- Kannada News Health Weight Loss Tips in Kannada You Can Add These Winter Foods To Your Diet To Lose Weight
ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಈ ಆಹಾರಗಳು ನಿಮ್ಮ ಡಯೆಟ್ನಲ್ಲಿರಲಿ
Weight Loss Tips: ನಮ್ಮ ತೂಕದ ಮೇಲೆ ಹೆಚ್ಚು ಪ್ರಭಾವ ಬೀರುವ ಅಂಶವೆಂದರೆ ನಮ್ಮ ಆಹಾರ. ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನುತ್ತಿರಬೇಕು ಎಂಬ ಆಸೆಯಾಗುವುದು ಸಹಜ. ಆದರೆ, ಆ ಆಸೆಯನ್ನು ನಿಯಂತ್ರಿಸದಿದ್ದರೆ ತೂಕ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.
Updated on: Oct 17, 2023 | 4:28 PM

ಇತ್ತೀಚೆಗೆ ಸ್ಥೂಲಕಾಯ ದೊಡ್ಡ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ತೂಕ ಇಳಿಸಿಕೊಂಡು, ಆರೋಗ್ಯವಂತರಾಗಲು ಜನರು ಹೆಣಗಾಡುತ್ತಾರೆ.

ನಮ್ಮ ತೂಕದ ಮೇಲೆ ಹೆಚ್ಚು ಪ್ರಭಾವ ಬೀರುವ ಅಂಶವೆಂದರೆ ನಮ್ಮ ಆಹಾರ. ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನುತ್ತಿರಬೇಕು ಎಂಬ ಆಸೆಯಾಗುವುದು ಸಹಜ. ಆದರೆ, ಆ ಆಸೆಯನ್ನು ನಿಯಂತ್ರಿಸದಿದ್ದರೆ ತೂಕ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.

ಚಳಿಗಾಲದಲ್ಲಿ ನಮಗೆ ಪ್ರಯೋಜನಕಾರಿ ಆಹಾರಗಳನ್ನು ಸೇವಿಸಲು ಮರೆಯಬಾರದು. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಈ ಕೆಲವು ಆಹಾರಗಳನ್ನು ಸೇರಿಸಿಕೊಳ್ಳಿ.

ಪಿಯರ್ಸ್ ಹಣ್ಣುಗಳಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ. ಚಳಿಗಾಲದಲ್ಲಿ ಅತ್ಯುತ್ತಮವಾದ ರುಚಿಯನ್ನು ಹೊಂದಿರುವ ಪಿಯರ್ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಇದು ಚಳಿಗಾಲದಲ್ಲಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ. ನೀವು ವಿಟಮಿನ್ ಸಿಯಿಂದ ಶಕ್ತಿಯನ್ನು ಪಡೆಯಬಹುದು. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಚಳಿಗಾಲದಲ್ಲಿ ನಿಂಬೆಹಣ್ಣುಗಳು, ಕಿತ್ತಳೆ, ಟ್ಯಾಂಗರಿನ್, ಕಿವಿ ಹಣ್ಣು ಮುಂತಾದ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಿ.

ಗೆಣಸು ಜನಪ್ರಿಯ ಚಳಿಗಾಲದ ಆಹಾರವಾಗಿದೆ. ಈ ಬೆಚ್ಚಗಿನ ಮತ್ತು ರುಚಿಕರವಾದ ತರಕಾರಿಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು. ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಗೆಣಸನ್ನು ತಿನ್ನಿ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.

ಸೂಪ್‌ಗಳು ತೂಕ ಇಳಿಸಿಕೊಳ್ಳಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಸೂಪ್‌ಗಳು ಬೆಚ್ಚಗಿರುತ್ತದೆ ಮತ್ತು ಚಳಿಯ ವಾತಾವರಣಕ್ಕೆ ಪರ್ಫೆಕ್ಟ್ ಆಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದ ಮೊದಲು ಸೂಪ್ ಸೇವಿಸಿದರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.


ಮೂಲಂಗಿ ಫೈಬರ್ ಮತ್ತು ನೀರಿನಿಂದ ತುಂಬಿರುತ್ತದೆ. ಇದು ಬೇಗ ನಿಮ್ಮ ಹೊಟ್ಟೆಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಅನಾರೋಗ್ಯಕರ ಆಹಾರದ ಬಯಕೆಯನ್ನು ಕಡಿಮೆ ಮಾಡುತ್ತದೆ.

ಸೂರ್ಯಕಾಂತಿ ಬೀಜಗಳಲ್ಲಿ ಫೋಲೇಟ್, ಪ್ರೋಟೀನ್‌ಗಳು ಮತ್ತು ವಿಟಮಿನ್ ಬಿ ಸಮೃದ್ಧವಾಗಿವೆ. ಇದು ನಿಮ್ಮ ದೇಹಕ್ಕೆ ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ವಿಟಮಿನ್ ಇ ಅನ್ನು ಒದಗಿಸುತ್ತದೆ. ಸೂರ್ಯಕಾಂತಿ ಬೀಜಗಳು ತೂಕ ಇಳಿಸಲು ಅದ್ಭುತವಾದ ಚಳಿಗಾಲದ ಆಹಾರವಾಗಿದೆ. ಇದು ವಿಟಮಿನ್ ಇ ಅನ್ನು ಒಳಗೊಂಡಿರುತ್ತವೆ. ಆಹಾರದ ಕಡುಬಯಕೆಗಳನ್ನು ತಪ್ಪಿಸಲು, ಸೂರ್ಯಕಾಂತಿ ಬೀಜಗಳನ್ನು ದಿನಕ್ಕೆ ಒಂದರಿಂದ ಎರಡು ಬಾರಿ ಸೇವಿಸಿ.



















