂ ಕೂಡ ಇದನ್ನು ನಿರ್ಲಕ್ಷ ಮಾಡುವಂತಿಲ್ಲ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ನೀರಿನ ಕೊರತೆಯಾಗಿರುವುದು ಅಥವಾ ಮೂತ್ರನಾಳಗಳಲ್ಲಿ ಏನಾದರೂ ಸೋಂಕುಗಳಿದ್ದರೂ ಈ ರೀತಿಯ ಅನುಭವವಾಗುತ್ತದೆ. ಹಾಗಾದರೆ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ಯಾವೆಲ್ಲಾ ಬಗೆಯ ಮನೆಮದ್ದುಗಳನ್ನು ಮಾಡಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

  1. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪ್ರತಿನಿತ್ಯ ಕನಿಷ್ಠ ಒಂದೆರಡು ಲೀಟರ್ ನೀರು ಕುಡಿಯಲೇಬೇಕು. ಇದರಿಂದ ದೇಹದ ನಿರ್ಜಲೀಕರಣ ಸಮಸ್ಯೆ ದೂರವಾಗುವುದರ ಜೊತೆಗೆ, ದೇಹದಲ್ಲಿ ಕಂಡು ಬರುವ ವಿಷಕಾರಿ ಅಂಶಗಳು ಮೂತ್ರ ವಿಸರ್ಜನೆಯ ಮೂಲಕ ಹೊರ ಹೋಗುತ್ತದೆ. ಇದರಿಂದ ಉರಿ ಮೂತ್ರದ ಸಮಸ್ಯೆ ಕ್ರಮೇಣವಾಗಿ ದೂರವಾಗುತ್ತದೆ.
  2. ನೆಲ್ಲಿಕಾಯಿಯಲ್ಲಿ ನೀರಿನಾಂಶವು ಹೆಚ್ಚಿದ್ದು ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ, ಉರಿ ಮೂತ್ರದ ಸಮಸ್ಯೆಯನ್ನು ದೂರ ಮಾಡುತ್ತದೆ.
  3. ಮನೆಯಲ್ಲಿಯೇ ಹಾಲಿಗೆ ಹೆಪ್ಪು ಹಾಕಿ ಮಾಡಿದ ಮಜ್ಜಿಗೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ, ಉರಿ ಮೂತ್ರದ ಸಮಸ್ಯೆಯನ್ನು ದೂರ ಮಾಡುತ್ತದೆ.
  4.  ದಾಳಿಂಬೆ ಮತ್ತು ಲಿಂಬೆ ಜ್ಯೂಸ್ ಗಳು ಕೂಡ ಉರಿ ಮೂತ್ರದ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಇದನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಮೂತ್ರ ವಿಸರ್ಜಿಸಿದ ಬಳಿಕವೂ ಮೂತ್ರವು ಬರುತ್ತಿದೆ ಎಂಬ ಭಾವನೆ ಕಡಿಮೆಯಾಗಿ, ಸಮಸ್ಯೆಗೆ ಮುಕ್ತಿ ಸಿಗುತ್ತದೆ.
  5. ಉರಿ ಮೂತ್ರದ ಸಮಸ್ಯೆ ಇರುವವರು, ಪ್ರತಿದಿನ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿಯುತ್ತಾ ಬಂದರೆ ಮೂತ್ರದ ಮೂಲಕ ವಿಷಕಾರಿ ಅಂಶಗಳು ಹೊರ ಹೋಗುವುದು ಮಾತ್ರವಲ್ಲದೆ, ಉರಿ ಮೂತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ.
  6. ಉರಿ ಮೂತ್ರದ ಸಮಸ್ಯೆ ಕಂಡುಬಂದಲ್ಲಿ ಸೌತೆಕಾಯಿ ರಸ ಸೇವಿಸಿ. ಸೌತೆಕಾಯಿಯನ್ನು ಮಿಕ್ಸಿಯಲ್ಲಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆ ರಸ ಹಿಂಡಿ ಕುಡಿಯಿರಿ.
  7.  ಏಲಕ್ಕಿ ಮೂತ್ರದಲ್ಲಿ ಸುಡುವ ಸಂವೇದನೆ ಕಡಿಮೆ ಮಾಡುತ್ತದೆ. ನಿತ್ಯವೂ ಚಹಾ ಅಥವಾ ಹಾಲಿನಲ್ಲಿ ಏಲಕ್ಕಿ ಹಾಕಿ ಕುಡಿಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: