ವಿಬ್ರಿಯೊ ವಲ್ನಿಫಿಕಸ್(Vibrio Vulnificus) ಒಂದು ಮಾರಣಾಂತಿಕ ವೈರಸ್ ಆಗಿದ್ದು, ಬೇಯಿಸಿದ ಅಥವಾ ಹಸಿ ಸಮುದ್ರಾಹಾರವನ್ನು ಸೇವಿಸಿದ ನಂತರ ಸೋಂಕಿಗೆ ಒಳಗಾಗಬಹುದು. ವಿಬ್ರಿಯೊ ಸಾಮಾನ್ಯವಾಗಿ ಸಿಂಪಿ, ಮೀನು, ಚಿಪ್ಪು ಮೀನು ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಇದು ಮಾರಣಾಂತಿಕ ಸೋಂಕಾಗಿದ್ದು, ಬೇಯಿಸದ ಸಮುದ್ರಾಹಾರವನ್ನು ತಿನ್ನುವ ಮೂಲಕ ಅಥವಾ ಯಾರಾದರೂ ಅದರ ರಸದೊಂದಿಗೆ ಸಂಪರ್ಕಕ್ಕೆ ಬಂದಾಗ ಹರಡಬಹುದು.ಇದರ ರೋಗಲಕ್ಷಣಗಳು ಒಂದು ಅಥವಾ ಎರಡು ದಿನಗಳಲ್ಲಿ ಸಂಭವಿಸಲು ಪ್ರಾರಂಭಿಸುತ್ತವೆ. ಇದು ಕರುಳಿನಿಂದ ರಕ್ತಕ್ಕೆ ಮತ್ತು ನಂತರ ಇತರ ಅಂಗಗಳಿಗೆ ತ್ವರಿತವಾಗಿ ಹರಡಬಹುದು.
ನ್ಯೂಯಾರ್ಕ್ ಟೈಮ್ಸ್‌ನ ವರದಿಯ ಪ್ರಕಾರ, ಕಲುಷಿತಗೊಂಡ ನೀರಿನಲ್ಲಿ ಈಜಿದಾಗ ಅಥವಾ ನಿಮ್ಮ ದೇಹದ ಮೇಲಿನ ತೆರೆದ ಹುಣ್ಣು ಅಥವಾ ಕಡಿತವು ಈ ಬ್ಯಾಕ್ಟೀರಿಯಾ ದೇಹದೊಳಗೆ ಪ್ರವೇಶಿಸಲು ಅನುವು ಮಾಡಿ ಕೊಡುತ್ತದೆ. ಮಾಂಸ ತಿನ್ನುವ ಸೋಂಕು ಎಂದು ಕರೆಯಲ್ಪಡುತ್ತದೆ, ಇದು ಗಾಯವನ್ನು ಮೀರಿ ಆರೋಗ್ಯಕರ ಅಂಗಾಂಶಕ್ಕೆ ತ್ವರಿತವಾಗಿ ವಿಸ್ತರಿಸುತ್ತದೆ. ನಂತರ ಅದು ರಕ್ತಪ್ರವಾಹಕ್ಕೆ ಹರಡಬಹುದು,ಕ್ರಮೇಣ ಇದು ಸೆಪ್ಸಿಸ್ ಎಂಬ ಮಾರಣಾಂತಿಕ ಸ್ಥಿತಿಯನ್ನು ಉಂಟುಮಾಡುತ್ತದೆ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಅಥವಾ ಯಕೃತ್ತಿನ ಕಾಯಿಲೆ ಇರುವವರು ಕಲುಷಿತ ನೀರಿನಲ್ಲಿರುವ ಮೀನು ತಿಂದಾಗ ಬ್ಯಾಕ್ಟೀರಿಯ ಹರಡುತ್ತದೆ. ವೈದ್ಯರು ಈ ಪರಿಸ್ಥಿತಿಗಳಿರುವ ರೋಗಿಗಳಿಗೆ ಹಸಿ ಸಿಂಪಿಗಳನ್ನು ತಿನ್ನುವುದರ ವಿರುದ್ಧ ಎಚ್ಚರಿಸುತ್ತಾರೆ. ಮೀನುಗಳನ್ನು ಸಾಮಾನ್ಯವಾಗಿ ಬೇಯಿಸಿ ತಿನ್ನುತ್ತಾರೆ. ಸಿಂಪಿಯಂತಹ ಸಮುದ್ರಾಹಾರಗಳನ್ನು ಹಸಿಯಾಗಿ ತಿನ್ನುವುದರಿಂದ ಈ ಮಾರಣಾಂತಿಕ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ.
ರೋಗ ಲಕ್ಷಣಗಳು:
ಇದನ್ನೂ ಓದಿ: ನಿಫಾ ವೈರಸ್ ಮಕ್ಕಳನ್ನೇ ಹೆಚ್ಚು ಕಾಡುವುದೇಕೆ?
ಜ್ವರ, ಅತಿಸಾರ ಮತ್ತು ದದ್ದು ಸೋಂಕಿನ ಮೊದಲ ಚಿಹ್ನೆಗಳು. ಆದರೆ, ರಕ್ತ, ಅಂಗಾಂಶ ಅಥವಾ ಇತರ ಪರೀಕ್ಷೆಗಳ ನಂತರ ಮಾತ್ರ ಸರಿಯಾಗಿ ರೋಗನಿರ್ಣಯ ಮಾಡಬಹುದು. ಆರಂಭಿಕ ಹಂತದಲ್ಲಿ ಪತ್ತೆಯಾದಾಗ, ಔಷಧಿ ಮತ್ತು ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡುವ ಸಾಧ್ಯತೆಗಳಿವೆ. ಆದರೆ, ಸೋಂಕು ಸಾಮಾನ್ಯವಾಗಿ ತುಂಬಾ ಬೇಗನೆ ತೀವ್ರವಾಗುವುದರಿಂದ, ರೋಗಿಗಳಿಗೆ ಪೀಡಿತ ಅಂಗಗಳನ್ನು ಕತ್ತರಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲದಿದ್ದರೆ ಇದು ಇಡಿ ದೇಹದ ಅಂಗಾಂಗಗಳಿಗೆ ಹರಡುವ ಸಾಧ್ಯತೆ ಹೆಚ್ಚಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: