Health Tips : ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ ನಿದ್ದೇನೆ ಬರಲ್ವಾ? ಈ ಟಿಪ್ಸ್ ಫಾಲೋ ಮಾಡಿ
ರಾತ್ರಿ ಎಷ್ಟೇ ಕಣ್ಣು ಮುಚ್ಚಿದರೂ ನಿದ್ದೆಯೇ ಬರುವುದಿಲ್ಲ. ಪದೇ ಪದೇ ಎಚ್ಚರವಾಗುತ್ತಿರುತ್ತದೆ ಎಂದು ಕೆಲವರು ಹೇಳಿರುವುದನ್ನು ಕೇಳಿರಬಹುದು. ಕೆಲವರಿಗೆ ಹಾಸಿಗೆಯ ಮೇಲೆ ತಲೆಯಿಟ್ಟ ತಕ್ಷಣವೇ ನಿದ್ದೆ ಬರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ ನಿದ್ರಾದೇವಿ ಆವರಿಸಿಕೊಳ್ಳುವುದೇ ಇಲ್ಲ. ಕೆಲವೊಮ್ಮೆ ನಡು ರಾತ್ರಿಯಲ್ಲಿ ಎಚ್ಚರವಾಗುತ್ತಿರುತ್ತದೆ. ಈ ಸಮಸ್ಯೆಗೆ ನೀವೇ ಪರಿಹಾರವನ್ನು ಅತ್ಯಂತ ಸುಲಭವಾಗಿ ಕಂಡುಕೊಳ್ಳಬಹುದು.
ರಾತ್ರಿ ಕಣ್ಣು ಮುಚ್ಚಿದರೆ ಯಾರೂ ಆ ತಕ್ಷಣವೇ ನಿದ್ರೆಗೆ ಜಾರುತ್ತರೋ ಅವರಷ್ಟು ಸುಖಿಗಳು ಬೇರೆ ಯಾರು ಇಲ್ಲ. ಹೌದು, ದಿನವಿಡೀ ಕೆಲಸ ಮಾಡಿ ಸುಸ್ತು ಆಗಿರುವ ದೇಹಕ್ಕೆ ವಿಶ್ರಾಂತಿ ಅಗತ್ಯ. ಹೀಗಾಗಿ ಒಬ್ಬ ವ್ಯಕ್ತಿಯ ದಿನಕ್ಕೆ ಎಳರಿಂದ ಎಂಟು ಗಂಟೆಗಳ ನಿದ್ರಿಸಬೇಕು. ಎಷ್ಟೇ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದರೂ ನಿದ್ದೆ ಬರುವುದೇ ಇಲ್ಲ. ಕೆಲವರಿಗೆ ರಾತ್ರಿಯ ವೇಳೆ ಪದೇ ಪದೇ ಎಚ್ಚರವಾಗುತ್ತಿರುತ್ತದೆ. ಮಲಗುವ ಮುಂಚೆ ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಆರಾಮಾಗಿ ನಿದ್ರಿಸಬಹುದು.
- ಕಾಫಿ ಟೀ ಪ್ರಿಯರಿಗೆ ಹೊತ್ತು ಗೊತ್ತು ಇರಲ್ಲ. ರಾತ್ರಿ ಕಾಫಿ ಟೀ ಕೊಟ್ಟರೂ ಕುಡಿಯುತ್ತಾರೆ. ರಾತ್ರಿಯ ವೇಳೆ ಕಾಫಿ ಟೀ ಸೇವನೆಯು ನಿದ್ದೆಗೆ ಬರದಿರಲು ಕಾರಣವಾಗುತ್ತದೆ. ಹೀಗಾಗಿ ಮಲಗುವುದಕ್ಕಿಂತ ಎರಡು ಮೂರು ಗಂಟೆಗಳ ಮೊದಲು ಕಾಫಿ ಹಾಗೂ ಟೀ ಸೇವನೆಯಿಂದ ದೂರವಿರುವುದು ಉತ್ತಮ.
- ರಾತ್ರಿ ಮಲಗುವ ಮುನ್ನ ಆಳವಾಗಿ ಉಸಿರಾಡಿದರೆ ಒತ್ತಡ ಕಡಿಮೆಯಾಗಿ, ದೇಹ ಮತ್ತು ಮನಸ್ಸಿನ ವಿಶ್ರಾಂತಿ ಸಿಗುತ್ತದೆ. ಹೀಗೆ ಮಾಡಿದ್ದಲ್ಲಿ ರಾತ್ರಿ ನಿದ್ದೆಯಲ್ಲಿ ಪದೇ ಪದೇ ಎಚ್ಚರವಾಗುವುದಿಲ್ಲ.
- ರಾತ್ರಿಯ ವೇಳೆಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುವ ಅನ್ನ, ಚಿಪ್ಸ್, ಆಲೂಗಡ್ಡೆ, ಬಾಳೆಹಣ್ಣು, ಪಾಸ್ಟಾ ಮುಂತಾದ ಆಹಾರವನ್ನು ಸೇವಿಸಬಾರದು. ಇದರಿಂದ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ.
- ಟೆನ್ಷನ್ ಎಲ್ಲರಿಗೂ ಇದ್ದದ್ದೆ. ಸಣ್ಣ ಪುಟ್ಟ ವಿಷಯಕ್ಕೂ ಟೆನ್ಶನ್ ಹಾಗೂ ಒತ್ತಡ ತೆಗೆದುಕೊಳ್ಳುವುದರಿಂದ ಮಾನಸಿಕ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ರಾತ್ರಿ ಮಲಗಿದರೂ ನಿದ್ದೆ ಬರುವುದಿಲ್ಲ. ಎಲ್ಲಾ ಟೆನ್ಶನ್ ಗಳನ್ನು ಬದಿಗಿಟ್ಟು ಹಾಸಿಗೆಗೆ ಒರಗುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: