ಕೆಂಪು ಸೇಬು ಹಣ್ಣಿಗಿಂತಲೂ ಹಸಿರು ಸೇಬು ಒಳ್ಳೆಯದಾ?

ಗ್ರೀನ್ ಆ್ಯಪಲ್ ಹಣ್ಣಿನಲ್ಲಿ ಕಡಿಮೆ ಸಕ್ಕರೆ ಅಂಶ, ಹೆಚ್ಚು ಫೈಬರ್ ಇರುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಕೆಂಪು ಸೇಬು ಮತ್ತು ಹಸಿರು ಸೇಬು ಹಣ್ಣಿನಲ್ಲಿ ಯಾವುದು ಬೆಸ್ಟ್? ಎಂಬ ಅನುಮಾನ ನಿಮಗೂ ಮೂಡಿರಬಹುದು.

ಕೆಂಪು ಸೇಬು ಹಣ್ಣಿಗಿಂತಲೂ ಹಸಿರು ಸೇಬು ಒಳ್ಳೆಯದಾ?
ಹಸಿರು ಸೇಬು Image Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 19, 2023 | 5:35 PM

ಸೇಬು ಹಣ್ಣು ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಹಣ್ಣು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಂಪು ಸೇಬು ಮತ್ತು ಹಸಿರು ಸೇಬು ಹಣ್ಣಿನಲ್ಲಿ ಯಾವುದು ಬೆಸ್ಟ್? ಎಂಬ ಅನುಮಾನ ನಿಮಗೂ ಮೂಡಿರಬಹುದು. ವಾಸ್ತವದ ಸಂಗತಿಯೆಂದರೆ ಕೆಂಪು ಸೇಬು ಹಣ್ಣಿಗಿಂತಲೂ ಹಸಿರು ಸೇಬಿನಲ್ಲಿ ಪೌಷ್ಟಿಕಾಂಶಗಳು ಕೊಂಚ ಹೆಚ್ಚೇ ಇರುತ್ತದೆ. ಅದರಲ್ಲೂ ಮಧುಮೇಹಿಗಳಿಗೆ ಗ್ರೀನ್ ಆ್ಯಪಲ್ ಹೇಳಿ ಮಾಡಿಸಿದ ಹಣ್ಣು.

ಹಸಿರು ಸೇಬು ಒಂದು ಹೈಬ್ರೀಡ್ ಹಣ್ಣು. ಮಾಲಸ್ ಸ್ಲೈವೆಸ್ಟರಸ್ ಮತ್ತು ಮಾಲಸ್ ಡೊಮೆಸ್ಟಿಕಸ್ ಎಂಬ 2 ವಿಭಿನ್ನ ಜಾತಿಯ ಸೇಬುಗಳನ್ನು ಸಂಯೋಜಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರೀನ್ ಆ್ಯಪಲ್ ಹಣ್ಣಿನಲ್ಲಿ ಕಡಿಮೆ ಸಕ್ಕರೆ ಅಂಶ, ಹೆಚ್ಚು ಫೈಬರ್ ಇರುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ.

ಹಸಿರು ಸೇಬಿನಲ್ಲಿ ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ಇದು ಶ್ವಾಸಕೋಶ, ಮೇದೋಜೀರಕ ಗ್ರಂಥಿ ಮತ್ತು ಕರುಳಿನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಸೇಬು ಸ್ತನ ಕ್ಯಾನ್ಸರ್, ಕೊಲೊನ್ ಮತ್ತು ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ.

ಇದನ್ನೂ ಓದಿ: ಸೇಬು ತಿನ್ನಲು ಸರಿಯದ ಸಮಯ ಯಾವುದು? ಇಲ್ಲಿದೆ ಮಾಹಿತಿ

ಹಸಿರು ಸೇಬಿನ ರಸವು ಮೆದುಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಹೊಂದಿರುವ ಆಹಾರವಾಗಿರುವ ಹಸಿರು ಸೇಬುಗಳನ್ನು ತಿನ್ನುವುದು ಮೆದುಳಿನ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ದೃಢಪಡಿಸಿದೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಹಸಿರು ಸೇಬುಗಳು ಸಹಾಯ ಮಾಡುತ್ತವೆ.

ಹಸಿರು ಸೇಬಿನ ಸೇವನೆಯು ಆಸ್ತಮಾ ಸೇರಿದಂತೆ ಅನೇಕ ಶ್ವಾಸಕೋಶದ ಸಮಸ್ಯೆಗಳನ್ನು ತಡೆಯುತ್ತದೆ. ಹಸಿರು ಸೇಬುಗಳ ಸೇವನೆಯು ಅಸ್ತಮಾದ ಸಂಭವವನ್ನು ಕಡಿಮೆ ಮಾಡುತ್ತದೆ. ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ಅಧ್ಯಯನವು ಹಸಿರು ಸೇಬು ಸೇವನೆಯು ಆಸ್ತಮಾ ಮತ್ತು ಶ್ವಾಸಕೋಶದ ಅತಿಸೂಕ್ಷ್ಮತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.

ಇದನ್ನೂ ಓದಿ: ಸೇಬು ಹಣ್ಣಿನ ಸಿಪ್ಪೆಯಿಂದ ತ್ವಚೆಯ ಕಾಂತಿ ಹೆಚ್ಚಿಸಿ

ಹಸಿರು ಸೇಬಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹಸಿರು ಸೇಬಿನಲ್ಲಿ ಕ್ವೆರ್ಸೆಟಿನ್ ಎಂಬ ಅಂಶವಿದೆ. ಹಸಿರು ಬಣ್ಣದ ಸೇಬು ಸೇವಿಸುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಹಸಿರು ಸೇಬಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ವಯಸ್ಸಾದಂತೆ ಮಹಿಳೆಯರಲ್ಲಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ಈ ಸಮಯದಲ್ಲಿ ಗ್ರೀನ್ ಆ್ಯಪಲ್ ಸೇವಿಸಿದರೆ ಮೂಳೆಗಳು ಬಲಗೊಳ್ಳುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ