ವಿಟಮಿನ್ ಡಿ ಕೊರತೆ ಉಂಟಾದರೆ ನಾಲಿಗೆಯಲ್ಲಿ ಈ ಲಕ್ಷಣಗಳು ಕಂಡುಬರಬಹುದು

ನಿಮ್ಮ ದೇಹದಲ್ಲಿ ವಿಟಮಿನ್​​ ಡಿ ಕಡಿಮೆಯಾಗುತ್ತಾ ಹೋದ ಹಾಗೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಉಂಟಾಗುತ್ತದೆ. ಆದರಂತೆಯೇ ನಿಮ್ಮ ನಾಲಿಗೆಯ ಮೇಲೆಯೂ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

ವಿಟಮಿನ್ ಡಿ ಕೊರತೆ ಉಂಟಾದರೆ ನಾಲಿಗೆಯಲ್ಲಿ ಈ ಲಕ್ಷಣಗಳು ಕಂಡುಬರಬಹುದು
ವಿಟಮಿನ್ ಡಿ ಕೊರತೆ
Follow us
ಅಕ್ಷತಾ ವರ್ಕಾಡಿ
|

Updated on:Apr 13, 2023 | 11:44 AM

ವಿಟಮಿನ್ ಡಿ ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್​​ ಡಿ ಕಡಿಮೆಯಾಗುತ್ತಾ ಹೋದ ಹಾಗೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಉಂಟಾಗುತ್ತದೆ. ಆದರಂತೆಯೇ ನಿಮ್ಮ ನಾಲಿಗೆಯ ಮೇಲೆಯೂ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ನಿಮ್ಮ ನಾಲಿಗೆಯಲ್ಲಿ ಇಂತಹ ಕೆಲವೊಂದು ಲಕ್ಷಣಗಳು ಕಂಡುಬಂದರೆ ವಿಟಮಿನ್ ಡಿ ಕೊರತೆ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ.

ಸನ್ಶೈನ್ ವಿಟಮಿನ್ ಅಥವಾ ಸೂರ್ಯನ ಕಿರಣ ಎಂದು ಕೂಡ ವಿಟಮಿನ್ ಡಿ ಯನ್ನು ಕರೆಯಲಾಗುತ್ತದೆ. ಬೆಳಗಿನ ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವ ಹೊರತಾಗಿಯೂ ಕೆಲವು ಹಾಲಿನ ಉತ್ಪನ್ನ, ಧಾನ್ಯ, ಮೀನು ಹಾಗೂ ಮೊಟ್ಟೆಯ ಹಳದಿಗಳಂತಹ ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಇರುತ್ತದೆ.

ವಿಟಮಿನ್ ಡಿ ಕೊರತೆ ಉಂಟಾದರೆ ನಾಲಿಗೆಯಲ್ಲಿ ಈ ಲಕ್ಷಣಗಳು ಕಂಡುಬರಬಹುದು

ಬಾಯಿ ಉರಿ:

ಬಾಯಲ್ಲಿ ಉರಿ ಬಂದಂತೆ ಅಥವಾ ಬರ್ನಿಂಗ್ ಮೌತ್ ಸಿಂಡ್ರೋಮ್, ಬಾಯಲ್ಲಿ ಜುಮ್ಮೆನಿಸುವಿಕೆ ಮುಂತಾದ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿಮ್ಮ ದೇಹದಲ್ಲಿ ವಿಟಮಿನ್​​ ಡಿ ಕೊರತೆ ಉಂಟಾಗಿದೆ ಎಂಬುದನ್ನು ತಿಳಿಸುತ್ತದೆ.

ಮರಗಟ್ಟುವಿಕೆ:

ನಿಮ್ಮ ದೇಹದಲ್ಲಿ ವಿಟಮಿನ್ ಡಿ ತುಂಬಾ ಕಡಿಮೆಯಾದರೆ ದೇಹವು ರಕ್ತದಲ್ಲಿ ಕಡಿಮೆ ಕ್ಯಾಲ್ಸಿಯಂ ಮಟ್ಟವನ್ನು ಹೊಂದಿರುತ್ತದೆ. ಇದು ನಿಮ್ಮ ನಾಲಿಗೆಯಲ್ಲಿ ಮರಗಟ್ಟುವಿಕೆ ಅಥವಾ ಸಂವೇದನೆಯ ಕೊರತೆಯ ಭಾವನೆಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ವಿಪರೀತ ಸೆಖೆ ಎಂದು ಐಸ್​ ವಾಟರ್ ಕುಡಿಯುವ ಅಭ್ಯಾಸವಿದೆಯೇ? ಎಚ್ಚರ

ಒಣ ಬಾಯಿ:

ಒಣ ಬಾಯಿ ಅಥವಾ ಕ್ಸೆರೊಸ್ಟೊಮಿಯಾವು ನಿರ್ಜಲೀಕರಣ, ಆಲ್ಕೋಹಾಲ್ ಬಳಕೆ, ಧೂಮಪಾನ, ಆತಂಕ, ಕೆಲವು ಔಷಧಿಗಳು ಅಥವಾ ಯಾವುದೇ ಆಧಾರವಾಗಿರುವ ಪರಿಸ್ಥಿತಿಗಳು ಸೇರಿದಂತೆ ವಿಟಮಿನ್ ಕೊರತೆಗಳ ಜೊತೆಗೆ ಹಲವು ಕಾರಣಗಳನ್ನು ಹೊಂದಿದೆ.

ಇತರ ಲಕ್ಷಣಗಳು:

  • ಬಾಯಿಯಲ್ಲಿ ರುಚಿಯ ಬದಲಾವಣೆ
  • ರುಚಿಯ ನಷ್ಟ
  • ನಾಲಿಗೆಯಲ್ಲಿ ಸಣ್ಣ ಗುಳ್ಳೆಗಳು
  • ಶುಷ್ಕತೆ

ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯವನ್ನು ಕಳೆಯುವ ಮೂಲಕ ನಿಮ್ಮ ದೇಹವು ವಿಟಮಿನ್ ಡಿ ಹೆಚ್ಚಿಸಬಹುದು . ವಿಟಮಿನ್ ಡಿ ಕೊರತೆಯಿಂದ ಹೊರಬರಲು ಕನಿಷ್ಠ 10-20 ನಿಮಿಷಗಳ ಕಾಲ ಬೆಳಗಿನ ಬಿಸಿಲಿನ ಶಾಖವನ್ನು ಪಡೆದುಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೇ ವಿಟಮಿನ್ ಡಿ ಹೆಚ್ಚಿಸಲು ನೈಸರ್ಗಿಕ ವಿಟಮಿನ್ ಡಿ ಭರಿತ ಆಹಾರಗಳನ್ನು ಸೇವಿಸಿ. ಸೊಪ್ಪು, ಬೆಂಡೆಕಾಯಿ, ಸೋಯಾಬೀನ್ಸ್, ಸಾಲ್ಮನ್ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:44 am, Thu, 13 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್