ಹಂದಿ ಜ್ವರ, ಸಾಮಾನ್ಯ ಜ್ವರ, ಕೋವಿಡ್ 19 ಹೇಗೆ ಒಂದಕ್ಕೊಂದು ಸುರುಳಿ ಸುತ್ತುಕೊಂಡಿವೆ?

ಗುಜರಾತ್​ನಲ್ಲಿ ಸಾಮಾನ್ಯ ಜ್ವರದಂತಹ ಪ್ರಕರಣಗಳು ವರದಿಯಾಗುತ್ತಿವೆ, ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಪತ್ತೆಯಾದ ಹಂದಿ ಜ್ವರ ಪ್ರಕರಣಗಳಿಗಿಂತ ಈ ವರ್ಷ ಶೇ.40ರಷ್ಟು ಹೆಚ್ಚಳ ಕಂಡುಬಂದಿದೆ.

ಹಂದಿ ಜ್ವರ, ಸಾಮಾನ್ಯ ಜ್ವರ, ಕೋವಿಡ್ 19 ಹೇಗೆ ಒಂದಕ್ಕೊಂದು ಸುರುಳಿ ಸುತ್ತುಕೊಂಡಿವೆ?
Fever
Follow us
TV9 Web
| Updated By: ನಯನಾ ರಾಜೀವ್

Updated on:Aug 12, 2022 | 11:30 AM

ಗುಜರಾತ್​ನಲ್ಲಿ ಸಾಮಾನ್ಯ ಜ್ವರದಂತಹ ಪ್ರಕರಣಗಳು ವರದಿಯಾಗುತ್ತಿವೆ, ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಪತ್ತೆಯಾದ ಹಂದಿ ಜ್ವರ ಪ್ರಕರಣಗಳಿಗಿಂತ ಈ ವರ್ಷ ಶೇ.40ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಹಂದಿ ಜ್ವರ ಮತ್ತು ಅಥವಾ ಸಾಮಾನ್ಯ ಜ್ವರದ ಪ್ರಕರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣ ಕೊಂಚ ಕಡಿಮೆಯಾಗಿತ್ತು.  ಆದರೆ ಈ ಬಾರಿ ಮತ್ತೆ ಪ್ರಕರಣಗಳ ಉಲ್ಬಣವನ್ನು ಕಾಣುತ್ತಿದ್ದೇವೆ ಎಂದು ಸ್ಟರ್ಲಿಂಗ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಮತ್ತು ಮುಖ್ಯ ಸಲಹೆಗಾರರಾದ ಡಾ. ಅತುಲ್ ಪಟೇಲ್ ಹೇಳಿದ್ದಾರೆ.

ಹಂದಿ ಜ್ವರವು ಪಕ್ಷಿಗಳು, ಹಂದಿಗಳು ಮತ್ತು ಮಾನವರಲ್ಲಿ ಇನ್ಫ್ಲುಯೆನ್ಸ ವೈರಸ್​ಗಳ ಮರುಸಂಯೋಜಕವಾಗಿದೆ. ಎರಡೂ ವೈರಸ್‌ಗಳು ಇರುವ ಕಾರಣ ನಾವು ಪ್ರಸ್ತುತ ಹಂದಿ ಜ್ವರ ರೋಗಿಗಳು ಮತ್ತು ಸೀಸನಲ್ ಇನ್ಫ್ಲುಯೆನ್ಸ ರೋಗಿಗಳನ್ನು ಕಾಣುತ್ತಿದ್ದೇವೆ. ಈ ಜ್ವರವು ಮೊದಲನೆಯದು ಚಳಿಗಾಲದಲ್ಲಿ ಮತ್ತು ಎರಡನೆಯದು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹಂದಿ ಜ್ವರ, ಸೀಸನಲ್ ಜ್ವರ ಹಾಗೂ ಕೋವಿಡ್ 19ನ ಆರಂಭಿಕ ಲಕ್ಷಣಗಳು ಒಂದೇ ರೀತಿಯಲ್ಲಿರುತ್ತವೆ.

ಹಾಗಾಗಿ ಸಾಮಾನ್ಯ ಜ್ವರವು ಈ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. US ಅಥವಾ ಯೂರೋಪ್‌ನಂತಹ ಸಮಶೀತೋಷ್ಣ ದೇಶಗಳಿಗೆ ಹೋಲಿಸಿದರೆ ಅಲ್ಲಿ ಚಳಿಗಾಲದಲ್ಲಿ ಮಾತ್ರ ಈ ರೋಗಗಳು ಕಾಣಿಸಿಕೊಳ್ಳುತ್ತದೆ.

ಇದೀಗ ನಾವು ಸಮಾನ ಸಂಖ್ಯೆಯ ಕೋವಿಡ್-19 ಮತ್ತು ಸಾಮಾನ್ಯ ಜ್ವರದ ರೋಗಿಗಳನ್ನು ನೋಡುತ್ತಿದ್ದೇವೆ. ವಾಸ್ತವವಾಗಿ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಸಾಮಾನ್ಯ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚು. ನಾವು ಕಟ್ಟುನಿಟ್ಟಾಗಿ ಮಾಸ್ಕ್​ ಧರಿಸದಿರುವುದು ಮತ್ತು ಕೈಗಳನ್ನು ಶುಚಿಗೊಳಿಸದಿರುವುದು ಇದಕ್ಕೆ ಕಾರಣವಾಗಿರಬಹುದು.

ಮೂರು ವೈರಸ್‌ಗಳಿಗೆ – ಇನ್ಫ್ಲುಯೆನ್ಸ A, B ಮತ್ತು ಹಂದಿ ಜ್ವರ – ಟ್ಯಾಮಿಫ್ಲು ಹೆಚ್ಚು ಪರಿಣಾಮಕಾರಿಯಾಗಿದೆ. ಇದಲ್ಲದೆ, ಈ ರೋಗಿಗಳಲ್ಲಿ ಹೆಚ್ಚಿನವರು ಆಂಟಿವೈರಲ್ ಔಷಧವನ್ನು ತೆಗೆದುಕೊಂಡ 48 ಗಂಟೆಗಳ ಒಳಗೆ ಪ್ರತಿಕ್ರಿಯಿಸುತ್ತಾರೆ.

ಪಿಸಿಆರ್ ಪರೀಕ್ಷೆ ಮೂಲಕ ಸಾಮಾನ್ಯ ಜ್ವರವೇ?, ಹಂದಿ ಜ್ವರವೇ ಅಥವಾ ಕೋವಿಡ್ 19 ಎಂಬುದನ್ನು ತಿಳಿಯಬಹುದು, ಆದರೂ ಈ ಮೂರು ಜ್ವರಗಳು ಒಂದಕ್ಕೊಂದು ಕೊಂಡಿಯಂತಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 12 August 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್