ಜ್ವರ ಬಂದಾಗ ಕಾಫಿ ಕುಡಿಯಬಾರದು ಏಕೆ? ಈ ಬಗ್ಗೆ ತಜ್ಞರು ಹೇಳೋದೇನು?

ಜ್ವರ ಬಂದಾಗ ಹೆಚ್ಚಿನವರು ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಕಾಫಿ ಅಥವಾ ಟೀ ಕುಡಿದ್ರೆ ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆನೋ ನಿಜ. ಆದರೆ ಈ ಸಮಯದಲ್ಲಿ ಕಾಫಿ ಕುಡಿಯುವುದನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಜ್ವರ ಬಂದಾಗ ಕಾಫಿ ಕುಡಿಯಬಾರದು ಏಕೆ? ಈ ಬಗ್ಗೆ ತಜ್ಞರು ನೀಡುವ ಸಲಹೆಗಳ ಬಗ್ಗೆ ತಿಳಿದುಕೊಳ್ಳಿ.

ಜ್ವರ ಬಂದಾಗ ಕಾಫಿ ಕುಡಿಯಬಾರದು ಏಕೆ? ಈ ಬಗ್ಗೆ ತಜ್ಞರು ಹೇಳೋದೇನು?
ಕಾಫಿ
Image Credit source: Olena Malik/Moment/Getty Images

Updated on: Sep 08, 2025 | 5:26 PM

ಬದಲಾಗುತ್ತಿರುವ ಹವಾಮಾನದಿಂದಾಗಿ ಋತುಮಾನದ ರೋಗಗಳ ಅಪಾಯವು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚಿನವರಲ್ಲಿ ಜ್ವರ (fever) ಶೀತದಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜ್ವರ ಬಂದಾಗ ಸಹಜವಾಗಿ ಏನು ತಿನ್ನೋದಕ್ಕೆ ಆಗಲ್ಲ, ಹೀಗಾಗಿ ಈ ಸಮಯದಲ್ಲಿ ಚಹಾ ಕಾಫಿ ಮಾಡಬೇಕೆಂದು ಅನಿಸುವುದು ಸಹಜ. ಆದರೆ ಹೆಚ್ಚಿನವರು ಕಾಫಿ ಹಾಗೂ ಟೀ (coffee and tea) ಸೇವನೆ ಮಾಡಿ ಸ್ವಲ್ಪ ರಿಲ್ಯಾಕ್ಸ್ ಆಗಿಸಿಕೊಳ್ಳುತ್ತಾರೆ. ಆದರೆ ತಜ್ಞರು ಜ್ವರವಿದ್ದಾಗ ಕಾಫಿಯಲ್ಲಿರುವ ಕೆಫೀನ್ ಅಂಶ ಹೆಚ್ಚಾಗಿ ಇರುವ ಕಾರಣ ಕಾಫಿ ಸೇವನೆ ತ್ಯಜಿಸುವುದು ಉತ್ತಮ ಎನ್ನುವ ಸಲಹೆ ನೀಡುತ್ತಾರೆ. ಹಾಗಾದ್ರೆ ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಜ್ವರವಿದ್ದಾಗ ಕಾಫಿ ಸೇವನೆ ಒಳ್ಳೆಯದಲ್ಲ ಏಕೆ?

ಜ್ವರ ಬಂದಾಗ ದೇಹವು ಸಹಜವಾಗಿ ಆಯಾಸಗೊಳ್ಳುತ್ತದೆ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಅಗತ್ಯವಾಗಿ ಬೇಕು. ಈ ಸಮಯದಲ್ಲಿ ನೀವೇನಾದ್ರೂ ಕಾಫಿ ಸೇವನೆ ಮಾಡಿದ್ರೆ ಇದರಲ್ಲಿರುವ ಕೆಫೀನ್ ಅಂಶವು ದೇಹವನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಆದರೆ ಕಾಫಿ ಟೀ ಸೇರಿದಂತೆ ಸೇರಿದಂತೆ ಪಾನೀಯಗಳ ಸೇವನೆಯೂ ನಿಮ್ಮ ದೇಹವು ವಿರುದ್ಧವಾಗಿ ಪ್ರತಿಕ್ರಿಯಿಸಬಹುದು.

ಇದನ್ನೂ ಓದಿ
ದೇಹ, ಮನಸ್ಸು ಆಕ್ಟಿವ್‌ ಆಗಿರಲು ಟೀ-ಕಾಫಿ ಬದಲು ಈ ಪಾನೀಯಗಳನ್ನು ಸೇವಿಸಿ
ನಾರ್ಮಲ್‌ ಟೀ ಬದಲು ಗುಲಾಬಿ ಚಹಾ ಕುಡಿಯಿರಿ, ಹಲವು ಪ್ರಯೋಜನ ಪಡೆಯಿರಿ
ಕಾಫಿ ಕುಡಿಯುತ್ತಾ ಈ ಆಹಾರಗಳ ಸೇವನೆ ಮಾಡುತ್ತೀರಾ?
ಹಲ್ಲುಜ್ಜಿದ ತಕ್ಷಣ ನೀರು ಕುಡಿಯಬಾರದು! ಇದರ ಹಿಂದಿದೆ ಗಂಭೀರ ಕಾರಣ

ಇನ್ನು ಈ ಕಾಫಿಯಲ್ಲಿರುವ ಕೆಫೀನ್ ನಿಮಗೆ ನಿದ್ರೆ ಮಾಡಲು ಸಹಾಯ ಮಾಡುವುದಿಲ್ಲ. ಇದು ದೇಹದಲ್ಲಿ ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಆದರೆ ಆರೋಗ್ಯ ಹದಗೆಟ್ಟಾಗ ನೀರಿನಂಶವನ್ನು ಕಾಯ್ದುಕೊಳ್ಳುವುದು ಮುಖ್ಯ. ಆದರೆ ಈ ಕಾಫಿ ಸೇವನೆ ಹೆಚ್ಚು ಮೂತ್ರ ವಿಸರ್ಜನೆ ಮಾಡುವಂತೆ ಮಾಡಬಹುದು. ಈ ಕಾರಣದಿಂದ ಈ ಸಮಯದಲ್ಲಿ ಕಾಫಿ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ.

ಇದನ್ನೂ ಓದಿ: ದೇಹ, ಮನಸ್ಸು ಆಕ್ಟಿವ್‌ ಆಗಿರಲು ಟೀ-ಕಾಫಿ ಬದಲು ಈ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ

ಹೀಗಾಗಿ ಜ್ವರ ಬಂದ ಸಂದರ್ಭದಲ್ಲಿ ವಿಶ್ರಾಂತಿಯೊಂದಿಗೆ ನಿದ್ರೆಯನ್ನು ಉತ್ತೇಜಿಸುವ ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ, ಬೆಚ್ಚಗಿನ ನೀರು ಅಥವಾ ಗಂಜಿ ಕುಡಿಯುವ ಅಭ್ಯಾಸವಿರಲಿ. ಕೆಫೀನ್ ಅಂಶ ಹೊಂದಿರುವ ಪಾನೀಯಗಳ ಸೇವನೆ ಆದಷ್ಟು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Mon, 8 September 25