Kannada News Health These are the side effects of using mehendi on your hair Kannada News
ಕೂದಲಿಗೆ ಮೆಹಂದಿ ಹಚ್ಚುತ್ತಿದ್ರೆ ಇಂದೇ ನಿಲ್ಲಿಸಿ ಬಿಡಿ, ಈ ರೋಗ ಬರುವುದು ಖಂಡಿತ
ಹೆಣ್ಣು ಮಕ್ಕಳು ಕೂದಲಿನ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಹೀಗಾಗಿ ಬಿಳಿ ಕೂದಲನ್ನು ಮರೆಮಾಡುವ ಸಲುವಾಗಿ ಹೆನ್ನಾ ಅಥವಾ ಮೆಹಂದಿ ಹಚ್ಚುತ್ತಾರೆ. ಆದರೆ ಕೂದಲಿಗೆ ಮೆಹಂದಿ ಹಚ್ಚುವುದು ದೇಹಕ್ಕೆ ಎಷ್ಟು ತಂಪೋ ಅತಿಯಾದರೆ ನಾನಾ ರೀತಿಯ ಅಡ್ಡಪರಿಣಾಮಗಳನ್ನು ಎದುರಿಸಬೇಕಾದೀತು. ಹಾಗಾದ್ರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಹೆಚ್ಚಿನವರು ಬಿಳಿ ಕೂದಲನ್ನು ಮರೆಮಾಚಲು ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇನ್ನು ಕೆಲವರು ಈ ಉತ್ಪನ್ನಗಳ ಸಹವಾಸವೇ ಬೇಡ ಎಂದು ಗೋರಂಟಿ ಅಥವಾ ಮೆಹಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅತಿಯಾದರೆ ಅಮೃತ ಕೂಡ ವಿಷ ಎನ್ನುವ ಮಾತಿನಂತೆ ಇದನ್ನು ಪ್ರತಿ ವಾರವು ತಲೆಗೆ ಹಚ್ಚಿಕೊಂಡರೆ ಅಡ್ಡಪರಿಣಾಮಗಳೇ ಹೆಚ್ಚಂತೆ. ಹೀಗಾಗಿ ಮೆಹಂದಿಯನ್ನು ಕೂದಲಿಗೆ ಹಚ್ಚುವ ಮೊದಲು ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕೆಲವು ತಿಂಗಳವರೆಗೆ ಕಪ್ಪಾಗಿರಬಹುದು. ಆದರೆ ದಿನ ಕಳೆದಂತೆ ಬಣ್ಣ ಮಾಸಿ ಕೂದಲು ಕಂದು ಬಣ್ಣಕ್ಕೆ ತಿರುಗುವ ಮೂಲಕ ಕೂದಲಿನ ಸೌಂದರ್ಯವೇ ಹಾಳಾಗುತ್ತದೆ.
ಅತಿಯಾಗಿ ಮೆಹಂದಿ ಬಳಸಿದರೆ ಕೂದಲು ಶುಷ್ಕವಾಗುವುದೇ ಹೆಚ್ಚು. ಇದು ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆ ಅಂಶವನ್ನು ತೆಗೆದುಹಾಕುತ್ತದೆ. ಹೀಗಾಗಿ ಶುಷ್ಕ ಕೂದಲನ್ನು ಹೊಂದಿರುವ ಜನರು ತಲೆಗೆ ಮೆಹಂದಿ ಹಚ್ಚುವುದನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
ತಲೆಗೆ ಮೆಹಂದಿ ಹಚ್ಚಿ ಸ್ವಚ್ಛಗೊಳಿಸಿದ ಬಳಿಕವು ಇದರ ಕಣಗಳು ಉಳಿಯಬಹುದು. ಇದು ಕೂದಲಿನ ಬೇರುಗಳ ಮೇಲೆ ಪರಿಣಾಮ ಬಿರುತ್ತದೆ. ಕೂದಲ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಅತಿಯಾದ ಮೆಹಂದಿಯನ್ನು ಹಚ್ಚಿದರೆ ತಲೆ ತುರಿಕೆ, ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆ ಸೇರಿದಂತೆ ಅಲರ್ಜಿ ಸಮಸ್ಯೆಗಳು ಉಂಟಾಗುತ್ತದೆ.
ಮೆಹಂದಿ ಶುಷ್ಕವಾಗಿರುವ ಕಾರಣ ಇದನ್ನೊಮ್ಮೆ ತಲೆಕೂದಲಿಗೆ ಹಚ್ಚಿ ತೊಳೆದ ಬಳಿಕ ಕೂದಲು ಸಿಕ್ಕಾಗಬಹುದು. ಸಿಕ್ಕಾದ ಈ ಕೂದಲನ್ನು ಬಾಚುವುದರಿಂದ ಕೂದಲು ಉದುರುವುದೇ ಹೆಚ್ಚು.
ಅತಿಯಾಗಿ ಕೂದಲಿಗೆ ಮೆಹಂದಿ ಹಚ್ಚುತ್ತ ಬಂದರೆ ತಲೆ ಹೊಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ವಿಪರೀತ ತುರಿಕೆಯೂ ಉಂಟಾಗಿ ಕಿರಿಕಿರಿ ಅನುಭವದೊಂದಿಗೆ ಕೂದಲಿನ ಬೆಳವಣಿಗೆಯೂ ಸರಿಯಾಗಿ ಆಗುವುದಿಲ್ಲ.