Winter Health: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಈ 6 ನಟ್ಸ್​ ಸೇವಿಸಿ

ಚಳಿಗಾಲದಲ್ಲಿ ಕೆಲವು ನಟ್ಸ್​ಗಳನ್ನು ತಿನ್ನುವುದರಿಂದ ನಿಮ್ಮ ದೇಹ ಬೆಚ್ಚಗಿರುತ್ತದೆ ಮತ್ತು ಉತ್ತಮ ಪೋಷಣೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಟ್ಸ್​ ನಿಮಗೆ ಶಕ್ತಿ ಮತ್ತು ಉಷ್ಣತೆಯನ್ನು ಒದಗಿಸುವ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುತ್ತವೆ.

Winter Health: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಈ 6 ನಟ್ಸ್​ ಸೇವಿಸಿ
ನಟ್ಸ್Image Credit source: iStock
Follow us
ಸುಷ್ಮಾ ಚಕ್ರೆ
|

Updated on:Oct 21, 2023 | 5:07 PM

ಚಳಿಗಾಲದಲ್ಲಿ ನಮ್ಮ ತ್ವಚೆಯ ಆರೋಗ್ಯದ ಬಗ್ಗೆ ಗಮನ ಹರಿಸುವುದು ತುಂಬ ಅಗತ್ಯ. ಚಳಿಗಾಲದಲ್ಲಿ ನಮ್ಮ ದೇಹವು ಶಕ್ತಿಯ ಮಟ್ಟಗಳು, ಚಯಾಪಚಯ ಕ್ರಿಯೆ ಮತ್ತು ಆಹಾರದ ಆದ್ಯತೆಗಳಲ್ಲಿ ಬದಲಾವಣೆಗಳನ್ನು ಅನುಭವಿಸುತ್ತದೆ. ಆದ್ದರಿಂದ, ನಟ್ಸ್​ ಮತ್ತು ಸೀಡ್ಸ್​ಗಳನ್ನು ಹೆಚ್ಚು ಬಳಸಿ ಅನಾರೋಗ್ಯಕರ ಜಂಕ್ ಫುಡ್ ಅನ್ನು ಕಡಿಮೆ ಮಾಡುವುದು ಅತ್ಯಗತ್ಯ.

ಚಳಿಗಾಲದಲ್ಲಿ ಕೆಲವು ನಟ್ಸ್​ಗಳನ್ನು ತಿನ್ನುವುದರಿಂದ ನಿಮ್ಮ ದೇಹ ಬೆಚ್ಚಗಿರುತ್ತದೆ ಮತ್ತು ಉತ್ತಮ ಪೋಷಣೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಟ್ಸ್​ ನಿಮಗೆ ಶಕ್ತಿ ಮತ್ತು ಉಷ್ಣತೆಯನ್ನು ಒದಗಿಸುವ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುತ್ತವೆ. ನೀವು ಬೆಚ್ಚಗಾಗಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡಲು ಸೇವಿಸಬಹುದಾದ ನಟ್ಸ್​ಗಳು ಇಲ್ಲಿವೆ…

ಇದನ್ನೂ ಓದಿ: ದೇಹದ ಬೊಜ್ಜು ನೀವು ತಂದೆಯಾಗುವ ಅವಕಾಶವನ್ನೇ ಕಿತ್ತುಕೊಂಡೀತು ಎಚ್ಚರ!

ಬಾದಾಮಿ:

ಬಾದಾಮಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ. ಇದು ವಿಟಮಿನ್ ಇ ಅನ್ನು ಸಹ ಹೊಂದಿರುತ್ತವೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.

ವಾಲ್​ನಟ್ಸ್:

ವಾಲ್​ನಟ್ಸ್​ನಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಇದು ರಕ್ತಸಂಚಲನವನ್ನು ಸುಧಾರಿಸಲು ಮತ್ತು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇವು ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಫೈಬರ್ ಅನ್ನು ಸಹ ಒದಗಿಸುತ್ತವೆ.

ಗೋಡಂಬಿ:

ಗೋಡಂಬಿಯಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಸಹ ಇದೆ. ಇದು ನಿಮ್ಮ ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಸ್ನಾಯುವಿನ ಕಾರ್ಯವನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: ವಾಲ್‌ನಟ್ಸ್​​​​ನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ

ಬ್ರೆಜಿಲ್ ಸೀಡ್ಸ್:

ಬ್ರೆಜಿಲ್ ಸೀಡ್ಸ್​ಗಳಲ್ಲಿ ಸೆಲೆನಿಯಮ್ ಅಧಿಕವಾಗಿದೆ. ಇದು ಥೈರಾಯ್ಡ್ ಕಾರ್ಯವನ್ನು ಬೆಂಬಲಿಸುವ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪಿಸ್ತಾ:

ಪಿಸ್ತಾಗಳು ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಬಿ 6 ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇದು ದೇಹಕ್ಕೆ ಚಳಿಗಾಲದ ಸಮಯದಲ್ಲಿ ಶಕ್ತಿ ಮತ್ತು ಉಷ್ಣತೆಯನ್ನು ನೀಡುತ್ತದೆ.

ಹ್ಯಾಝೆಲ್ನಟ್ಸ್:

ಹ್ಯಾಝೆಲ್ನಟ್ಸ್ ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sat, 21 October 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ