
ನಗು ಮುಖವು ಲಕ್ಷಣವನ್ನು ಹೆಚ್ಚಿಸುತ್ತದೆ, ಆದರೆ ಈ ನಗುವಿಗೆ ಹಲ್ಲುಗಳೇ (teeth) ಶೋಭೆ, ಈ ಹಲ್ಲುಗಳೇ ಹಳದಿ ಬಣ್ಣಕ್ಕೆ ತಿರುಗಿದ್ದರೆ ಮುಕ್ತವಾಗಿ ನಗುವುದಕ್ಕೂ ನಾಚಿಕೆ ಆಗುತ್ತದೆ. ಇದಕ್ಕೆ ಕಾರಣ ದಿನನಿತ್ಯ ಸೇವನೆ ಮಾಡುವ ಟೀ, ಕಾಫಿ. ಅದರಲ್ಲೂ ಧೂಮಪಾನ ವ್ಯಸನಿಗಳು ಟೀ, ಕಾಫಿ ಸೇವನೆ ಮಾಡಿಯೇ ಮಾಡುತ್ತಾರೆ. ಇದರಿಂದಾಗಿ, ಅವರ ಹಲ್ಲುಗಳು ಕಾಲಾನಂತರದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರ ಹೊರತಾಗಿ, ಹಳದಿ ಹಲ್ಲುಗಳು ನಿಮ್ಮ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಹಳದಿಗಟ್ಟಿದ ಹಲ್ಲುಗಳನ್ನು ಮತ್ತೊಮ್ಮೆ ಬಿಳಿ ಮತ್ತು ಹೊಳೆಯುವಂತೆ ಮಾಡಲು ಕೆಲವು ಸುಲಭ ಮಾರ್ಗಗಳು ಇಲ್ಲಿದೆ.
ಅಮೇರಿಕದಲ್ಲಿ ವೈದ್ಯರಾಗಿರುವ ಭಾರತೀಯ ಮೂಲದ ಡಾ. ಅನಿಲ್ ರಜನಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಹಲ್ಲುಗಳ ಹೊಳಪನ್ನು ಮರಳಿ ತರಲು ಮೂರು ಸುಲಭ ಮಾರ್ಗಗಳನ್ನು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿದರೆ, ಬಲು ಸುಲಭವಾಗಿ ತೂಕ ಇಳಿಸಬಹುದಂತೆ
ಕಾಫಿ ಕುಡಿದ ತಕ್ಷಣ ಹಲ್ಲುಜ್ಜುವುದು ಉತ್ತಮ ಎಂದು ಅನೇಕರು ಹೇಳಬಹುದು. ಆದರೆ ಇದು ತಪ್ಪು. ಕಾಫಿಯಲ್ಲಿರುವ ಆಮ್ಲವು ಹಲ್ಲಿನ ದಂತಕವಚವನ್ನು ಸ್ವಲ್ಪ ಸಮಯದವರೆಗೆ ಮೃದುಗೊಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣ ಹಲ್ಲುಜ್ಜುವುದರಿಂದ ದಂತಕವಚವು ಸವೆದುಹೋಗಬಹುದು ಹಾಗೂ ಇನ್ನಷ್ಟು ಕಲೆಯಾಗಬಹುದು. ಹಾಗಾಗಿ ಹೆಚ್ಚು ನೀರು ಕುಡಿಯಿರಿ, ಪ್ರತಿದಿನ ಫ್ಲಾಸ್ ಮಾಡಿ ಮತ್ತು ಕಾಲಕಾಲಕ್ಕೆ ದಂತವೈದ್ಯರಿಂದ ಶುಚಿಗೊಳಿಸಿ. ಈ ಮೂರು ಹಂತಗಳನ್ನು ಅಳವಡಿಸಿಕೊಂಡರೆ ಖಂಡಿತ ಹಲ್ಲುಗಳು ಬಿಳಿಯಾಗಿರುತ್ತದೆ ಎಂದು ಡಾ. ಅನಿಲ್ ರಜನಿ ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ