ವಿಟಮಿನ್ ಬಿ 12 ನಮ್ಮ ದೇಹದ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾದವರಲ್ಲಿ ಗೊಂದಲ ಮತ್ತು ಮರೆವಿನ ಲಕ್ಷಣಗಳು ಸಾಮಾನ್ಯವಾಗಿರುತ್ತದೆ. ಅದಕ್ಕೆ ಕಾರಣ ವಿಟಮಿನ್ ಬಿ 12 ಕೊರತೆ. ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ 12 ಇರುವುದು ಅವಶ್ಯಕ. ಇದನ್ನು ಸೈನೊಕೊಬಾಲಾಮಿನ್, ಕೋಬಾಲಾಮಿನ್ ಎಂದೂ ಕೂಡ ಕರೆಯುತ್ತಾರೆ. ಈ ವಿಟಮಿನ್ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಇದರ ಸೇವನೆಯಿಂದ ನರಮಂಡಲದ ಕಾರ್ಯಚಟುವಟಿಕೆಯಲ್ಲಿ ಮೆದುಳು ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ದೇಹದಲ್ಲಿನ ಕೆಂಪು ರಕ್ತ ಕಣಗಳ ಉತ್ಪಾದನೆ, ಡಿಎನ್‌ಎ ಉತ್ಪಾದನೆ, ನಿಯಂತ್ರಣ ಮತ್ತು ಕೊಬ್ಬಿನಾಮ್ಲಗಳಿಗೆ ವಿಟಮಿನ್ ಬಿ 12 ಅವಶ್ಯಕವಾಗಿದೆ.
ವಿಟಮಿನ್ ಬಿ 12 ಉಪಯೋಗ
ನಮ್ಮ ನರಮಂಡಲವನ್ನು ಆರೋಗ್ಯವಾಗಿಡಲು ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬಿ 12 ಅವಶ್ಯಕ. ಇದರ ಕೊರತೆಯು ಸಣ್ಣ ಪ್ರಮಾಣದಲ್ಲಿ ಇದ್ದರೆ, ಅದು ಸ್ನಾಯು ದೌರ್ಬಲ್ಯ, ಆಲಸ್ಯ, ನಡುಕ, ಮೂತ್ರ ಸಮಸ್ಯೆ, ಕಡಿಮೆ ರಕ್ತದೊತ್ತಡ, ರೋಗಗ್ರಸ್ತತೆ ಮತ್ತು ಮರೆವಿಗೆ ಕಾರಣವಾಗಬಹುದು. ವಿಟಮಿನ್ ಬಿ 12ನ ಕೊರತೆ ತುಂಬಾ ತೀವ್ರವಾಗಿದ್ದರೆ, ಅದು ರಕ್ತಹೀನತೆಗೆ ಕಾರಣವಾಗಬಹುದು. ಎಲ್ಲಾ ಬಿ ಜೀವಸತ್ವಗಳಂತೆ ಬಿ 12 ನೀರಿನಲ್ಲಿ ಕರಗುತ್ತದೆ.
ಶೇಖರಣಾ ಪ್ರಮಾಣ ಕಡಿಮೆಯಿದ್ದರೆ ಬಿ 12 ಕೊರತೆ ಬಹಳ ಬೇಗನೆ ಸಂಭವಿಸುತ್ತದೆ. ಮಕ್ಕಳಲ್ಲಿ ಇದು ಮೊದಲು ಪರಿಣಾಮವನ್ನು ಬೀರುತ್ತದೆ. ವಿಟಮಿನ್ ಮಟ್ಟವನ್ನು ತಿಳಿಯಲು ರಕ್ತ ಪರೀಕ್ಷೆ ಮಾಡಬೇಕು. ವಿಟಮಿನ್ ಬಿ 12 ಕೊರತೆಯಿರುವ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಹಾರದಲ್ಲಿ ಬದಲಾವಣೆಗಳನ್ನು ಮಾಡಿದ ನಂತರ ಯಾವುದೇ ಬದಲಾವಣೆಗಳಿಲ್ಲದಿದ್ದರೆ, ವಿಟಮಿನ್ ಬಿ 12 ಕೊರತೆಯ ವೈದ್ಯಕೀಯ ಕಾರಣಗಳನ್ನು ಕಂಡುಹಿಡಿಯಲು ವೈದ್ಯರನ್ನು ಸಂಪರ್ಕಿಸಿ.
ಆಹಾರ ಪದ್ಧತಿಯಲ್ಲಿ ಬದಲಾವಣೆ
ಕೆಲವು ಆಹಾರವನ್ನು ಸೇವಿಸುವುದರಿಂದ ಜೀವಸತ್ವಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಲು, ಮೀನು, ಏಡಿಗಳು, ಸೋಯಾ ಉತ್ಪನ್ನಗಳು, ಚೀಸ್, ಮೊಟ್ಟೆ, ಕೆಂಪು ಮಾಂಸ, ಹಾಲು ಮತ್ತು ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್ ಬಿ 12 ಅಧಿಕವಾಗಿರುತ್ತದೆ ಮತ್ತು ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ.
ಇದನ್ನೂ ಓದಿ:
Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ
Mouth Ulcers: ಬಾಯಿ ಹುಣ್ಣಿನಿಂದ ಬಳಲುತ್ತಿದ್ದೀರಾ? ಈ ಸರಳ ವಿಧಾನವನ್ನು ಅನುಸರಿಸಿ ನೋವಿನಿಂದ ಮುಕ್ತಿ ಪಡೆಯಿರಿ