ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಇಲ್ಲಿದೆ ಮದ್ದು

| Updated By: ವಿವೇಕ ಬಿರಾದಾರ

Updated on: Aug 16, 2022 | 6:43 PM

ವಿಟಮಿನ್ ಇ ಪೋಷಕಾಂಶದಿಂದ ದೇಹಕ್ಕೆ ಸಾಕಷ್ಟು ಉಪಯೋಗಗಳಿದ್ದು, ವಿಟಮಿನ್ ಇ ಯಿಂದ ದೇಹದಲ್ಲಿನ ಕೊಬ್ಬು ಕರಗುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಇಲ್ಲಿದೆ ಮದ್ದು
ವಿಟಮಿನ್​ ಇ ಪೋಷಕಾಂಶಗಳು
Follow us on

ವಿಟಮಿನ್ ಇ (Vitamin E) ಪೋಷಕಾಂಶದಿಂದ ದೇಹಕ್ಕೆ ಸಾಕಷ್ಟು ಉಪಯೋಗಗಳಿದ್ದು, ವಿಟಮಿನ್ ಇ (Vitamin E)  ಯಿಂದ ದೇಹದಲ್ಲಿನ ಕೊಬ್ಬು ಕರಗುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಮ್ಮ ದೇಹದಲ್ಲಿನ ಜೀವಕೋಶಗಳನ್ನು ರಕ್ಷಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ. ವಿಟಮಿನ್ ಇಯನ್ನು ಸ್ಥಿರವಾಗಿ ಮತ್ತು ನಿಯಮಿತ ಸೇವಿಸುವುದರಿಂದ ವೈರಸ್, ಅನಾರೋಗ್ಯ ಅಥವಾ ಅಶಕ್ತಕತೆ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ದೊರೆಯುತ್ತದೆ. ವಿಟಮಿನ್ ಇ ಚರ್ಮವನ್ನು ಯಥಾಸ್ಥಿತಿ ಕಾಪಾಡುತ್ತದೆ. ಮತ್ತು ಚರ್ಮದ ಮೇಲಿನ ಕಲೆ ಇತ್ಯಾದಿ ಚರ್ಮಕಾಯಿಲೆಗಳನ್ನು ಹೋಗಲಾಡಿಸುತ್ತದೆ. ಹಾಗೇ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ವಿಟಮಿನ್ ಇ ಯುವಿ ಕಿರಣಗಳು ಮತ್ತು ಧೂಳಿನ ಕಣಗಳಂತಹ ಮಾಲಿನ್ಯಕಾರಕಗಳ ವಿರುದ್ಧ ಚರ್ಮವನ್ನು ರಕ್ಷಣೆ ಮಾಡುತ್ತದೆ. ವಿಟಮಿನ್ ಇ ಪೋಷಕಾಂಶ ದೇಹ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ದೇಹದ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಚೆನ್ನಾಗಿಡುತ್ತದೆ.

ಚರ್ಮ
ವಿಟಮಿನ್ ಇಯನ್ನು ಚರ್ಮಕ್ಕೆ ಆಗುವ ಹಾನಿಯನ್ನು ತಡೆಗಟ್ಟಲು ಮತ್ತು ಉರಿಯೂತವನ್ನು ಹೋಗಲಾಡಿಸಲು ಉಪಯೋಗಿಸಲಾಗುತ್ತದೆ. ಇದು ನೈಸರ್ಗಿಕ ಗುಣಪಡಿಸುವ ಗುಣಗಳನ್ನು ಹೊಂದಿರುವುದರಿಂದ, ವಿಟಮಿನ್ ಇ ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ ಉತ್ತಮ ಪ್ರಮಾಣವು ಚರ್ಮ ಕಾಂತಿಯತವಾಗಿರಲು ಸಹಾಯ ಮಾಡುತ್ತದೆ. ವಿಟಮಿನ್ ಇ ನಿಮ್ಮ ಚರ್ಮವನ್ನು ಮೃದು ಮತ್ತು ಕಾಂತಿಯುತವಾಗಿರಿಸುತ್ತದೆ.

ಕೂದಲಿಗೆ
ವಿಟಮಿನ್ ಇ ನೆತ್ತಿಯಲ್ಲಿ ರಕ್ತದ ಹರಿವು ಮತ್ತು ಪರಿಚಲನೆಯನ್ನು ಸುಧಾರಿಸುತ್ತದೆ ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಮತ್ತು ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಾನಿಗೊಳಗಾದ ಕೂದಲು ಕಿರುಚೀಲಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಸಾಭೀತಾಗಿದೆ. ವಿಟಮಿನ್ ಇ ಯುಕ್ತ ತೈಲವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹೊರಪೊರೆಗೆ ಹೆಚ್ಚು ಹೊಳಪು ಬರುತ್ತದೆ ಮತ್ತು ಕೂದಲುಗಳು ಸುವಾಸನೆ ಬೀರುತ್ತದೆ.

ವಿಟಮಿನ್ ಇ ಯ ಸಾಮಾನ್ಯ ಪ್ರಯೋಜನಗಳು
ವಿಟಮಿನ್ ಇ ಕೊರತೆ ಉಂಟಾದರೆ ದೇಹದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ವಿಟಮಿನ್ ಇ ಕೊರತೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ ಇದರಿಂದ ನೀವು ರೋಗಗಳಿಗೆ ಉತ್ತಾಗುತ್ತೀರಿ. ವಿಟಮಿನ್ ಇ ಅನೇಕ ಹೃದಯರಕ್ತನಾಳದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಹಾಗೂ ರಕ್ತಸ್ರಾವ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕ್ಯಾನ್ಸರ್ ಅಂತಹ ರೋಗದ ವಿರುದ್ಧ ಹೋರಾಡಲು ಸಹಾಕವಾಗಿದೆ. ವಿಟಮಿನ್ ಇ ಬಳಕೆಯಿಂದ ಕಣ್ಣಿನ ಪೊರೆ ಗುಣಮಟ್ಟವಾಗಿರುತ್ತವೆ. ಕಣ್ಣಿನ ಪೊರೆ ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ವಿಟಮಿನ್ ಇ ಇಡೀ ದೇಹಕ್ಕೆ ಅಮೂಲಾಗ್ರಹ ಪ್ರಯೋಜನಗಳನ್ನು ನೀಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ರೋಗಗಳ ವಿರುದ್ಧ ಹೋರಾಡಲು ಮತ್ತು ಚರ್ಮ ಮತ್ತು ಕೂದಲನ್ನು ಸಂಸರಕ್ಷಿಸಲು ಸಹಾಯಕವಾಗಿದೆ ಎಂದು ಸಾಬೀತಾಗಿದೆ. ಕಿರಿಯ ಮಕ್ಕಳು ಮತ್ತು ವಯಸ್ಕರಲ್ಲಿ ಇದು ಪ್ರಯೋಜನಕಾರಿಯಾಗಿದೆ.
ವಿಟಮಿನ್ ಇ ಬಳಕೆಯು ಚರ್ಮದ ಗುಣಮಟ್ಟವನ್ನು ವೃದ್ಧಿಸಲು ಹೆಚ್ಚು ಪರಿಣಾಮಕಾರಿಯಾಗಿದೆ. ತ್ವಚೆ ಮತ್ತು ಕೂದಲಿನ ಆರೈಗೆ ಇದಕ್ಕೆ ಸರಿಸಾಟಿಯಾದ ಪೋಷಕಾಂಶ ಬೇರೊಂದಿಲ್ಲ.

ಮತ್ತಷ್ಟು ಆರೋಗ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:38 pm, Tue, 16 August 22