Vitamin D Deficiency: ಚಳಿಗಾಲದಲ್ಲಿ ಕೀಲು ನೋವು ಕಾಡದಿರಲು, ಈಗಿನಿಂದಲೇ ಈ ಆಹಾರಗಳನ್ನು ಪ್ರತಿದಿನ ಸೇವಿಸಿ

ಚಳಿಗಾಲದಲ್ಲಿ ಸಾಕಷ್ಟು ಜನರಲ್ಲಿ ಮೊಣಕಾಲು ನೋವು, ಕೀಲು ನೋವು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಆದರಿಂದ ಈ ಸಮಸ್ಯೆ ಕಾಡಲು ಕಾರಣವೇನು? ಹಾಗೂ ಯಾವ ರೀತಿ ನಿವಾರಿಸಬಹುದು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿ ತಿಳಿದುಕೊಳ್ಳಿ.

Vitamin D Deficiency: ಚಳಿಗಾಲದಲ್ಲಿ ಕೀಲು ನೋವು ಕಾಡದಿರಲು, ಈಗಿನಿಂದಲೇ ಈ ಆಹಾರಗಳನ್ನು ಪ್ರತಿದಿನ ಸೇವಿಸಿ
Vitamin D Deficiency
Image Credit source: Pinterest

Updated on: Nov 10, 2023 | 5:08 PM

ಚಳಿಗಾಲದಲ್ಲಿ ಬಿಸಿಲು ಕಡಿಮೆ ಇರುವುದರಿಂದ ಸಾಕಷ್ಟು ಜನರಲ್ಲಿ ವಿಟಮಿನ್​​ ಡಿ ಕೊರತೆ ಕಂಡುಬರುತ್ತದೆ. ಈ ವಿಟಮಿನ್ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೀರಿಕೊಳ್ಳಲು ಬಳಸಲಾಗುತ್ತದೆ. ತಜ್ಞರ ಪ್ರಕಾರ, ದೇಹದಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆಯಾದರೆ, ಕೀಲುಗಳಲ್ಲಿ ನೋವು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಆದ್ದರಿಂದ, ಈ ಅಗತ್ಯ ವಿಟಮಿನ್ ಸೇವನೆಯನ್ನು ಹೆಚ್ಚಿಸುವುದು ಮುಖ್ಯವಾಗಿದೆ. ಈಗಿನಿಂದಲೇ ಈ ಕೆಲವು ಆಹಾರಗಳನ್ನು ತಿನ್ನುವ ಮೂಲಕ ನೀವು ವಿಟಮಿನ್ ಡಿ ಕೊರತೆಯು ಕಾಡದಂತೆ ನೋಡಿಕೊಳ್ಳಬಹುದಾಗಿದೆ. ಜೊತೆಗೆ ಚಳಿಗಾಲದಲ್ಲಿ ನೀವು ಆರೋಗ್ಯವಾಗಿ ಮತ್ತು ಫಿಟ್ ಆಗಿರಬಹುದು. ಚಳಿಗಾಲದಲ್ಲಿ ಸೂರ್ಯನ ಬೆಳಕು ಇಲ್ಲದಿದ್ದರೂ ಸಹ, ಈ ಹಣ್ಣುಗಳು ಮತ್ತು ತರಕಾರಿ ಸೇವನೆಯೊಂದಿಗೆ ದೇಹದಲ್ಲಿ ವಿಟಮಿನ್​​ ಡಿ ಹೆಚ್ಚಿಸಿಕೊಳ್ಳಬಹುದು.

ಸೂರ್ಯನ ಕಿರಣದ ಹೊರತಾಗಿ ವಿಟಮಿನ್ ಡಿ ಹೇರಳವಾಗಿರುವ ಆಹಾರಗಳು:

ಹಾಲು ಮತ್ತು ಮೊಸರು:

ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದರೆ ಸೂರ್ಯನ ಬೆಳಕು . ಇದಲ್ಲದೇ ಡೈರಿ ಉತ್ಪನ್ನಗಳ ಸೇವನೆಯಿಂದ ನೀವು ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು. ಆದ್ದರಿಂದ ಚಳಿಗಾಲದಲ್ಲಿ ಹಾಲು ಮತ್ತು ಮೊಸರು ಸೇವಿಸಲು ಮರೆಯದಿರಿ ಎಂದು ದೆಹಲಿಯ ಡಾ.ದೀಪಕ್ ಸುಮನ್ ಸಲಹೆ ನೀಡುತ್ತಾರೆ.

ಕಿತ್ತಳೆ ಹಣ್ಣು ಸೇವಿಸಿ:

ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಚಳಿಗಾಲದಲ್ಲಿ ಪ್ರತಿದಿನ ಒಂದು ಅಥವಾ ಎರಡು ಕಿತ್ತಳೆ ತಿನ್ನಿರಿ. ವಿಶೇಷವಾಗಿ ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗೆ ಕಿತ್ತಳೆ ಹಣ್ಣು ಉತ್ತಮ ಔಷಧಿಯಾಗಿದೆ. ಯಾಕೆಂದರೆ ಕಿತ್ತಳೆ ಹಣ್ಣು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಧುಮೇಹ ಶಾಶ್ವತವಾಗಿ ಹತೋಟಿಯಲ್ಲಿಟ್ಟುಕೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೇ!

ಸೇಬು ಹಣ್ಣು:

ಪ್ರತಿದಿನ ಸೇಬು ತಿನ್ನುವುದು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಡಿ ಮಾತ್ರವಲ್ಲದೆ ಸಿ ಮತ್ತು ಎ ನಂತಹ ಪೋಷಕಾಂಶಗಳೂ ಇವೆ. ಸೇಬನ್ನು ಸೇವಿಸುವುದರಿಂದ ದೇಹದಲ್ಲಿರುವ ರಕ್ತಹೀನತೆಯೂ ದೂರವಾಗುತ್ತದೆ.

ಅನಾನಸ್ ಸೇವಿಸಿ:

ದೇಹದಲ್ಲಿ ವಿಟಮಿನ್ ಸಿ ಮತ್ತು ಡಿ ಕೊರತೆಗಾಗಿ ನೀವು ಅನಾನಸ್ ಸೇವಿಸಬಹುದು. ಜೀವಸತ್ವಗಳ ಹೊರತಾಗಿ, ಕ್ಯಾಲ್ಸಿಯಂ ಮತ್ತು ರಂಜಕವು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಚಳಿಗಾಲದಲ್ಲಿ ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಅಣಬೆ:

ಅಣಬೆ ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ವರದಿಗಳ ಪ್ರಕಾರ, ಅಣಬೆ ಬೆಳೆಯುವ ಸಮಯದಲ್ಲಿ, ಇದು ಸೂರ್ಯನಿಂದ ವಿಟಮಿನ್ ಡಿ ಅನ್ನು ಹೀರಿಕೊಳ್ಳುತ್ತದೆ. ಮಕ್ಕಳಿಗೆ ಆಹಾರಕ್ಕಾಗಿ ನೀವು ಮನೆಯಲ್ಲಿ ತ್ವರಿತ ಆಹಾರಗಳಲ್ಲಿ ಅಣಬೆಗಳನ್ನು ಸೇರಿಸಿಕೊಳ್ಳಬಹುದು.

ಪಾಲಕ್​​​ ಸೊಪ್ಪು:

ಪಾಲಕ್​​ ಸೊಪ್ಪಿನಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ವಿಟಮಿನ್ ಡಿ, ಸಿ ಮತ್ತು ಎ ಹೊರತುಪಡಿಸಿ, ಬಹಳಷ್ಟು ಕಬ್ಬಿಣವು ಇದರಲ್ಲಿ ಕಂಡುಬರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಆಹಾರಕ್ರಮದಲ್ಲಿ ಪಾಲಕ್​ ಸೊಪ್ಪು ಸೇರಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us