ಕೋವಿಡ್ ಲಸಿಕೆ ಹಾಕದ ವ್ಯಕ್ತಿಯೇ ನನ್ನ ಮಗುವಿಗೆ ರಕ್ತ ಕೊಡ್ಬೇಕು, ಇಲ್ಲವಾದ್ರೆ ಹಾರ್ಟ್ ಆಪರೇಷನ್ ಬೇಡ ಎಂದು ಪಟ್ಟು ಹಿಡಿದ ಪೋಷಕರು
ಕೋವಿಡ್ ಲಸಿಕೆ(Covid Vaccine) ಹಾಕದ ವ್ಯಕ್ತಿಯೇ ರಕ್ತದಾನ ಮಾಡಬೇಕು, ಇಲ್ಲವಾದರೆ ನನ್ನ ಮಗನ ಹೃದಯ ಶಸ್ತ್ರ ಚಿಕಿತ್ಸೆ( Heart Operation)ಯೇ ಬೇಡ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿರುವ ಘಟನೆ ನ್ಯೂಜಿಲೆಂಡ್ನಲ್ಲಿ ನಡೆದಿದೆ.
ಕೋವಿಡ್ ಲಸಿಕೆ(Covid Vaccine) ಹಾಕದ ವ್ಯಕ್ತಿಯೇ ರಕ್ತದಾನ ಮಾಡಬೇಕು, ಇಲ್ಲವಾದರೆ ನನ್ನ ಮಗನ ಹೃದಯ ಶಸ್ತ್ರ ಚಿಕಿತ್ಸೆ( Heart Operation)ಯೇ ಬೇಡ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿರುವ ಘಟನೆ ನ್ಯೂಜಿಲೆಂಡ್ನಲ್ಲಿ ನಡೆದಿದೆ. ಇದೀಗ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕೋವಿಡ್ 19 ವಿರುದ್ಧ ಲಸಿಕೆ ಪಡೆದ ವ್ಯಕ್ತಿಯ ರಕ್ತವನ್ನು ಬಳಸಿಕೊಂಡು ಹೃದಯ ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯರ ನಿಲುವಿಗೆ ಪೋಷಕರು ಅಡ್ಡಗಾಲು ಹಾಕಿದ್ದಾರೆ.
6 ತಿಂಗಳ ಮಗುವಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು, ಈ ಸಂದರ್ಭದಲ್ಲಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸುವ ಅಗತ್ಯವಿತ್ತು ಆದರೆ ಪೋಷಕರು ಕೋವಿಡ್ ಲಸಿಕೆ ಹಾಕಿದ ವ್ಯಕ್ತಿಯ ರಕ್ತವನ್ನು ಮಗುವಿಗೆ ನೀಡಬೇಡಿ ಎಂದು ಹಠ ಹಿಡದಿದ್ದರು.
ಇದೀಗ ಕೋರ್ಟ್ ತೀರ್ಪು ನೀಡಿದ್ದು, ಮಗುವಿನ ಶಸ್ತ್ರ ಚಿಕಿತ್ಸೆಯ ಆರಂಭದಿಂದ ಅದು ಚೇತರಿಸಿಕೊಳ್ಳುವವರೆಗೂ ನ್ಯಾಯಾಲಯದ ಪಾಲನೆಯಲ್ಲಿರುತ್ತದೆ ಎಂದು ಹೇಳಿದೆ.
ಈ ಪ್ರಕರಣಕ್ಕಾಗಿಯೇ ನ್ಯಾಯಾಲಯವು ಇಬ್ಬರು ವೈದ್ಯರನ್ನು ನೇಮಿಸಿದೆ. ಮಗುವಿಗೆ ಓಪನ್ ಹಾರ್ಟ್ ಸರ್ಜರಿಯ ಅಗತ್ಯವಿದೆ. ಆದರೆ ಕೋವಿಡ್ 19 ವಿರುದ್ಧ ಲಸಿಕೆ ಹಾಕದ ದಾನಿಗಳ ರಕ್ತವನ್ನು ಮಾತ್ರ ಬಳಸಬೇಕು ಎಂದು ಪೋಷಕರು ಒತ್ತಾಯಿಸಿದ್ದರಿಂದ ಶಸ್ತ್ರ ಚಿಕಿತ್ಸೆ ವಿಳಂಬವಾಗಿತ್ತು. ಇದೀಗ ಶಸ್ತ್ರ ಚಿಕಿತ್ಸೆ ನಡೆದಿದ್ದು, ಮಗು ಸುರಕ್ಷಿತವಾಗಿದೆ, ಚೇತರಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರುವಾರ ನ್ಯಾಯಾಲಯವು ವೈದ್ಯರ ಕಾರ್ಯಕ್ಕೆ ಪೋಷಕರು ಅಡ್ಡಿಯಾಗಬಾರದು ಎಂದು ಸೂಚನೆ ನೀಡಿತ್ತು. ಹಾಗೆಯೇ ಕೊರೊನಾ ಲಸಿಕೆ ಕುರಿತ ತಪ್ಪು ತಿಳಿವಳಿಕೆಗಳನ್ನು ಸರಿ ಮಾಡಿ ಅರಿವು ಮೂಡಿಸುವ ಅಗತ್ಯವಿದೆ. ಲಸಿಕೆಯನ್ನು ಪಡೆದ ಜನರ ರಕ್ತದಲ್ಲಿ ಸ್ಪೈಕ್ ಪ್ರೋಟೀನ್ಗಳಿವೆ ಮತ್ತು ಈ ಪ್ರೋಟೀನ್ಗಳು ಸಾವುಗಳಿಗೆ ಕಾರಣವಾಗುತ್ತದೆ ಎಂದು ಪೋಷಕರು ನಂಬಿದ್ದರು.
ತಾವು ಸೂಚಿಸುವ ವ್ಯಕ್ತಿಗಳಿಂದಲೇ ನೀವು ರಕ್ತವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಇದಕ್ಕೆ ಆಸ್ಪತ್ರೆಯ ಆಡಳಿತ ನಿರಾಕರಿಸಿತ್ತು. ಲಸಿಕೆ ಹಾಕಿದ ಹಾಗೂ ಲಸಿಕೆ ಹಾಕದ ದಾನಿಗಳ ನಡುವೆ ರಕ್ತದಲ್ಲಿ ವ್ಯತ್ಯಾಸ ಇರುವುದಿಲ್ಲ ಎಂದು ಹೇಳಿದೆ.
ನ್ಯೂಜಿಲೆಂಡ್ನಲ್ಲಿ ಬಹುತೇಕ ಎಲ್ಲರೂ ಕೋವಿಡ್ ಲಸಿಕೆಗಳನ್ನು ಪಡೆದಿದ್ದಾರೆ, ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 12 ಅಥವಾ ಅದಕ್ಕಿಂತ ಹೆಚ್ಚಿನವರು ಶೇ.90ರಷ್ಟು ಕೋವಿಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದಿದ್ದಾರೆ. ಶೇ.70ರಷ್ಟು ಮಂದಿ ಮೊದಲ ಬೂಸ್ಟರ್ ಡೋಸ್ಗಳನ್ನು ಪಡೆದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ