AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Trauma Day 2023: ವಿಶ್ವ ಆಘಾತ ದಿನದ ಇತಿಹಾಸ, ಮಹತ್ವ, ತಡೆಗಟ್ಟುವ ಕ್ರಮಗಳೇನು?

ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಅಪಘಾತಗಳು, ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುವ ಗಾಯಗಳ ಪ್ರಮಾಣವನ್ನು ತಡೆಗಟ್ಟುವ ದೃಷ್ಟಿಯಿಂದ ವಿಶ್ವ ಆಘಾತ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಭಾರತದ ನವದೆಹಲಿಯಲ್ಲಿ ಈ ದಿನವನ್ನು ಆರಂಭಿಸಲಾಯಿತು.

World Trauma Day 2023: ವಿಶ್ವ ಆಘಾತ ದಿನದ ಇತಿಹಾಸ, ಮಹತ್ವ, ತಡೆಗಟ್ಟುವ ಕ್ರಮಗಳೇನು?
ವಿಶ್ವ ಆಘಾತ ದಿನImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 17, 2023 | 1:10 PM

ಕ್ರೀಡೆ ಮತ್ತು ಅಥ್ಲೆಟಿಸಮ್ ಕ್ಷೇತ್ರದಲ್ಲಿ ಗಾಯಗಳು ಆಗುವುದು ಸಾಮಾನ್ಯ. ಈ ರೀತಿ ಗಾಯಗಳಾದಾಗ ಕ್ರೀಡಾಪಟುಗಳು ತಮ್ಮ ವೃತ್ತಿಬದುಕಿನ ಸಂಕಷ್ಟದ ಸಮಯವನ್ನು ಎದುರಿಸಬೇಕಾಗುತ್ತದೆ. ಗಾಯ ಉಂಟಾದಾಗ ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಚೇತರಿಸಿಕೊಳ್ಳುವುದು ಬಹಳ ಮುಖ್ಯ. ದೇಹವನ್ನು ಗುಣಪಡಿಸಲು ಸಾಕಷ್ಟು ಸಮಯ ನೀಡುವುದು ಅಗತ್ಯ. ಇಂದು ವಿಶ್ವ ಆಘಾತ ದಿನ (World Trauma Day). ಪ್ರತಿ ವರ್ಷ ಅಕ್ಟೋಬರ್ 17ರಂದು ವಿಶ್ವ ಆಘಾತ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಅಪಘಾತಗಳು, ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುವ ಗಾಯಗಳ ಪ್ರಮಾಣವನ್ನು ತಡೆಗಟ್ಟುವ ದೃಷ್ಟಿಯಿಂದ ವಿಶ್ವ ಆಘಾತ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಭಾರತದ ನವದೆಹಲಿಯಲ್ಲಿ ಈ ದಿನವನ್ನು ಆರಂಭಿಸಲಾಯಿತು. ಪ್ರತಿ ದಿನ 400ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ. ರಸ್ತೆ ಸಂಚಾರ ಅಪಘಾತ (RTA) ಪ್ರಪಂಚದಾದ್ಯಂತ ಉಂಟಾಗುತ್ತಿರುವ ಆಘಾತಕ್ಕೆ ಪ್ರಮುಖ ಕಾರಣವಾಗಿದೆ.

ವಿಶ್ವ ಆಘಾತ ದಿನದಂದು, ಹಿಂಸೆ ಮತ್ತು ಆಘಾತ ಅಥವಾ ಅಪಘಾತಗಳಿಂದ ಸಾವನ್ನಪ್ಪಿದ ಅಥವಾ ಗಾಯಗೊಂಡವರನ್ನು ಸ್ಮರಿಸಲಾಗುತ್ತದೆ. ಗಾಯಗಳು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ದಿನವನ್ನು ಆರಂಭಿಸಲಾಯಿತು.

ರಸ್ತೆ ಅಪಘಾತಗಳು ಪ್ರಪಂಚದ ಅತ್ಯಂತ ಸಾಮಾನ್ಯವಾದ ಆಘಾತಗಳಲ್ಲಿ ಒಂದಾಗಿದೆ. ಇದರ ಜೊತೆಗೆ, ಪ್ರಾಥಮಿಕ ಮಿಲಿಟರಿ ಕಾರ್ಯಾಚರಣೆಗಳು, ಲೈಂಗಿಕ ಆಕ್ರಮಣಗಳಿಂದ ಉಂಟಾಗುವ ಅನುಭವಗಳು ಕೂಡ ಸ್ಥಾನ ಪಡೆದಿವೆ. ಆಘಾತಕಾರಿ ಗಾಯದ ನಂತರ ನಮ್ಮ ದೇಹಕ್ಕೆ ಯಾವ ರೀತಿಯ ವ್ಯಾಯಾಮವನ್ನು ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿದ 5 ಜ್ಯೂಸ್​ಗಳು ಇಲ್ಲಿವೆ

ಅಮೆರಿಕನ್ ಸೈಕಾಲಾಜಿಕಲ್ ಅಸೋಸಿಯೇಷನ್ (APA) ಪ್ರಕಾರ, ಒಬ್ಬ ವ್ಯಕ್ತಿಯು ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಬೆದರಿಕೆ ಅಥವಾ ಹಾನಿಕಾರಕವಾದ ಯಾವುದೇ ಘಟನೆಗೆ ಪ್ರತಿಕ್ರಿಯೆಯಾಗಿ ಆಘಾತವನ್ನು ಅನುಭವಿಸಬಹುದು. ಆಘಾತಕ್ಕೊಳಗಾದ ವ್ಯಕ್ತಿಯು ಆ ಘಟನೆಯ ನಂತರ ಮತ್ತು ದೀರ್ಘಾವಧಿಯಲ್ಲಿ ಭಾವನೆಗಳ ಏರಿಳಿತವನ್ನು ಅನುಭವಿಸಬಹುದು. ಆಘಾತವು ವ್ಯಕ್ತಿಯ ಯೋಗಕ್ಷೇಮದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರಬಹುದು.

ವ್ಯಾಯಾಮದ ಸಮಯದಲ್ಲಿ ಯಾವುದೇ ನೋವಿಗೆ ಗಮನ ಕೊಡುವುದು ಮತ್ತು ಫಿಸಿಯೋಥೆರಪಿಸ್ಟ್ ಅಥವಾ ವೈದ್ಯರಿಗೆ ನಿಮ್ಮ ಸಮಸ್ಯೆಯನ್ನು ಕೂಡಲೇ ತಿಳಿಸುವುದು ಬಹಳ ಮುಖ್ಯ. ಗಾಯದ ನಂತರದ ಕ್ರೀಡೆಗಳಿಗೆ ಹಿಂತಿರುಗುವುದರಿಂದ ನಿಮ್ಮ ಶಕ್ತಿ ವಾಪಾಸ್ ಬರುವುದು ಮಾತ್ರವಲ್ಲದೆ ಚುರುಕುತನ ಮತ್ತು ಒಟ್ಟಾರೆ ಸ್ನಾಯುಗಳ ಕಂಡೀಷನಿಂಗ್ ಹೆಚ್ಚಾಗುತ್ತದೆ.

ಇದನ್ನೂ ಓದಿ: Mulberry Benefits: ಹಿಪ್ಪುನೇರಳೆ ಸೇವನೆಯಿಂದ ಏನು ಪ್ರಯೋಜನ? ಈ ಹಣ್ಣಿನ ಬಗ್ಗೆ ನಿಮಗೆ ಗೊತ್ತಾ?

ಆಘಾತ ಅಥವಾ ಅಪಘಾತಕ್ಕೊಳಗಾದವರು ಸಾಕಷ್ಟು ವಿಶ್ರಾಂತಿ, ಸರಿಯಾದ ನಿದ್ರೆ, ಸಾಕಷ್ಟು ನೀರು ಕುಡಿಯವುದು ಮತ್ತು ಸಮತೋಲಿತ ಆಹಾರದ ಮೇಲೆ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯ. ಇದು ದೇಹವನ್ನು ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ವ್ಯಾಯಾಮ ಮಾಡಲು ವೃತ್ತಿಪರರ ಮಾರ್ಗದರ್ಶನವನ್ನು ಪಡೆಯಿರಿ, ವ್ಯಾಯಾಮದ ತೀವ್ರತೆಯನ್ನು ಕ್ರಮೇಣ ಹೆಚ್ಚಿಸಿ, ನಿಮ್ಮ ದೇಹಕ್ಕೆ ಏನು ಬೇಕೆಂಬುದನ್ನು ಗಮನಿಸಿ, ನಂತರ ನಿಧಾನವಾಗಿ ಚೇತರಿಸಿಕೊಳ್ಳಿ.

ಆಘಾತದ ಲಕ್ಷಣಗಳು ಸೌಮ್ಯದಿಂದ ತೀವ್ರವಾಗಿರುತ್ತವೆ. ಆಘಾತಕಾರಿ ಘಟನೆಯು ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಕೋಪ, ಭಯ, ದುಃಖ, ಅವಮಾನ, ಗೊಂದಲ, ಆತಂಕ, ಖಿನ್ನತೆ, ಅಪರಾಧ, ಹತಾಶೆ, ಸಿಡುಕುತನ, ಏಕಾಗ್ರತೆಯ ಸಮಸ್ಯೆ ಇವು ಮುಖ್ಯವಾದ ಲಕ್ಷಣಗಳಾಗಿವೆ. ಇದಿಷ್ಟೇ ಅಲ್ಲದೆ, ತಲೆನೋವು, ಜೀರ್ಣಕಾರಿ ಸಮಸ್ಯೆ, ಆಯಾಸ, ಹೃದಯ ಬಡಿತ ಹೆಚ್ಚಾಗುವುದು, ಬೆವರುವುವಿಕೆಯಂತಹ ದೈಹಿಕ ಸಮಸ್ಯೆಗಳು ಕೂಡ ಉಂಟಾಗುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ