
ಸೋರಿಯಾಸಿಸ್ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಚರ್ಮದ ಕಾಯಿಲೆಯಾಗಿದ್ದು, ಬಹಳಷ್ಟು ಜನರು ಇದನ್ನು ಸಾಧಾರಣ ಕಾಯಿಲೆ ಎಂದು ಭಾವಿಸುತ್ತಾರೆ. ಹಾಗಾಗಿ ಇದಕ್ಕೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಆದರೆ ಇದು ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಾಗ ಬರುವ ಚರ್ಮರೋಗ ಎಂಬುದು ನಿಮಗೆ ತಿಳಿದಿದೆಯೇ? ಸೋರಿಯಾಸಿಸ್ ಮಾರಣಾಂತಿಕವಲ್ಲ. ಆದರೆ ಇದರಿಂದ ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ಜಾಗೃತಿ ಮೂಡಿಸಲು ಅಕ್ಟೋಬರ್ 29 ರಂದು ವಿಶ್ವ ಸೋರಿಯಾಸಿಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದರಿಂದ ವ್ಯಕ್ತಿ ಈ ಸಮಸ್ಯೆ ಬಗ್ಗೆ ತಿಳಿದು ಮತ್ತಷ್ಟು ತೊಂದರೆ ಅನುಭವಿಸುವುದನ್ನು ತಡೆಯಬಹುದಾಗಿದೆ. ಸಾಮಾನ್ಯವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ರೋಗ ಕಣಗಳ ಮೇಲೆ ದಾಳಿ ನಡೆಸುವುದರಿಂದ ಸೋರಿಯಾಸಿಸ್ ಉಂಟಾಗುತ್ತದೆ. ಹಾಗಾದರೆ ಇದರ ಲಕ್ಷಣಗಳೇನು? ಯಾವ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮುಖ್ಯವಾಗಿ ಚರ್ಮದ ಮೇಲೆ ತುರಿಕೆಯಿಂದ ಕೂಡಿದ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೋರಿಯಾಸಿಸ್‌ನಲ್ಲಿ ಮೊದಲು ಚರ್ಮ ಇನ್‌ಫ್ಲಮೇಶನ್‌ಗೆ ಒಳಗಾಗುತ್ತದೆ. ಇದರಿಂದ ಚರ್ಮದ ಮೇಲಿನ ಪೊರೆ ಕೆಂಪು ಬಣ್ಣದಿಂದ ದದ್ದುಗಳ ರೂಪದಲ್ಲಿ ಕಳಚಿಕೊಳ್ಳುತ್ತದೆ. ಸಾಧಾರಣವಾಗಿ ತಂಪು ವಾತಾವರಣದಲ್ಲಿ ಈ ರೋಗ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಆರೋಗ್ಯವಂತ ಚರ್ಮವು ಕಾಲಕ್ರಮೇಣ ಉದುರುವುದರಿಂದ ಅದರ ಕೆಳಗೆ ಹೊಸ ಜೀವಕೋಶಗಳು ನಿರಂತರವಾಗಿ ಉತ್ಪತ್ತಿಯಾಗುತ್ತಿರುತ್ತವೆ. ಸುಮಾರು ಒಂದು ತಿಂಗಳ ಕಾಲ ಈ ಕಣಗಳು ಹೊರಗಡೆ ಸೇರಿಕೊಳ್ಳುತ್ತವೆ. ಈ ರೀತಿಯ ದೇಹದ ಪೊರೆಯಾಗಿ ಮಾರ್ಪಡುವ ಕಣಗಳು ಕ್ರಮೇಣ ನಿರ್ಜೀವವಾಗಿ ಉದುರಿ ಹೋಗುತ್ತವೆ. ಕೆಳಗಡೆ ಇರುವ ಕಣಗಳನ್ನು ಹೊಸ ಚರ್ಮ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ.
ಗಾತ್ರದಲ್ಲಿ ಬದಲಾಗಬಹುದಾದ ತುರಿಕೆ ಅಥವಾ ನೋವಿನ ಪ್ಲೇಕ್ ಗಳು
ದಪ್ಪವಾದ ಚರ್ಮ
ಸಣ್ಣ ಗುಳ್ಳೆಗಳು (ಕೀವು ಹೊಂದಿರುವ ಗುಳ್ಳೆಗಳು)
ಉಗುರುಗಳ ಕೆಳಗೆ ಬಣ್ಣ ಬದಲಾವಣೆ
ತುಂಡಾಗುವ ಅಥವಾ ಒರಟಾದ ಉಗುರುಗಳು
ಬಿಗಿಯಾದ, ಊದಿಕೊಂಡ, ಅಥವಾ ನೋವಿನ ಕೀಲುಗಳು
ಒಣಗಿದ, ಬಿರುಕು ಬಿಟ್ಟ ಚರ್ಮ ಅಥವಾ ಚರ್ಮದ ಅಲ್ಲಲ್ಲಿ ರಕ್ತಸ್ರಾವವಾಗುವುದು
ಇದನ್ನೂ ಓದಿ: ಮೆದುಳಿನ ಆರೋಗ್ಯ ಕಾಪಾಡಿಕೊಂಡು ಪಾರ್ಶ್ವವಾಯು ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ
ಅನುವಂಶೀಯ ಕಾರಣಗಳಿಂದ ಅಥವಾ ಮಾನಸಿಕ ಒತ್ತಡದಿಂದ ಈ ಕಾಯಿಲೆ ಬರುತ್ತದೆ. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಸಮತೋಲನ ಏರ್ಪಡುತ್ತದೆ. ಅಲ್ಲದೆ ಹಲವು ಬಗೆಯ ಔಷಧಗಳನ್ನು ದೀರ್ಘಕಾಲದ ವರೆಗೆ ಸೇವಿಸುವುದರಿಂದಲೂ ಸೋರಿಯಾಸಿಸ್ ಬರಬಹುದು.
ಸ್ಟ್ರೆಪ್ ಗಂಟಲು ಅಥವಾ ಚರ್ಮದ ಸೋಂಕುಗಳು
ಹವಾಮಾನ, ವಿಶೇಷವಾಗಿ ಶೀತ, ಶುಷ್ಕ ಪರಿಸ್ಥಿತಿಗಳು
ಕೀಟ ಕಡಿತ, ಅಥವಾ ತೀವ್ರವಾದ ಬಿಸಿಲಿನಿಂದ ಚರ್ಮಕ್ಕೆ ಗಾಯ
ಧೂಮಪಾನ ಮತ್ತು ಸೆಕೆಂಡ್ ಹ್ಯಾಂಡ್ ಹೊಗೆಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು
ಅತಿಯಾದ ಆಲ್ಕೋಹಾಲ್ ಸೇವನೆ
ಕೆಲವು ಔಷಧಿಗಳ ಸೇವನೆ
ಸೋರಿಯಾಸಿಸ್ ಗೆ ಚಿಕಿತ್ಸೆ;
ಕ್ರೀಮ್ ಗಳು ಅಥವಾ ಮುಲಾಮುಗಳು
ಮಾತ್ರೆಗಳು, ಚುಚ್ಚುಮದ್ದುಗಳು, ಅಥವಾ ಲಘು ಚಿಕಿತ್ಸೆ
ಮಾಯಿಶ್ಚರೈಸರ್ ಗಳು
ಚರ್ಮದ ಜೀವಕೋಶಗಳ ಉತ್ಪಾದನೆಯನ್ನು ನಿಧಾನಗೊಳಿಸಲು ಔಷಧಿಗಳು
ವಿಟಮಿನ್ ಡಿ 3 ಮುಲಾಮು
ವಿಟಮಿನ್ ಎ ಅಥವಾ ರೆಟಿನಾಯ್ಡ್ ಕ್ರೀಮ್ ಗಳು
ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಮೊದಲು ವೈದ್ಯರನ್ನು ಸಂಪರ್ಕಿಸಿ. ಸರಿಯಾದ ಮದ್ದನ್ನು ಪಡೆಯಿರಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ