H3N2 Virus: ಇದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳು ಯಾವುವು? ಇಲ್ಲಿವೆ ಸಲಹೆಗಳು
ಕೋವಿಡ್-19 ನಂತೆಯೇ, ಎಚ್3ಎನ್2 (H3N2) ಸೋಂಕಿಗೆ ಒಳಗಾದ ರೋಗಿಗಳು ಅದರಿಂದ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವು ಯಾವುದು?ಮುಂದೆ ಹೆಚ್ಚಿನ ಚೇತರಿಕೆಗೆ ವೇಗಕ್ಕೆ ಏನು ಮಾಡಬಹುದು ಎಂಬುದಕ್ಕೆ ಕೆಲವು ಸಲಹೆ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಎಚ್3ಎನ್2 ವೈರಸ್ (H3N2 Virus) ಹರಡುವಿಕೆಯು ಹೆಚ್ಚಾಗಿದ್ದು ದೀರ್ಘಕಾಲದ ವರೆಗೆ ಇರುವ ರೋಗಲಕ್ಷಣಗಳಿಂದಾಗಿ ಜನರು ಕೋವಿಡ್ ಇರಬಹುದಾ ಎಂದು ಗೊಂದಲಕ್ಕೊಳಗಾಗಿದ್ದಾರೆ. ಎಚ್3ಎನ್2 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರೊಂದಿಗೆ, COVID-19 ಪ್ರಕರಣಗಳು ಸಹ ಹೆಚ್ಚುತ್ತಿವೆ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳು ಸಮಾನವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ಈ ಬಾರಿಯ ಹವಾಮಾನ ಬದಲಾವಣೆಯಿಂದಾಗಿ ಒಂದು ದಿನ ಚಳಿ, ಒಂದು ದಿನ ಬಿಸಿಲು. ಈ ಬದಲಾವಣೆಯಿಂದಾಗಿ ಜ್ವರ, ಸೋಂಕಿನ ಪ್ರಕರಣಗ ಳು ಆರಂಭವಾಗಿದೆ. ಈ ಜ್ವರ ಮೂಲತಃ ಇನ್ಫ್ಲುಯೆನ್ಸ ವೈರಸ್‌ನಿಂದ ಉಂಟಾಗುವ ಉಸಿರಾಟದ ಕಾಯಿಲೆಯಾಗಿದೆ. ಸಾಮಾನ್ಯವಾಗಿ, ಟೈಪ್ ಎ ಮತ್ತು ಬಿ ಕಾಲೋಚಿತ ಸಾಂಕ್ರಾಮಿಕ ರೋಗ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಕೆಲವು ರೋಗಿಗಳು H3N2 ವೈರಸ್ ಸೋಂಕಿಗೆ ಒಳಗಾಗಿ ಆ ಬಳಿಕ ಕಾಣಸಿಗುವ ಪರಿಣಾಮಗಳನ್ನು ವರದಿ ಮಾಡಲು ಪ್ರಾರಂಭಿಸಿದ್ದಾರೆ.
ಸಾಮಾನ್ಯವಾಗಿ ಎಚ್3ಎನ್2 ವೈರಸ್‌ನಗೆ ಇಂತಿಷ್ಟೇ ಅವಧಿ ಎಂದು ಇಲ್ಲ. ಆದರೆ ವೈದ್ಯರ ಪ್ರಕಾರ, ಇದು ಹೆಚ್ಚಾಗಿ 5 ರಿಂದ 15 ದಿನಗಳವರೆಗೆ ಇರುತ್ತದೆ. ಹಾಗಾಗಿ ವೈರಸ್‌ನ ಪರಿಣಾಮವು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹದಲ್ಲಿ ಯಾವ ಪ್ರಮಾಣದಲ್ಲಿ ರಕ್ಷಣಾ ಸಾಮರ್ಥ್ಯವಿದೇ ಎನ್ನುವುದು ಮುಖ್ಯವಾಗಿರುತ್ತದೆ. ಜ್ವರವು ಮೂರು ದಿನಗಳ ನಂತರ ಹೋಗಬಹುದು. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ ಎಂದು IMAಯ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಥಾಯಿ ಸಮಿತಿ ಹೇಳಿದೆ.
ಇದನ್ನೂ ಓದಿ:H3N2 Virus: ಮಹಾರಾಷ್ಟ್ರದಲ್ಲಿ H3N2 ವೈರಸ್‌ನಿಂದ ವೃದ್ಧ ಸಾವು
ಆದಾಗ್ಯೂ, ಕೆಲವು ರೋಗಿಗಳು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಅವುಗಳಲ್ಲಿ ಮುಖ್ಯವಾಗಿ ಉಸಿರಾಟದ ಸಮಸ್ಯೆ ಹೆಚ್ಚಾಗಿವೆ. ಅದರ ಹೊರತಾಗಿ ಇನ್ನು ಕೆಲವು ಸಮಸ್ಯೆ ಕಂಡುಬಂದಿದೆ. ಅವು ಯಾವುದೆಂದರೆ,
-ಉಸಿರಾಟದ ತೊಂದರೆ
-ಕೀಲು ನೋವು
-ಅತಿಯಾದ ಕೆಮ್ಮು
-ಆಯಾಸ
-ಮಲಗಲು ತೊಂದರೆಯಾಗುವುದು
-ಆಸ್ತಮಾ ಮತ್ತು ಬ್ರಾಂಕೈಟಿಸ್ ಇರುವ ಜನರು ಅಲರ್ಜಿನ್‌ಗಳಿಂದ ಹೆಚ್ಚು ಬಳಲುತ್ತಿದ್ದಾರೆ.
H3N2 ವೈರಸ್: ರೋಗಲಕ್ಷಣಗಳು
-ಚಳಿ
-ಕೆಮ್ಮುವುದು
-ಜ್ವರ
-ವಾಕರಿಕೆ
-ವಾಂತಿ
-ಗಂಟಲು ನೋವು
-ಸ್ನಾಯುಗಳು ಮತ್ತು ದೇಹದಲ್ಲಿ ನೋವು
-ಅತಿಸಾರ
-ಸೀನುವಿಕೆ
ಭಾರತದಲ್ಲಿ H3N2 ವೈರಸ್ನ ಚೇತರಿಕೆಗೆ ಸಲಹೆಗಳು:
-ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ ಏಕೆಂದರೆ ಇದು ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
– ಹೈಡ್ರೇಟೆಡ್ ಆಗಿರಿ.
-ಆರೋಗ್ಯಕರ ಆಹಾರವನ್ನು ಸೇವಿಸಿ – ಜೀವಸತ್ವಗಳು ಮತ್ತು ಖನಿಜಗಳು, ಪ್ರೋಟೀನ್ಗಳು ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಿ.
-ಸಂಸ್ಕರಿಸಿದ ಮತ್ತು ಸಕ್ಕರೆಯ ಉತ್ಪನ್ನಗಳನ್ನು ಆದಷ್ಟು ತಪ್ಪಿಸಿ ಏಕೆಂದರೆ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚು ದುರ್ಬಲಗೊಳಿಸುತ್ತದೆ.
-ಆಯಾಸವು ರೋಗಲಕ್ಷಣಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದಾದ್ದರಿಂದ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ.
-ಆಗಾಗ ಕೈಗಳನ್ನು ತೊಳೆಯುತ್ತಲೇ ಇರಿ. ಆದಷ್ಟು ಶುಚಿತ್ವ ಕಾಪಾಡಿಕೊಳ್ಳಿ. ಆರೋಗ್ಯವಾಗಿರಿ, ಸುರಕ್ಷಿತವಾಗಿರಿ!
Published On - 11:02 am, Tue, 11 April 23