Health Tips: ಊಟದ ಕೊನೆಯಲ್ಲಿ ಮೊಸರನ್ನ ಸೇವನೆ ಮಾಡಲು ಕಾರಣವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2025 | 12:20 PM

ಊಟದಲ್ಲಿ ಮೊಸರು ಇರಲೇಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಕೆಲವರು ಮೊಸರು ಸೇವನೆ ಮಾಡಲು ಇಷ್ಟಪಡುವುದಿಲ್ಲ. ಹಾಗಾದರೆ ಇದು ನಮ್ಮ ದೇಹಕ್ಕೆ ಒಳ್ಳೆಯದೋ? ಅಲ್ಲವೋ? ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Health Tips: ಊಟದ ಕೊನೆಯಲ್ಲಿ ಮೊಸರನ್ನ ಸೇವನೆ ಮಾಡಲು ಕಾರಣವೇನು?
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ಕರ್ನಾಟಕದ ಕೆಲವು ಭಾಗದಲ್ಲಿ ಕೊನೆಯಲ್ಲಿ ಮೊಸರನ್ನ ಊಟ ಮಾಡುವ ಪದ್ಧತಿ ಈಗಲೂ ರೂಢಿಯಲ್ಲಿದೆ. ಇದನ್ನು ಹಲವಾರು ಮಂದಿ ಪಾಲನೆ ಮಾಡದಿರಬಹುದು ಆದರೆ ಇದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಕೆಲವರಿಗೆ ಮೊಸರು (Yogurt ) ಅಥವಾ ಹಾಲಿನಿಂದ ತಯಾರಾದಂತಹ ಪದಾರ್ಥಗಳ ಸೇವನೆ ಮಾಡುವುದು ಇಷ್ಟವಾಗುವುದಿಲ್ಲ. ಅದು ಅವರವರ ಇಷ್ಟಕ್ಕೆ ಸಂಬಂಧಿಸಿರುತ್ತದೆ. ಆದರೆ ಇಂತವರ ಹೊರತಾಗಿ ಮೊಸರು ಸೇವನೆ ಮಾಡಲು ಇಷ್ಟವಿರುವವರು ಊಟದ ಕೊನೆಯಲ್ಲಿ ಮೊಸರನ್ನ ಅಥವಾ ಮೊಸರನ್ನು ಸ್ವಲ್ಪವಾದರೂ ಸೇವನೆ ಮಾಡಬೇಕು ಇವು ನಿಮಗೆ ತಿಳಿಯದಂತಹ ಹಲವಾರು ರೀತಿಯ ಆರೋಗ್ಯ (Health) ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಊಟ ಮುಗಿಯುವ ಹಂತದಲ್ಲಿ ಮೊಸರನ್ನು ಏಕೆ ತಿನ್ನಬೇಕು? ಇದರಿಂದ ಸಿಗುವ ಉಪಯೋಗವೇನು ತಿಳಿದುಕೊಳ್ಳಿ.

ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸುತ್ತದೆ;

ಸಾಮಾನ್ಯವಾಗಿ ನಿಮಗೆ ತಿಳಿದಿರಬಹುದು, ಮೊಸರು ಉತ್ತಮ ಬ್ಯಾಕ್ಟೀರಿಯಾದ ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ. ಅವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತವೆ. ನಮ್ಮ ಊಟದಲ್ಲಿ ಮಸಾಲೆಗಳು ಹೆಚ್ಚಿದ್ದಾಗ ಕೊನೆಯಲ್ಲಿ ಮೊಸರನ್ನು ಸೇವನೆ ಮಾಡಿದಾಗ ಹೊಟ್ಟೆ ತಣ್ಣಗಾಗುತ್ತದೆ. ಆಯುರ್ವೇದದ ಪ್ರಕಾರ, ಮೊಸರನ್ನ ನಮ್ಮ ದೇಹದಲ್ಲಿನ ತ್ರಿದೋಷವಾದ ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸುತ್ತದೆ. ಇವುಗಳಲ್ಲಿ ಒಂದು ಹೆಚ್ಚು, ಕಡಿಮೆಯಾದರೂ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ ಹಾಗಾಗಿ ಊಟದಲ್ಲಿ ಕೊನೆಯಲ್ಲಿ ಮೊಸರನ್ನವನ್ನು ತಪ್ಪದೆ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ.

ಊಟದ ಕೊನೆಯಲ್ಲಿ ಮೊಸರನ್ನು ಸೇವನೆ ಮಾಡದಿದ್ದರೆ ತಕ್ಷಣಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಕಂಡು ಬರುವುದಿಲ್ಲ ಬದಲಾಗಿ ದೀರ್ಘಾವಧಿಯಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಪಾಯವಿದೆ. ನೀವು ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡಿದ ನಂತರ ಆಮ್ಲೀಯತೆ, ಉರಿಯೂತ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉದ್ಭವಿಸಬಹುದು. ಇದನ್ನು ತಡೆಯಲು ಮೊಸರು ನಿಮಗೆ ನೆರವಾಗುತ್ತದೆ. ಇದಲ್ಲದೆ, ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಅದನ್ನು ಸಂಪೂರ್ಣವಾಗಿ ತಿನ್ನುವುದನ್ನು ನಿಲ್ಲಿಸಿದಾಗ, ರೋಗಗಳನ್ನು ಬರದಂತೆ ತಡೆಯುವ ನಿಮ್ಮ ದೇಹ ಸಾಮರ್ಥ್ಯವು ಕ್ರಮೇಣ ದುರ್ಬಲಗೊಳ್ಳುತ್ತದೆ.

ಇದನ್ನೂ ಓದಿ
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಎಷ್ಟು ಪ್ರಮಾಣದಲ್ಲಿ ಮೊಸರು ಸೇವನೆ ಮಾಡಬೇಕು?

ಆರೋಗ್ಯ ತಜ್ಞರ ಪ್ರಕಾರ. ದಿನಕ್ಕೆ ಸರಿಸುಮಾರು 100- 150 ಗ್ರಾಂ ಮೊಸರು ಸೇವಿಸುವುದು ಒಳ್ಳೆಯದು. ಆದರೆ ನೀವು ಶೀತ ಪ್ರಕೃತಿಯವರಾದರೆ ಮೊಸರು ಸೇವನೆ ಮಾಡಿದಾಗ ಗಂಟಲು ನೋವು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಅಂತವರು 50- 75 ಗ್ರಾಂಗಿಂತ ಹೆಚ್ಚು ಪ್ರಮಾಣದಲ್ಲಿ ಮೊಸರಿನ ಸೇವನೆ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಆರೋಗ್ಯವೇ ಭಾಗ್ಯ; ಆರೋಗ್ಯವಂತರಾಗಿರಲು ಪ್ರತಿನಿತ್ಯ ನೀವು ಅನುಸರಿಸಲೇಬೇಕಾದ ಪ್ರಮುಖ ವಿಷಯಗಳಿವು

ಈ ತಪ್ಪುಗಳನ್ನು ಮಾಡಬೇಡಿ

ಕೆಲವರು ಮೊಸರನ್ನು ಅತಿಯಾಗಿ ಸೇವನೆ ಮಾಡುತ್ತಾರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರೀತಿಯ ಅಭ್ಯಾಸ ಆಮ್ಲೀಯತೆಗೆ ಕಾರಣವಾಗಬಹುದು. ಇನ್ನು ಕೆಲವರು ಮೊಸರನ್ನು ಮಾಂಸಾಹಾರದೊಂದಿಗೆ ಸೇವಿಸುತ್ತಾರೆ. ಇದು ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡು ನಿಮಗಿಷ್ಟವಾದ ರೀತಿಯಲ್ಲಿ ಸೇವನೆ ಮಾಡುವುದು ಒಳ್ಳೆಯದಲ್ಲ. ಮೊಸರನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದಾಗ ಮಾತ್ರ ಆರೋಗ್ಯ ಪ್ರಯೋಜನಗಳು ಸಿಗಲು ಸಾಧ್ಯವಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಅರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ