ಮೊಳಕೆಯೊಡೆದ ಆಹಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ

Sprouts: ಮೊಳಕೆಯೊಡೆದ ಆಹಾರವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಲವು ರೋಗಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇವು, ದೇಹದ ಆರೋಗ್ಯವನ್ನು ಕಾಪಾಡುವಲ್ಲಿಯೂ ಬಹಳ ಸಹಾಯ ಮಾಡುತ್ತವೆ. ಈ ಕುರಿತು ಮಾಹಿತಿ ಇಲ್ಲಿದೆ.

ಮೊಳಕೆಯೊಡೆದ ಆಹಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Nov 28, 2021 | 8:35 AM

ಮೊಳಕೆಯೊಡೆದ ಆಹಾರವು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಉದ್ದೇಶದಿಂದ ಆಹಾರದಲ್ಲಿ ಬಳಕೆಯಾಗುತ್ತಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಇದನ್ನು ಮಧುಮೇಹವನ್ನು ತಡೆಗಟ್ಟಲು ಇರುವ ಆಹಾರವಾಗಿಯೂ ಬಳಸಲಾಗುತ್ತಿದೆ. ವಿಶೇಷವೆಂದರೆ, ಮೊಳಕೆಯೊಡೆದ ಆಹಾರಗಳನ್ನು ಹೆಚ್ಚಿನ ನಾಗರಿಕತೆಗಳು ಆಹಾರದ ಮೂಲವಾಗಿ ಗುರುತಿಸಿವೆ ಅಲ್ಲದೇ ಅದರ ಸುತ್ತಲೂ ಸಾಂಪ್ರದಾಯಿಕ ಪಾಕವಿಧಾನಗಳನ್ನು ರೂಪಿಸಿವೆ. ಭಾರತದಲ್ಲಿ, ಮೊಳಕೆಯೊಡೆದ ಆಹಾರವನ್ನು ಬೇಯಿಸಿದ (ಭಕ್ಷ್ಯಗಳು) ಅಥವಾ ಕಚ್ಚಾ (ಸಲಾಡ್ಗಳು) ಎರಡೂ ರೂಪದಲ್ಲೂ ಬಳಸಲಾಗುತ್ತದೆ. ಮೊಳಕೆಯೊಡೆದ ಆಹಾರ ಹಾಗೂ ಅದರ ವಿಶೇಷತೆಗಳು ಸಾಮಾನ್ಯ ಜನರಿಗೂ ತಿಳಿದಿವೆ. ಆದರೆ ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ಈ ಕುರಿತು ತಜ್ಞರ ಮಾತುಗಳು ಇಲ್ಲಿವೆ. ಮೊಳಕೆಯೊಡೆದ ಆಹಾರಗಳನ್ನು ಸೇವಿಸುವುದು ಜಾಗತಿಕವಾಗಿ ಎಲ್ಲೆಡೆ ಪ್ರಚಲಿತದಲ್ಲಿದೆ. ಬೀನ್ಸ್, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಧಾನ್ಯಗಳ ಬೀಜಗಳು ಮತ್ತು ತರಕಾರಿಗಳನ್ನು ಮೊಳಕೆಯೊಡೆಸಿ ಬಳಸಬಹುದು. ಅನೇಕ ಜನರು ಅಲ್ಫಾಲ್ಫಾ, ಕೋಸುಗಡ್ಡೆ, ಕ್ಲೋವರ್, ಗೋಧಿ ಗ್ರಾಸ್, ಸಂಪೂರ್ಣ ಬೀನ್ಸ್, ಕಡಲೆ ಬೀಜಗಳನ್ನು ಕೂಡ ನೆನೆಸಿ ಮೊಳಕೆಯೊಡೆದು ಬಳಸುತ್ತಾರೆ.

8-12 ಗಂಟೆಗಳ ಕಾಲ ನೆನೆಸಿಟ್ಟು, ಮೊಳಕೆ ಒಡೆಸಲಾಗುತ್ತದೆ. ನಂತರ ಅವುಗಳನ್ನು ಮೃದುವಾದ ಬಲದಿಂದ ಶುದ್ಧವಾದ ಹತ್ತಿ ಬಟ್ಟೆಯಲ್ಲಿ ಕಟ್ಟುವುದು (ಶುದ್ಧ ನೀರನ್ನು ಚಿಮುಕಿಸುವ ಮೂಲಕ ತೇವವಾಗಿಡಬಹುದು. ಮೊಳಕೆಯೊಡೆದ ಸಂದರ್ಭದಲ್ಲಿ ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತವೆ ಮತ್ತು ದೇಹವು ತಮ್ಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಕೆಲವರು ಧಾನ್ಯಗಳನ್ನು ನೆನೆಸಿದ ನೀರನ್ನು ಬದಲಾಯಿಸಲು ಇಷ್ಟಪಡುತ್ತಾರೆ. ವಾಸ್ತವವಾಗಿ ನೆನೆಸಿದ ಧಾನ್ಯಗಳನ್ನು ಪ್ರತಿ 8-12 ಗಂಟೆಗಳಿಗೊಮ್ಮೆ ತೊಳೆಯುವುದು ಉತ್ತಮ.

ಮೊಳಕೆಯೊಡೆಸುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಅಂದರೆ ಬ್ಯಾಕ್ಟೀರಿಯಾಗಳು ಮೊಳಕೆಯೊಡೆಯುವುದನ್ನು ಹಾನಿ ಮಾಡಬಹುದು. ಆದ್ದರಿಂದ ಆದಷ್ಟು ಸ್ವಚ್ಛವಾದ ವಾತಾವರಣ ಉಂಟಾಗುವಂತೆ ನೋಡಿಕೊಳ್ಳುವುದು ಉತ್ತಮ. ಅಲ್ಲದೇ ಮೊಳಕೆಯೊಡೆಸುವಾಗ ಕಳಪೆ ಧಾನ್ಯಗಳನ್ನು ಬಳಸಲೇಬೇಡಿ. ಒಂದು ವೇಳೆ ಮೊಳಕೆಯೊಡೆದವುಗಳನ್ನು ನೀವು ನೇರವಾಗಿ ಖರೀದಿಸುವುದಾದರೆ, ಪೋಷಕಾಂಶ ನಷ್ಟವಾದರೂ ಬೇಯಿಸಿ ತಿನ್ನುವುದು ಉತ್ತಮ. ಕಾರಣ, ಇದರಿಂದ ಕನಿಷ್ಠ ಮಾಲಿನ್ಯ ಭರಿತ ಆಹಾರ ದೇಹವನ್ನು ಸೇರುವುದು ತಪ್ಪುತ್ತದೆ. ಅಂದ ಹಾಗೆ ಈ ಮಾದರಿ ಭಾರತಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿ ಪ್ರಚಲಿತದಲ್ಲಿದೆ. ಕಾರಣ, ಅಲ್ಲಿನ ಜನರು ಹೆಚ್ಚಾಗಿ ಮೊಳಕೆಯೊಡೆದ ಆಹಾರವನ್ನು ನೇರವಾಗಿ ಖರೀದಿಸುತ್ತಾರೆ.

ಮೊಳಕೆಯೊಡೆದ ಆಹಾರ ದೇಹಕ್ಕೆ ಏನೆಲ್ಲಾ ಪ್ರಯೋಜನ ನೀಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ

  • ಹೃದಯದ ಆರೋಗ್ಯವನ್ನು ಉತ್ತಮವಾಗಿಸುತ್ತದೆ.
  • ಚರ್ಮದ ತ್ವಚೆಯನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಆಯಸ್ಸನ್ನೂ ವೃದ್ಧಿಸುತ್ತದೆ.
  • ತೂಕ ಕಡಿಮೆಗೊಳಿಸಲು ಮತ್ತು ತೂಕವನ್ನು ನಿರ್ವಹಿಸಲು ಪ್ರಯೋಜನಕಾರಿಯಾಗಿದೆ.
  • ಮಧುಮೇಹವನ್ನು ಹಿಮ್ಮೆಟ್ಟಸಿಲು ಸಹಕಾರಿಯಾಗಿದೆ.
  • ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸಹಕಾರಿ
  •  ಕರುಳಿನ ಚಟುವಟಿಕೆಯನ್ನು ಶಕ್ತಿಶಾಲಿಯಾಗಿಸುತ್ತದೆ.
  • ಉರಿಯೂತದ ವಿರುದ್ಧ ಸಹಕಾರಿ.
  • ಕ್ಯಾನ್ಸರ್​ ತಡೆಯಲೂ ಇದು ಸಹಕಾರಿಯಾಗಿದೆ.
  • ಆರೋಗ್ಯ ವೃದ್ಧಿಸಲು ಸಹಕಾರಿ.

(ವಿ.ಸೂ.: ಇಲ್ಲಿ ಪ್ರಸ್ತಾಪಿಸಲಾಗಿರುವ ವಿಚಾರಗಳು ಸಾಮಾನ್ಯ ಮಾಹಿತಿಗಳು. ನಿರ್ದಿಷ್ಟ ವಿಷಯದ ಕುರಿತು ನಿಮಗೆ ಗೊಂದಲ- ಅನುಮಾನಗಳಿದ್ದಲ್ಲಿ ಪರಿಣಿತ ವೈದ್ಯಕೀಯ ಸಲಹೆ ಪಡೆದುಕೊಳ್ಳಿ) 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್