AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holiday Heart Syndrome: ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂದರೇನು, ನೀವು ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ

ಹಾಲಿಡೇ ಹಾರ್ಟ್​ ಸಿಂಡ್ರೋಮ್(Holiday Heart Syndrome)  ಎಂಬುದು ರಜಾದಿನಗಳಲ್ಲಿ ನಾವು ಆರಾಮವಾಗಿರುವ ಸಂದರ್ಭದಲ್ಲಿ ಕಾಡುವ ಒಂದು ಹೃದ್ರೋಗ, ಈ ಸಮಸ್ಯೆಯು ನಿಮಗೆ ಅಪಾಯಕಾರಿ ಎಂದು ಸಾಬೀತಾಗಿದೆ.

Holiday Heart Syndrome:  ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂದರೇನು, ನೀವು ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ
Holiday Heart SyndromeImage Credit source: ABP Live
TV9 Web
| Updated By: ನಯನಾ ರಾಜೀವ್|

Updated on: Dec 11, 2022 | 12:55 PM

Share

ಹಾಲಿಡೇ ಹಾರ್ಟ್​ ಸಿಂಡ್ರೋಮ್(Holiday Heart Syndrome)  ಎಂಬುದು ರಜಾದಿನಗಳಲ್ಲಿ ನಾವು ಆರಾಮವಾಗಿರುವ ಸಂದರ್ಭದಲ್ಲಿ ಕಾಡುವ ಒಂದು ಹೃದ್ರೋಗ, ಈ ಸಮಸ್ಯೆಯು ನಿಮಗೆ ಅಪಾಯಕಾರಿ ಎಂದು ಸಾಬೀತಾಗಿದೆ. ರಜಾದಿನಗಳಲ್ಲಿ ಮಾತ್ರ ಏಕೆ ಎಂದು ನೀವು ಯೋಚಿಸುತ್ತಿದ್ದರೆ, ನಿಜವಾಗಿಯೂ ನಾವು ರಜಾದಿನಗಳಲ್ಲಿದ್ದಾಗ,  ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಮರೆತುಬಿಡುತ್ತೇವೆ. ಮನಸ್ಸಿಗೆ ಬಂದಿದ್ದನ್ನು ತಿನ್ನುತ್ತಾ ಕಾಲ ಕಳೆಯುತ್ತೇವೆ.

ಆರೋಗ್ಯಕರ ಆಹಾರವನ್ನು ತಿನ್ನುವುದು, ವ್ಯಾಯಾಮ ಮಾಡುವುದು ಇತ್ಯಾದಿ, ಇದ್ಯಾವುದೂ ಇಲ್ಲದೆ ನಿಮ್ಮ ದಿನಚರಿ ಕೊನೆಗೊಳ್ಳುತ್ತದೆ. ಮತ್ತು ಈ ಕಾರಣಗಳಿಂದ ಹೃದಯವು ಅನಾರೋಗ್ಯಕ್ಕೆ ಒಳಗಾಗುತ್ತದೆ. ಈ ಸಮಸ್ಯೆಯನ್ನು ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ರಜಾ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು, ರಜೆಯನ್ನು ಆನಂದಿಸಲು ಜನರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ. ಈ ಸಮಯದಲ್ಲಿ, ಅವರು ಅತಿಯಾದ ವಿಶ್ರಾಂತಿಯನ್ನೂ ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಈ ಸಿಂಡ್ರೋಮ್ ಸಂಭವಿಸುತ್ತದೆ.

ಇದು ಯಾರಿಗಾದರೂ ಸಂಭವಿಸಬಹುದು, ಆದರೆ ಈಗಾಗಲೇ ಹೃದ್ರೋಗ ಹೊಂದಿರುವ ಜನರು ಈ ಸಮಸ್ಯೆಯನ್ನು ಅನುಭವಿಸುವ ಅಪಾಯ ಹೆಚ್ಚಿರುತ್ತದೆ. ಇದಲ್ಲದೇ ಮದ್ಯ ಸೇವಿಸುವವರಿಗೂ ಈ ಸಮಸ್ಯೆ ಎದುರಾಗುತ್ತದೆ. ಸರಳವಾಗಿ ಹೇಳುವುದಾದರೆ, ಆಲ್ಕೋಹಾಲ್, ಫಾಸ್ಟ್ ಫುಡ್, ಜಂಕ್ ಫುಡ್‌ನಿಂದ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.

ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂಬ ಪದವು 1978 ರಲ್ಲಿ ವೈದ್ಯಕೀಯ ಸಾಹಿತ್ಯದಲ್ಲಿ ಮೊದಲು ಕಾಣಿಸಿಕೊಂಡಿದೆ. ಹಾಲಿಡೇ ಹಾರ್ಡ್ ಸಿಂಡ್ರೋಮ್‌ನ ಲಕ್ಷಣಗಳ ಬಗ್ಗೆ ತಿಳಿಯೋಣ

ಹಾಲಿಡೇ ಹಾರ್ಡ್ ಸಿಂಡ್ರೋಮ್​ನ ಲಕ್ಷಣಗಳು ಹೃದಯ ಬಡಿತ ಹೆಚ್ಚಳ ಶಕ್ತಿಯ ಕೊರತೆ ತುಂಬಾ ದಣಿದ ಭಾವನೆ ತಲೆತಿರುಗುವಿಕೆ, ಮೂರ್ಛೆ ಹೋಗುವುದು ಎದೆ ನೋವು, ಒತ್ತಡ ಸಣ್ಣ ಪುಟ್ಟ ಕೆಲಸ ಮಾಡಿದರೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು

ಹಾಲಿಡೇ ಸಿಂಡ್ರೋಮ್ ತಪ್ಪಿಸುವುದು ಹೇಗೆ? ಹಾಲಿ ಡೇ ಹಾರ್ಟ್ ಸಿಂಡ್ರೋಮ್ ಅನ್ನು ತಪ್ಪಿಸುವುದು ತುಂಬಾ ಸುಲಭ. ಇದಕ್ಕಾಗಿ, ನೀವು ರಜಾದಿನಗಳಿಗೆ ಹೋಗುವ ಮೊದಲು ನೀವು ಯೋಜಿಸಬೇಕು, ನೀವು ಪಾರ್ಟಿಗೆ ಹೋಗುತ್ತಿದ್ದರೆ, ನೀವು ಯಾವುದನ್ನಾದರೂ ಬಹಳ ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ. ನೀವು ಎಚ್ಚರಿಕೆಯಿಂದ ತಿನ್ನಬೇಕು ವ್ಯಾಯಾಮ ಮತ್ತು ಸಕ್ರಿಯ ದಿನಚರಿಯನ್ನು ನಿರ್ವಹಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ